ಬೃಂದಾವನಕೆ ಹಾಲನು ಮಾರಲು..

ಬೃಂದಾವನಕೆ ಹಾಲನು ಮಾರಲು..

ಬೆಣ್ಣೆ ಹಾಲ್ಮೊಸರನ್ನು ಮಾರಹೊರಟಿದ್ದ
ಮುರಾರಿಯಡಿಗಳಲೆ ಮನಸನೊಪ್ಪಿಸಿದ
ಗೊಲ್ಲತಿ ಕೂಗಿದಳು ತಾ ಮೈಯಮರೆತು
’ಗೋವಿಂದ ದಾಮೋದರ ಮಾಧವೆಂ’ದು!

ಸಂಸ್ಕೃತ ಮೂಲ (ಬಿಲ್ವಮಂಗಳನ ಕೃಷ್ಣಕರ್ಣಾಮೃತ -೫೫)

ವಿಕ್ರೇತುಕಾಮಾ ಕಿಲ ಗೋಪಕನ್ಯಾ ಮುರಾರಿ ಪಾದಾರ್ಪಿತ ಚಿತ್ತವೃತ್ತಿಃ|
ದಧ್ಯಾಧಿಕಂ ಮೋಹವಶಾದವೋಚತ್ ಗೋವಿಂದ ದಾಮೋದರ ಮಾಧವೇತಿ||

-ಹಂಸಾನಂದಿ

ಕೊ: ನೆನ್ನೆ ತಾನೇ ಓದಿದ್ದಿದು ಈ ಶ್ಲೋಕ - ಅದರಲ್ಲಿರುವ ಲಯದಿಂದ ಕೂಡಲೇ ಅನುವಾದಿಸಬೇಕೆಂಬ ಸೆಳೆತವುಂಟುಮಾಡಿತು!

ಕೊ.ಕೊ: ಹಾಲೂ-ಮೊಸರೂ-ಬೆಣ್ಣೆ ಎಂದು ಕೂಗಿಕೊಂಡು ಹೋಗುತ್ತಾ ಮಾರಬೇಕಾದವಳು ಮೈಮರೆತು ’ಗೋವಿಂದಾ ದಾಮೋದರಾ ಮಾಧವಾ’ ಎಂದು ಕೂಗುತ್ತಾ ಮಾರುತ್ತಿದ್ದಾಳೆ ಅನ್ನುವುದು ಶ್ಲೋಕದ ಭಾವ. ಅದ್ಯಾಕೋ ಅನುವಾದದಲ್ಲಿ ಅಷ್ಟು ಚೆನ್ನಾಗಿ ತೋರ್ಪಡಲಿಲ್ಲವೋ ಅನ್ನುವ ಅನುಮಾನದಿಂದ ಈ ಕೊಸರನ್ನು ಹಾಕಬೇಕಾಯಿತು.

ಕೊ.ಕೊ.ಕೊ: ಈ ಶ್ಲೋಕವನ್ನು ಓದುತ್ತಲೇ, ಏಕೋ ಕುವೆಂಪು ಅವರ ’ಬೃಂದಾವನಕೆ ಹಾಲನುಮಾರಲು ಪೋಗುವ ಬಾರೇ ಬೇಗ ಸಖೀ’ ಅನ್ನುವ ಗೀತೆ ನೆನಪಾಗಿ, ಅದೇ ತಲೆಬರಹವನ್ನು ಕೊಟ್ಟೆ.

Rating
No votes yet