ಬೆಂಗಳೂರಿಗೆ ಶ್ರದ್ಧಾಂಜಲಿ
ಬೆಂಗಳೂರೆಂಬ ಮಾಯಾನಗರಿ ತನ್ನ ತೆಕ್ಕೆಯೊಳಕ್ಕೆ ಎಲ್ಲಾರನ್ನು ಸೆಳಿತಾನೇ ಇದೆ. ಆದ್ರೆ ಸ್ನೇಹಿತರೆ ಈ ಊರಿನ ಜೀವನದ ಅಂತಃಸತ್ವ ನಶಿಸಿಹೋಗಿ ಕಾಲವೇ ಆಯ್ತು ಅನ್ಸುತ್ತೆ.
ಒಂದಾನೊಂದು ಕಾಲದ ಗಾರ್ಡನ್ ಸಿಟಿ ಈಗಾ ಪೂರಾ ಗಾರ್ಬೇಜ್ ಸಿಟಿ.ಗಬ್ಬು ನಾರುತ್ತಿರುವ ಒಳಚರಂಡಿಗಳು, ಕಸದ ಕೊಂಪೆಗಳಾಗಿರುವ ಖಾಲಿ ಪ್ರದೇಶಗಳು, ರಿಪೇರಿಯಾದ ತಿಂಗಳೊಳಕ್ಕೆ ಗುಂಡಿ ಕಾಣುವ ನರಕ ಸದ್ರಶ ರಸ್ತೆಗಳು,ರಸ್ತೆ ರಾಜರಾಗಿರೋ ಬೀದಿನಾಯಿಗಳು,ಬಸ್ ಸ್ಟಾಪ್ ಗಳೆಲ್ಲಾ ಎಡಗಡೆ ಇದ್ದ್ರು ಸದಾ ಬಲಗಡೆ ಅಜಾಗರೂಕತೆಯಿಂದ ಚಲಿಸೋ ಬಿಎಂಟಿಸಿ ಬಸ್ಸುಗಳು, ಟ್ರಾಫಿಕ್ ರೂಲ್ಸ್ ಗೆ ತಿರುಮಂತ್ರದಂತಿರೊ ಆಟೋಗಳು ಮತ್ತು ದ್ವಿಚಕ್ರ ವಾಹನಗಳು, ನನ್ನಂಥ ಲಕ್ಷಾಂತರ ಹೈಟೆಕ್ ಕೂಲಿಗಳನ್ನ ಹೊತ್ತು ದಿನವೆಲ್ಲಾ ಅತಿ ವೇಗದಿಂದ ಓಡಾಡೊ ಕಂಪನಿ ಬಸ್ಸುಗಳು ಮತ್ತು ಕ್ಯಾಬ್ ಗಳು, ಅವ್ಯಾಹತವಾಗಿ ನಡೆದಿರೊ ಕೆರೆ-ಪಾರ್ಕ್ ಗಳ ಒತ್ತುವರಿ, ನಿರಂತರ ತಲೆ ಎತ್ತುತಿರೊ ಅನಧಿಕ್ರತ ಕಟ್ಟಡಗಳು, ಫುಟ್ಪಾತ್ಗಳನ್ನೆ ತಿನ್ನೊ ಪೂಜಾ ಮಂದಿರಗಳು, ನಿರ್ಮಾಣಗೊಳ್ತಾ ಇರೋ ಕಾಂಕ್ರೀಟ್ ಜಂಗಲ್ ಗಳು ಮತ್ತು ಅದಕ್ಕಾಗಿ ಬರಿದಾಗ್ತಿರೊ ನದಿ ಒಡಲು,ಮಿತಿ ಮೀರಿರೊ ವಾಯು,ಜಲ,ಶಬ್ದ ಮಾಲಿನ್ಯ, ಗಟಾರವೇ ಆಗಿ ಹೋಗಿರೊ ವ್ರಷಭಾವತಿ, ಕಾವೇರಿ ನೀರು ಸಾಲ್ದು ಅಂಥ ಈಗ ಹೇಮಾವತಿಗೂ ಹಪಹಪಿಸ್ತಾ ಇರೋ ಜನ, ನೆರೆಹೊರೆಯ ಪರಿಚಯವೆ ಇಲ್ದೆ ಜೀವಿಸೋ ಕುಟುಂಬಗಳು, ಪಬ್,ಡಿಸ್ಕೋ,ಡೇಟಿಂಗ್ ಕಲ್ಚರಿನ ಯುವಜನ, ಲಾಂಗ್,ಮಚ್ಚಿನ ರೌಡಿಗಳು,ಟೆರರಿಸ್ಟ್ ಲಿಂಕ್ ಗಳು, ಸಣ್ಣ ಕಾನ್ಸ್ಟೇಬಲ್ ನಿಂದ ಹಿಡ್ದು ಅಧಿಕಾರಿ ವರ್ಗ,ರಾಜಕಾರಣಿಗಳನ್ನು ಬಿಡದ ಲಂಚಾವತಾರ,ದಿನ ಬೆಳಗಾದ್ರೆ ನಡಿಯೋ ಕೊಲೆ, ದರೋಡೆ, ಅತ್ಯಾಚಾರ, ಸಾಮಾಜಿಕ, ಮಾನವೀಯ ಪ್ರಜ್ಞ ಇಲ್ದೆ ಇರೋ ಜನತೆ......ವೆಂಟಿಲೇಟರ್ ಮೇಲೆ ಮಲ್ಗಿರೋ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕ್ರತಿ..
ಸಾಕಾ ಸ್ವಾಮಿ ಮಾಗಡಿ ಕೆಂಪೇಗೌಡರ ಕನಸಿನ ಊರಿಗೆ ಬಂದಿರೋ ದುರ್ಗತಿನಾ ಬಣ್ಣಿಸೊದಕ್ಕೆ?..ಇಲ್ಲಾ ರೀ ಇದು ಬೆಳಿತಾ ಇರೊ ಮಹಾನಗರಿಯ ಅಂಗ ಅಂತೀರಾ?.. ಅಲ್ವೇ ಅಲ್ಲ ..'ಸಿಲಿಕಾನ್ ಸಿಟಿ'ಯ ಹೊರಲೇಪದಿಂದ ಝಗಮಗಿಸ್ತಿರೋ ನಮ್ಮ ಬೆಂಗಳೂರು ಅಂತರಾಳದಲ್ಲಿ ಸತ್ತು ಯಾವ್ದೊ ಕಾಲ ಆಯ್ತು. ಆದ್ದ್ರೂ ನಾವೆಲ್ಲಾ ಹದಗೆಟ್ಟ ವ್ಯವಸ್ಥೆಯ ಪ್ರತೀಕದಂತೆ ಇದೆ ಊರಲ್ಲಿ ಜೀವನ ಸಾಗಿಸ್ತಾ ಇದ್ದೀವಿ..ಹೊಟ್ಟೆಪಾಡಿಗಾದ್ರೂ ಸೈ!!
"ಬೆಂಗಳೂರಿಗೆ ಶ್ರದ್ಧಾಂಜಲಿ"..........
Comments
ಉ: ಬೆಂಗಳೂರಿಗೆ ಶ್ರದ್ಧಾಂಜಲಿ