ಬೆದರಿಕೆ ಹಾಕುವ ಬಾಯಿ ಬಡುಕರು

ಬೆದರಿಕೆ ಹಾಕುವ ಬಾಯಿ ಬಡುಕರು

ಎಲ್ಲರಿಗೂ ಗೊತ್ತಿರುವ ಜೋಕೇ ಆದರೂ ಇದರಿಂದ ನನ್ನ ಮಾತನ್ನು ಶುರು ಮಾಡುತ್ತೇನೆ
ಕರೆಂಟ್ ಹೋಗಿರುತ್ತೆ
ಕೆ.ಇ.ಬಿ ಆಫೀಸಿಗೆ ಒಂದು ಫೋನ್ ಬರುತ್ತೆ
"ಇನ್ನೊಂದು ಸ್ವಲ್ಪ ಹೊತ್ನಲ್ಲಿ ಕರೆಂಟ್ ಬರ್ದೇ ಇದ್ರೇ ಸುಮ್ನೆ ಇರಲ್ಲ" ಆ ಕಡೆಯ ದ್ವನಿ
"ಏನ್ರಿ ಏನ್ರಿ ಹೆದರ್ಸ್ತೀರಾ ಏನ್ ಮಾಡ್ತೀರಾ ಹೇಳ್ರಿ"
"ಏನ್ಮಾಡ್ತೀನಿ ಅಂದ್ರೆ ಸುಮ್ನೆ ಕ್ಯಾಂಡೆಲ್ ತಂದು ಹಚ್ತೀನಿ"
ಹೀಗೆ ಜೋಕಾಗಿ ಕಾಣುವ ಈ ಬೆದರಿಕೆಗಳು ಸ್ವಲ್ಪ ಜನಕ್ಕೆ ನಿಜಕ್ಕೂ ಕಳವಳ ಉಂಟು ಮಾಡುತ್ತದೆ
ನಾನು ಇದನ್ನ ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ
ನನಗೆ ಬೆದರಿಕೆ ಹಾಕಿದ ಹಾಕುವ ಕೆಲವರ ನಡೆ ನುಡಿಯೂ ಮೇಲಿನ ರೀತಿಯಲ್ಲೇ ಜೋಕಾಗಿ ಬದಲಾಯಿಸುವ ಎಷ್ಟೋ ಪ್ರಸಂಗಗಳಿವೆ
ಮೊದಲನೆಯದು
೨೦೦೨ರಲ್ಲಿ ಹೆಸರಾಂತ ಕಾಲೇಜೊಂದರಲ್ಲಿ ಕಂಪ್ಯೂಟರ್ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದೆ ಅದೂ ಡಿಗ್ರಿ ಹುಡುಗರು
ಸೆಕಂಡ್ ಇಯರ್ ಹುಡುಗರು ಸ್ವಲ್ಪ ಹೆಚ್ಚ್ಚಾಗಿಯೇ ತರಲೆಗಳು
ಅದರಲ್ಲಿ ಸುಮಾರು ಅರವತ್ತು ವಿದ್ಯಾರ್ಥಿ/ನಿ.
ನನಗೋ ಆಗಷ್ಟೆ ಕಾಲೇಜಿನಲ್ಲಿ ಪಾಠ ತೆಗೆದುಕೊಳ್ಳುತ್ತಿದ್ದೆನಾದ್ದರಿಂದ ಅಳುಕು ಜೊತೆಗೆ ಇನ್ನೂ ಶಿಸ್ತು ಅದೂ ಇದೂ ಎಂಬ ಅದರ್ಶಗಳು.
