ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!! (ಒಮ್ಮೊಮ್ಮೆ ಹೀಗೂ ಆಗುವುದು-ಯಾವುದಕ್ಕೂ ನಾವ್ ತಯಾರ್ ಇರೋದು ಒಳ್ಳೇದು)??

ಬೀ ಎಂ ಟೀ ಸೀ ಬಸ್ಸಲ್ಲಿ ಇವತ್ತು ಹೀಗಾಯ್ತು!! (ಒಮ್ಮೊಮ್ಮೆ ಹೀಗೂ ಆಗುವುದು-ಯಾವುದಕ್ಕೂ ನಾವ್ ತಯಾರ್ ಇರೋದು ಒಳ್ಳೇದು)??

 

 

ಇವತ್ತು ಲೇಟ್ ಆಗೇ ಎದ್ದು (ರಾತ್ರಿ ಲೇಟ್ ಆಗ್ ಮಲಗಿ!!) ತರಾತುರಿಯಲ್ಲಿ ತಯಾರಾಗಿ  ಬಸ್ಸು ಸ್ಟಾಪ್ ಗೆ ಬಂದು ಮೆಜೆಸ್ಟಿಕ್ ಗೆ ಇಳಿದು  ಎದ್ದೋ ಬಿದ್ದೋ ಅಂತ  ಕೋರಮಂಗಲ ಬಸ್ಸು ಹಿಡಿದು ಕುಳಿತೆ(ಜೀ -೨- ಕೇ-೨ ತರಹದ್ದು- ಇವತು ಬೇರೆ ಬಸ್ಸು ಇಲ್ಲದೇ 'ಅದನ್ನು' ಬಿಟ್ಟಿದ್ದರು)...

ಹೌದು ನಿಮ್ಮ ಊಹೆ ನಿಜ..!!

ನನಗೆ ಸೀಟು ಸಿಕ್ಕಿತ್ತು- ಸುಮ್ಮನೇ ಸಿಗುತ್ತೆಯೇ?

ಸಾಹಸ ಮಾಡಿದ್ದೆ ಎನ್ನಿ..:())

ನಿರ್ವಾಹಕ ಬಂದಾಗ ಪಾಸು ತೋರಿಸಿ ಇನ್ನೂ ನನ್ನ  ಕರ್ತವ್ಯ ಆಯ್ತು ಸ್ವಲ್ಪ ಕಣ್ಣು ಮುಚ್ಚಿ ಮಲಗುವ ಅಂತ ಹಾಗೆ ಸೀಟಿಗೆ ಒರಗಿದೆ..

ಬಸ್ಸು ಮೆಲ್ಲಗೆ ಹೋಗೋದು ಯಾಕೋ 'ಅಪಶಕುನ' ಅನಿಸಿತು..:(((

ರೇಸ್ ಕೋರ್ಸ್ ಸಮೀಪವೇ ಬಸ್ಸು ಕೊಂಚ ಹೊತ್ತು ನಿಂತಾಗ  ಹೆಂಗೂ ದಿನವೂ ಅಲ್ಲಿ ಚಾಲಕ ನಿರ್ವಾಹಕರು ನೀರು ತುಂಬಿಸಿಕೊಳ್ಳುವರು ಎಂದು ಹಾಗೆ ಕಣ್ಣು ಮುಚ್ಚಿದೆ. ಹತ್ತು ನಿಮಿಷದ ನಂತರ ಬಸ್ಸು ಮತ್ತೆ 'ಆಮೆ ಓಟ' ಶುರು ಹಚ್ಚಿಕೊಂಡಿತು,ಮೊದಲೇ ಬೇಸಿಗೆ ಬೇರೆ ಬಸ್ಸು  ವೇಗವಾಗಿ ಹೋದರೆ ಗಾಳಿ ಒಳಗೆ ಬರೋದು ಕಸ್ಟ, ಇನ್ನೂ ಈ ಆಮೆ ಓಟದ ವೇಗಕ್ಕೆ ಗಾಳಿ ಬೀಸೀತೇ?

ಮೈ ಎಲ್ಲ ಜಲಧರಿಸಿ ಎದ್ದು ಕೂತೆ..

ಬಸ್ಸು ಕಾರ್ಪೋರೇಷನ್ ಸರ್ಕಲ್ ದಾಟಿ ಮಿಷನ್ ರೋಡ್ ಬಸ್ ಸ್ಟಾಫ್‌ಗೆ  ಬಂದು ಅಲ್ಲಿಂದ ಮುಂದಿನ ಸಿಗ್ನಲ್ ಹತ್ತಿರ ಗಕ್ಕನೆ ಬೇಕ್ ಹಾಕಿ ನಿಂತಿತು....

ಹಿಂದೆಯೇ ಹಾಹಾಕಾರ....!!????

 

ಅರೆ ಬರೆ ನಿದ್ದೆಯಲ್ಲಿದ್ದ ಒಂಥರ 'ನಿಸ್ತೇಜನಾಗಿದ್ದ' ನನಗೆ ಈ ಹಾಹಾಕಾರ -ಕೇಕೆ -ಅಳು ಎಲ್ಲವೂ ಭಯಂಕರವಾಗಿ ಕಿವಿಗೆ ಬಿದ್ದು ಏನೋ ಆಗಬಾರದ್ದು ಆಗಿದೆ-ಆಗುತ್ತಿದೆ ಅಂತ ಎದ್ದು ಮೈಗೆ ಮನಸಿಗೆ ಎಲ್ಲಿಲ್ಲಿದ ಶಕ್ತಿ ತುಂಬಿಕೊಂಡು 'ನವ ಚೈತನ್ಯ' ಹೊಂದಿ ಪಕ್ಕದಲ್ಲಿದ್ದವರಿಗೆ(ಆಗಲೇ ಅವರು ಬಸ್ಸಿಂದ ಕಿಟಕಿ ಮೂಲಕ ಹಾರಲು ರೆಡಿ)

ಕೇಳಿದೆ ಏನಾಯ್ತು?

ಯಾಕೆ ಜನ ಎಲ್ಲ ಕೂಗಾಡ್ತಾವ್ರೆ?

ಆಲ್ತವ್ರೆ?

ಕಿರುಚುತ್ತವರೇ?

ಅವನು ಬಸ್ಸಿನ ಮಧ್ಯದ ಬಾಗಿಲ ಹತ್ತಿರ ತೋರಿಸಿದ ಅಲ್ಲಿ ೫-೬ ಜನ ತಳ್ಲಾಡುತ್ತಿದ್ದರು ಬಾಗಿಲು ಓಪನ್ ಮಾಡಿ ಮಾಡಿ ಅಂತ ಬಾಗಿಲು ಹೊಡೆಯುತ್ತಿದ್ದರು- ನನಗೆ ಅನ್ನಿಸಿತು ಬಹುಶ ಯಾರೋ ಹತ್ತುವವರು - ಇಳಿಯುವರು ಬಾಗಿಲ ಮಧ್ಯೆ ಸಿಕ್ಕಿರಬೇಕು...!

 



ಅಸ್ತರಲ್ಲಿ ಹೊಗೆ ವಾಸನೆ ಎಲ್ಲಾಊ ಬಸ್ಸು ವ್ಯಾಪಿಸಿ ಮನ ಏನೋ ಕೇಡು ಶಂಕಿಸಿ ಮುಂದೆ ನೋಡಿದರೆ  ಏನು ಕಾಣಿಸುತ್ತಿದೆ???

ಬರೀ ಹೊಗೆ ವಾಸನೆ, ಎಲ್ರೂ ಒಬ್ಬರನ್ನೋಬರು ತುಳಿದುಕೊಂಡು ತಳ್ಲಾಡಿಕೊಂಡು(ಮಕ್ಕಳು- ಹೆಂಗಸರು-ವಯಸ್ಸಾದ ಹಿರಿಯ ನಾಗರೀಕರು ಏನೊಂದೂ ನೋಡದೇ) ಇದ್ದ ಒಂದು ಮದ್ಯದ ಬಾಗಿಲ ಕಡೆಗೆ ಓಡುತ್ತಿದ್ದರು..

ಮುಂದೆ ಒಂದು ಬಾಗಿಲು ಇದ್ದರೂ ಅಲ್ಲಿ ಹೋಗಲು ಏನೂ ಕಾಣಿಸುತ್ತಿಲ್ಲ...!!

ನನಗೆ ತಕ್ಷಣ ಅನ್ನಿಸಿದ್ದು ಬಸ್ಸಿಗೆ ಬೆಂಕಿ ಹತ್ತಿರಬೇಕು..!

ಮೊದಲೇ ಬಿಸಿಲು ಕಾಲ .....

ಛೇ ಛೇ..!!

ಅಸ್ತರಲ್ಲಿ ಈ ಬಸ್ಸಿನವರ ಹಾಹಾಕರ ಕೇಳಿ ಆ ರಸ್ತೆಯಲ್ಲಿ ಜನ ಜಮಾಯಿಸಿದ್ದರಲ್ಲ, ಅವರಲ್ಲಿ ಒಬ್ಬ ಬಾಂಬ್ ಇಕ್ಕಿರಬಹುದಾ? ಎಂದು ಬಿಟ್ಟ...!

ನಾನೊ ಕೊನೆಯ ಸೀಟ್ನಲ್ಲಿ ಕುಳಿತವನು, ಯಾವುದಾರ 'ಎಮರ್ಜೆನ್ಸಿ' ಬಾಗಿಲು ಓಪನ್ ಮಾಡಿ ಹಾರೋಣ ಅಂದ್ರೆ ಆ ಬಾಗಿಲಿಗೆ ಯಾವುದೋ ದಾರದಿಂದ ಬಿಗಿದು ಕಟ್ಟಿದ್ದಾರೆ..!! ಇನ್ನೂ ಕಿಟಕಿ ಮೂಲಕ ಹಾರುವ ಅಂದ್ರೆ ತಲೆಯೂ ತೂರಲ್ಲ್ಲ..!:(((

ಏನಾದರಾಗಲಿ ಅಂತ ಧರ್ಯವಹ್ಸಿ ಕೊನೆಯವನಾಗಿ ಇಳಿದೆ..

ಆಮೇಲೆ  ನಿರ್ವಾಹಕನನ್ನು ಕೇಳಲು ತಿಳಿದದ್ದು ಇಸ್ತು...

 

 

ಬಸ್ಸಿನ ರೇಡಿಯೇಟರ್ ಗೆ ನೀರು ತುಂಬಿಸಿದ್ದರಸ್ತೆ- ಅದು ವಿಪರೇತ ಹೀಟ್ ಆಗ್ ಬಸ್ಸು ಮುಂದೆ ಹೋಗದೇ ಹೋದಾಗ  (ರೇಸ್ ಕೋರ್ಸ್ ಸಮೀಪ ನಿಂತಾಗ) ಚಾಲಕನ ಸಲಹೆಯಂತೆ ನಿರ್ವಾಹಕ ರೇಡಿಯೇಟರ್ ಮುಚ್ಚಲ ತೆಗೆದು ಇಕ್ಕಿದ್ದ...!!

 

ಬಸ್ಸು ತುಳುಕಾಡಿ ಬಿಸಿ ಹೆಚ್ಚು ಆಗಿ 'ತುಂಬಿದ ಕೊಡ ತುಳುಕುವುದಿಲ್ಲ' ಎಂಬುದನ್ನ ತಿರುಮುರುಗಾಗಿಸಿ...!! ಸ....ನೆ ಆ ನೀರು ಹೊರ ಹೊಮ್ಮಿ ಕಾದ ಕಬ್ಬಿಣದ ಮೇಲೆ ಬಿದ್ದು ಅಲೆಲ್ಲ ಹೊಗೆ -ವಾಸನೆ ವ್ಯಾಪ್ಸಿ... ..

ಇದೆಲ್ಲ ಆಯ್ತು..:()))

 

ಬಸ್ ತುಂಬಿ ತುಳುಕುತಿಟ್ಟಲ್ಲ, ಆ ಘಟನೆ ಆದ ಮೇಲೆ ಅಲ್ಲಿಯೇ ತುಂಬಾ ಜನ ಇಳಿದು ಬೇರೆ ಬಸ್ ಹತ್ತಿ ಹೋದರು..!!  ಹಲವರಂತು ಗಡ ಗಡ ನಡುಗುತ್ತಿದ್ದರು...

ಆ ಹಲವರಲ್ಲಿ ನಾ ಸಹಾ ಒಬ್ಬ...:()))

ಮತ್ತೆ  ಪ್ರಾಣದ ಮೇಲೆ 'ಆಸೆ ' ಇರೋಲ್ಲವೇ??

 

ಅದೇ ಬಸ್ಸಿನಲ್ಲಿ ಕೋರಮಂಗಳ ವರೆಗೆ ಬಂದು ಆಫೀಸೂ ತಲುಪಿದೆ.....

ಉಸ್ಸಪ್ಪ....!

 

ಆ ಘಟನೆಯ ಮೊದಲ ಹತ್ತು ನಿಮಿಷ ನಿಜವಾಗಿಯೂ ಬಹು ಆತಂಕಾದ ಕ್ಷಣಗಳಾಗಿದ್ದವು.. ಕೈ ಕಾಲು ತುಳಿತದಲ್ಲಿ ಹಲವರಿಗೆ ಗಾಯ ಆಗಿದ್ದಿರಬಹುದು, ಕೆಲವರ ಪರ್ಸ್ ಫೋನು ಇತ್ಯಾದಿ ಕೆಳಗೆ ಬಿದ್ದವು ಕಳೆದು ಹೋದವು..!!

ಬೀ ಎಂ ಟೀ ಸೀ  ಯವರು ಹೇಳುತ್ತಾರೆ ತಮ್ ಬಸ್ಸುಗಳು ನಡು ರಸ್ತೆ ಮಧ್ಯೆ 'ಕೈ' ಕೊಡುವುದು -ಕೆಟ್ಟು ಹೋಗುವುದು ತುಂಬಾ ಕಡಿಮೆ..ಅಂತ...!!

 

 



ನನ್ ಅನಿಸಿಕೆಯಂತೆ- ಇವತ್ತು ಆದ ಈ ಘಟನೆಯಿಂದ ನಾ ಹೇಳೋದು- ಅರಿತದ್ದು

 

ಬೀ ಎಂ ಟೀ ಸೀ ಮತ್ತು ಅಗ್ನಿ ಶಾಮಕ ಇಲಾಖೆಯವರು ಜೊತೆಗೂಡಿ ಇಂತಾ ಸಂದರ್ಭದಲ್ಲಿ ಜನ ಹೇಗೆ ವರ್ತಿಸಬೇಕು- ಹೇಗೆ ಸಂಯಮ ಕಾಪಾಡಿಕೊಳ್ಳಬೇಕು  ತಮ್ಮನ್ನು ರಕ್ಷೀಸ್ಕೊಳ್ಳಬೇಕು ಅಂತೆಲ್ಲಾ  ತರಭೇಟಿ ಕೊಡೋದು ಒಳ್ಳೇದು ಅಂತ...

ಹಾಗೆ ನೋಡಿದರೆ ಪ್ರತಿ ಅನಾಹುತ ಅವಘಡದಲ್ಲಿ ಅದರ ಪರಿಣಾಮಕ್ಕಿಂತ ಈ ತರಹ ಜನರ 'ತರಾತುರಿ' ಎ ನೂಕು ನುಗ್ಗಲಿಗೆ ಎಡೆ ಮಾಡಿಕೊಟ್ಟು ಅಪಾರ ಸಾವು ನೋವಿಗೆ ಕಾರಣ ಆಗೋದು..

 

ಬೀ ಎಂ ಟೀ ಸೀ ಅವರು ಎಚ್ಚೆತ್ತ್ತುಕೊಳ್ಳುವರೆ??



 www.manipalworldnews.com/images/bussssssssssssssss.jpg

 www.mid-day.com/imagedata/2010/nov/bus1.jpg



 

Rating
No votes yet

Comments