ಬೆಂಗಳೂರು: ಅರ್ಶದ್ ಹುಸೇನ್ ರವರ 'ವಿಸ್ಮಯ ಪ್ಲಸ್' ಕೃತಿ ಬಿಡುಗಡೆ - ಬೆಂಗಳೂರಿನಲ್ಲಿ ಮಾರ್ಚ್ 7 ರಂದು.

ಬೆಂಗಳೂರು: ಅರ್ಶದ್ ಹುಸೇನ್ ರವರ 'ವಿಸ್ಮಯ ಪ್ಲಸ್' ಕೃತಿ ಬಿಡುಗಡೆ - ಬೆಂಗಳೂರಿನಲ್ಲಿ ಮಾರ್ಚ್ 7 ರಂದು.

ಸ್ಥಳ: ರಿಲಾಯನ್ಸ್ ಟೈಮ್ ಔಟ್, ಕನ್ನಿಂಗ್ ಹ್ಯಾಮ್ ರಸ್ತೆ, ಸಮಯ: ಸಂಜೆ 6 ಘಂಟೆಗೆ

 

ಬೆಂಗಳೂರು: ಮುಂದಿನ ಸೋಮವಾರ (ಮಾರ್ಚ್ 7) ಸಂಜೆ ಆರು ಘಂಟೆಗೆ ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಾಯನ್ಸ್ ಟೈಮ್ ಔಟ್ ಸಭಾಂಗಣದಲ್ಲಿ ಅರ್ಶದ್ ಹುಸೇನ್ ರವರ ವಿಸ್ಮಯ ಪ್ಲಸ್ ಕೃತಿ ಬಿಡುಗಡೆಯಾಗಲಿದೆ.

 

 

ಪುಸ್ತಕ ಲೋಕಾರ್ಪಣೆಯ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕ ಶ್ರೀ ಬಿ.ಎಂ.ಹನೀಫ್, ಕ್ವಿಜ್ ಮಾಸ್ಟರ್ ಡಾ. ನಾ.ಸೋಮೇಶ್ವರ ಮತ್ತು ಖ್ಯಾತ ಲೇಖಕಿ ಶ್ರೀಮತಿ ನೇಮಿಚಂದ್ರ ಅವರು ಉಪಸ್ಥಿತರಿರುತ್ತಾರೆ.

 

 

ವಿಶ್ವದ ಹಲವು ವಿಸ್ಮಯಗಳನ್ನು ಬಣ್ಣದ ಚಿತ್ರಗಳ ಹಾಗೂ ಹೆಚ್ಚಿನ ಮಾಹಿತಿಗಳನ್ನು ಸೀಡಿಯ ಮೂಲಕ ನೀಡುವ ವಿಸ್ಮಯ ಪ್ಲಸ್ ಒಂದು ನೂತನ ಪ್ರಯೋಗವಾಗಿದೆ.

 

 

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲಾಗಿದೆ.

 

 

ಎಲ್ಲರಿಗೂ ಸ್ವಾಗತ ಬಯಸುವ

 

ಅರ್ಶದ್ ಹುಸೇನ್ ಎಂ.ಹೆಚ್,

ಕೊಪ್ಪ.

 

 

Rating
No votes yet

Comments