ಕ್ಲಾಸಿನಲ್ಲಿ ಪಾಠ ಶುರು ಮಾಡಿದರೆ ಸಾಕು ಗಲಾಟೆ, ಹಾಡುಗಳು, ಶಿಳ್ಳೇಗಳು ಬರುತ್ತಿದ್ದ್ದವು . ಯಾರೆಂದು ಹುಡುಕುವುದು ಬಹಳ ಕಷ್ಟವಾಗುತ್ತಿತ್ತು
ಒಮ್ಮೆ ಹೀಗೆ ಗಲಾಟೆಯಿಂದ ರೋಸಿದ ನಾನು ಕ್ಲಾಸಿನಲ್ಲಿ ಆಸಕ್ತಿ ಇರದ ಹುಡುಗರು ಕ್ಲಾಸ್‌ನಿಂದ ಹೊರಗೆ ಹೋಗಲು ಸೂಚಿಸಿದೆ
ಆದರೆ ಅವರ ಅಟೆಂಡನ್ಸ್ ಕೊಟ್ಟರೆ ಹೋಗುವುದಾಗಿ ಆ ಹುಡುಗರು ಕೂಗಿದರು.
ಒಮ್ಮೆ ಅಟ್ಟೆಂಡನ್ಸ್ ಕೂಗಿ ಅವರಿಗೆಲ್ಲಾ ಹಾಜಾರಾತಿ ಹಾಕಿದೆ
ಕೊನೆಗೆ ಒಂದಷ್ಟು ಜನ ಎದ್ದು ಹೊರಟರು.
ಕ್ಲಾಸ್ ಶಾಂತವಾಯ್ತು.
ಪಾಠ ತೆಗೆದುಕೊಳ್ಳುತಿದ್ದಂತೆ ತಲೆಗೊಂದು ಐಡಿಯಾ ಹೊಳೆಯಿತು ಗಲಾಟೆ ಮಾಡಿ ತಲೆ ತಿನ್ನುತ್ತಿದ್ದ ಆ ಹುಡುಗರ ಹೆಸರನ್ನ ಈಗ ಕಂಡು ಹಿಡೀಬಹುದೆಂದು ತೋಚಿತು.
ಮತ್ತೆ ಅಟೆಂಡೆನ್ಸ್ ತೆಗೆದುಕೊಂಡೆ
ಹೊರಗೆ ಹೋಗಿದ್ದ ಹುಡುಗರ ಹೆಸರನ್ನ ಗುರುತು ಮಾಡಿಕೊಂಡೆ.
ಈ ಲಿಸ್ಟ್‌ನ ಪ್ರಿನ್ಸಿಗೆ ಕೊಡುವುದಾಗಿ ಕ್ಲಾಸಲ್ಲ್ಕಿ ಹೇಳಿದೆ
ಸ್ಟಾಫ್ ರೂಮ್‍ನಲ್ಲಿ ಕೂರುತ್ತಿದ್ದಂತೆ ಹುಡುಗರ ಹಿಂಡು
ಕೆಲವರು ರಿಕ್ವೆಸ್ಟ್ ಮಾಡಿಕೊಂಡರು
ನಾನು ಕೇರ್ ಮಾಡಲಿಲ್ಲ
ಕಾಲೇಜಿಂದ ಮೆಜೆಸ್ಟಿಕ್ ಬಸ್ ಸ್ಟಾಂಡ್ಗೆ ನಡೆದುಕೊಂಡು ಬರುವಾಗಲೂ ಆ ಹುಡುಗರು ನನ್ನ ಹಿಂದೆ
’ಮೇಡಮ್ ನಿಮಗೆ ಗೊತ್ತಿಲ್ಲ ನಾವೇನಂತ . ಮನೆಗೆ ಸೇಫಾಗಿ ಹೋಗಲ್ಲ. ಇನ್ನೂ ಹೊಸಬರು . ಆ ಲಿಸ್ಟ್ ಏನಾದರೂ ಪ್ರಿನ್ಸಿಪಾಲಗೆ ಕೊಟ್ಟರೆ ನೀವು ಉಳಿಯಲ್ಲ"
ಎಂಬೆಲ್ಲಾ ಬೆದರಿಕೆ ಮಾತುಗಳು
ನನಗೋ ಮುಜುಗರ . ಅಕ್ಕಪಕ್ಕದ ಜನರೆಲ್ಲಾ ನೋಡಿಕೊಂಡು ಹೋಗ್ತಾ ಇದ್ದಾರೆ, ಆಯ್ತು ಎಂದರೆ ಹೆದರಿಕೊಂಡಂತಾಗುತ್ತೆ .
ಇದ್ದ ಬದ್ದ ಧೈರ್ಯವನ್ನೆಲ್ಲಾ ಒಟ್ಟು ಮಾಡಿ ಕೊನೆಗೆ ಹಿಂದೆ ತಿರುಗಿ ಗಟ್ಟಿಯಾಗಿ ಹೇಳಿದೆ.
"ಈಗಾಗಲೇ ಬರ್ತಾ ಎಲ್ಲ ವಿಷ್ಯಾನು ಪ್ರಸಾದ್ (ಎಚ್ . ಓ.ಡಿ)ಗೆ ಹೇಳಿ ಬಂದಿದೀನಿ .ಅ ವರ ಹತ್ರಾನೂ ಒಂದು ಲಿಸ್ಟ್ ಇದೆ ನಂಗೇನಾದರೂ ಆದರೆ ಖಂಡಿತಾ ನಿಮ್ಮ ಹೆಸರೇ ಮೊದಲು ಸಿಗೋದು "
"ಅಂಗಾ ನೋಡೋಣ ನಾಳೆ ಅದೆಂಗೆ ಕಾಲೇಜಿಗೆ ಬರ್ತೀರೋ ನೋಡೋಣಾ" ಅಂತ ಆಗಸದಷ್ಟತ್ತರ ಇದ್ದ ಹುಡುಗ ಹೇಳಿದ
ಕೊನೆಗೆ ಬಸ್ ಹತ್ತಿ ಮನೆಗೆ ಬಂದೆ
ಅಮ್ಮ ಬೈದರು. "ನಿಂಗ್ಯಾಕೆ ಬೇಕಿತ್ತು ಇದೆಲ್ಲಾ, ಇರೋದು ಇನ್ನೊಂದು ಮೂರು ತಿಂಗಳು ಅಲ್ಲಿವರೆಗೆ ಸುಮ್ನೆ ಇರಕ್ಕಾಗಲ್ವಾ. ಆ ಹುಡಗರನ್ನ ಎದುರು ಹಾಕೊಂಡಿದೀಯಲ್ಲಾ . ಬೇರೆ ಕೆಲ್ಸ ನೋಡ್ಕೋ "
ಸದ್ಯ ಆಗಾಗಲೆ ಒಮ್ಮೆಕೆಲ್ಸ ಕಳೆದುಕೊಂಡು ಬಹಳ ಕಷ್ಟ ಪಟ್ಟು ಸಿಕ್ಕಿದ ಕೆಲ್ಸ ಅದು. ಅದು ಹೇಗೆಬಿಡಕಾಗುತ್ತೆ
ಹಾಗೂ ಹೀಗೂ ಹೆದರಿಕೊಂಡೇ ಕಾಲೇಜಿಗೆ ಬಂದೆ
ಭಯ ಎಲ್ಲಿ ಆಸಿಡ್ ಗೀಸಿಡ್ ಹಾಕ್ತಾರೋ . ಅಂತ ಸುತ್ತಾ ಮುತ್ತಾ ನೋಡ್ಕೊಂಡೇ ಬಂದೆ. ದೇವರನ್ನ ನೆನೆಸಿಕೊಂಡೇ ಬಂದಿದ್ದು ಕಾಲೇಜಿನ ಒಳಗೆ. ಆ ಆಗಸದೆತ್ತರದ ಹುಡುಗ ನುಂಗೋ ಹಾಗೆ ಗುರಾಯಿಸ್ತಾ ,
ಬಾಯಲ್ಲಿ ಚ್ಯೂಯಿಂಗ್ ಗಮ್ ಅಗೀತಾ ಇದ್ದ. ಜೊತೆಗೆ ಅವನ ಜೊತೆ ಇನ್ನೊಂದಷ್ಟು ಹುಡುಗರು . ಭಯ ಪಟ್ಟ ಹಾಗೆ ತೋರಿಸ್ಕೊಳಲಿಲ್ಲ.
ಸ್ಟಾಫ್ ರೂಮ್ನಲ್ಲಿ ಕೂತ್ಕೊಂಡಿದ್ದೆ ಕ್ಲಾಸ್ ಇನ್ನೂ ಇರಲಿಲ್ಲ
ನಮ್ಮ ಕಂಪ್ಯೂಟರ್ ಸ್ಟಾಫ್ ರೂಮ್ ಸಪರೇಟ್ ಆಗಿತ್ತು
ಇದ್ದ ಮೂರು ಜನಾನು ಕ್ಲಾಸ್‌ಗೆ ಹೋಗಿದ್ದರು
ನೋಟ್ಸ್ ಮಆಡ್ತಾ ಇದ್ದೆ
"ಮೇಡಮ್ ಅನ್ನೋದ ಕೇಳಿ ತಲೆ ಎತ್ತಿದೆ"
ಅವೇ ಹುಡುಗರು
ಹೃದಯವೇ ಬಾಯಿಗೆ ಬಂದಂತಾಯ್ತು
ಎಲ್ಲರ ಕೈಗಳನ್ನು ನೋಡಿದೆ ಖಾಲಿ ಇದ್ದವು , ಸ್ವಲ್ಪ ನೆಮ್ಮದಿಯಾಯ್ತು
ಡವಡವವನ್ನ ಅಡಗಿಸಿಕೊಂಡು "ಏನು ಬಂದಿದ್ದು ?" ಪ್ರಶ್ನಿಸಿದೆ
"ಮೇಡಮ್ ಸಾರಿ ಮೇಡಮ್ , ನಾವು ಇನ್ನೊಂದ್ಸಲ ಗಲಾಟೆ ಮಾಡಲ್ಲ . ಪ್ಲೀಸ್ ಪ್ರಿನ್ಸಿಪಾಲ್‌ಗೆ ಹೇಳ್ಬೇಡಿ ಮೇಡಮ್ " ಇದೇನಪ್ಪ ನೆನ್ನೆ ಹುಲಿಗಳಾದವರು ಇವತ್ತು ಇಲಿ ಥರಾ ಆಡ್ತಿದಾರಲ್ಲ ಅನ್ನಿಸ್ತು .
ಜೊತೆಗೆ ಏನಾದರೂ ನಾಟಕ ಮಾಡ್ತಿದಾರಾ ಅಂತ ಅನುಮಾನಾನೂ ಬಂತು
"ನೆನ್ನೆ ಏನೇನೋ ಮಾತಾಡಿ ಬಿಟ್ವಿ ಮೇಡಮ್ ತಪ್ಪ್ಪಾಯ್ತು " ಆಗಸದೆತ್ತರದ ಹುಡುಗನ ಮಾತು
ಸರಿ ಎಂದು ಹೇಳಿದೆ
ಅದಾದ ನಂತರ ಆ ಕಾಲೇಜಿನಲ್ಲಿ ಮೂರು ತಿಂಗಳು ಕೆಲ್ಸ ಮಾಡಿದೆ . ಒಮ್ಮೆಯೂ ಆ ಹುಡುಗರು ಗಲಾಟೆ ಮಾಡಲಿಲ್ಲ
ಕಾಲೇಜ್ ಬಿಡುವಾಗ ಒಮ್ಮೆ ಪ್ರಶ್ನಿಸಿದೆ . " ಆವತ್ತು ಅದೇನು ಮಾಡಿನಿ ಅಂದ್ರಲ್ಲ . ಆಮೇಲೇನಾಯ್ತು ?"
"ಮೇಡಮ್ ಸುಮ್ನೆ ಹೆದರ್ಸ್ತೀವಿ , ಹೆದರ್ಕೊಂಡ್ರೆ ಪರವಾಗಿಲ್ಲ . ನೀವು ನಮಗೆ ಹೆದರಿಸಿದ್ರಲ್ಲಾ" (ಆಗಸದೆತ್ತರದ ಹುಡುಗನ ಹೆಸರು ನೆನಪಿಗೆ ಬಂತು) ಸಂದೀಪ.
ನಾನು ಯಾರಿಗೂ ಆ ಲಿಸ್ಟ್ ವಿಷಯ ಹೇಳಿರಲಿಲ್ಲ . ನಂಗೇ ನಗು ಬಂತು ನೆನೆಸಿಕೊಂಡು.
ಮತ್ತೊಂದು ಬೆದರಿಕೆ ಪ್ರಕರಣ ನಡೆದಿದ್ದು ೨೦೦೪ರಲ್ಲಿ.
ವಿದ್ಯಾರ್ಥಿಯೊಬ್ಬ ಕ್ಲಾಸ್‌ಗೆಂದು ಜಾಯಿನ್ ಆಗಿದ್ದ
ಒಂದು ತಿಂಗಳ ನಂತರ ಬೇರೆ ಊರಿಗೆ ಹೋಗುತ್ತಿರುವುದಾಗಿ ಹೇಳಿ ಫೀಸ್ ವಾಪಸ್ ಕೇಳಿದ
"ನೀವು ಕಟ್ಟಿದ ಹಣ ಸರಿ ಹೋಯ್ತು ." ಎಂದೆ
ಜಗಳ ಮಾಡಿದ. ನಾನೂ ಸೋಲಲಿಲ್ಲ
"ನೀವು ಹೋಗೋದು ರಾತ್ರಿ ಮೇಡಮ್ ಹುಷಾರಾಗಿರಿ. ನನ್ನ ದುಡ್ಡು ಕೊಟ್ರೆ ನೀವು ಸೇಫ್ . ಇಲ್ಲಾಂದರೆ ಸರಿ ಇಲ್ಲ"
ಇನ್ನೇನೋ ಬ್ದೈದು ಕಳಿಸಿದೆ
ಆಗಷ್ಟೆ ನನ್ನ ಮದುವೆ ನಿಶ್ಚಯವಾಗಿತ್ತು. ಇವರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಹಾಗೆ ಕಂಪೆನಿಯಿಂದ ಬರುವುದು ಲೇಟ್ ಆಗುತ್ತೆ ಎಂದುಹೇಳಿದರು. ಅಕಸ್ಮಾತ್ ಅವನೇನಾದರೂ ಬಂದತೆ ಏನು
ಹೇಳಬೇಕೆಂದು ಪ್ರಿಪೇರ್ ಮಾಡಿಕೊಂಡೆ. ಅವತ್ತಿನ ದಿನ ಗೊತ್ತಿದ್ದ ಒಬ್ಬ ಹುಡುಗನ ಜೊತೆ ಮನೆಗೆ ಹೋದೆ ಆ ವಿದ್ಯಾರ್ಥಿ ಕಾಣಲಿಲ್ಲ. ಎರೆಡು ದಿನಗಳಾದರೂ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ
ಹಾಗಾಗಿ ನಂತರ ನಾನು ಒಬ್ಬಳೆ ಹೋಗುವುದೆಂದು ನಿರ್ಧರಿಸಿದೆ
ಒಬ್ಬಳೇ ಕೈನೆಟಿಕ್ (ಆಗಿದ್ದುದು )ನಲ್ಲಿ ಬರುತ್ತಿದ್ದ ಹಾಗೆ ಇನ್ನೇನು ದೊಡ್ಡತೋಗೂರ್ ಕಡೆಯಿಂದ ಟರ್ನ್ ಮಾಡಬೇಕು ಆಗ
ಅದೇ ವಿದ್ಯಾರ್ಥಿ ಮುಂದೆಯೇ ನಿಂತಿದ್ದ. ಇನ್ನೂ ಜನ ಸಂಚಾರ ಇದ್ದುದ್ದರಿಂದ ಅಷ್ಟೇನು ