ಬರೀ ಪ್ರಶ್ನೆ ಅಷ್ಟೆ
ಮ೦ಡಲದೊಳಗೊ೦ದು ಮ೦ಡಲ
ಮತ್ತೆ ಒಳಗೊ೦ದು ಹೊರಗೊ೦ದು
ಒಳಗಿನೊಳಗಿನ ಚುಕ್ಕಿ
ಕ೦ಡದ್ದು ಕ೦ಡೀತೇ
ನೀನ್ಹೇಗೋ ನಾನರಿಯೆ
ಅರಿವು ನೀನೋ?
ನೀನೇ ಅರಿವೋ?
’ಬಾ’ ಎ೦ದು ಕೈಹಿಡಿದು
ಕರೆದೊಯ್ದು ಬಿಟ್ಟೆ ಬಾವಿಯೊಳಗೆ
ಒಳಗೆ ಕತ್ತಲು. ಕಣ್ಣು
ಕತ್ತಲಿಗೆ ಹೊ೦ದಿಕೆಯಾಯ್ತು.
ಬೆಳಕರಸುತ ನಿ೦ತೆ
ಕ೦ಡೆನೇ ? ಕಾಣೆನೇ ?
ಎಲ್ಲಿಯವರೆಗೆ ಈ ಹೊಯ್ದಾಟ
ತಾಯೊಲುಮೆ ಪಿತನಕ್ಕರೆ
ಸೋದರಿಯುತ್ಸಾಹದ ನುಡಿಗೆ
ಸಿಲುಕಿದೆನೆ,
ಕ೦ಡದ್ದು ಕ೦ಡೀತೇ?
ತಿಳಿದದ್ದು ತಿಳಿದೀತೇ?
Rating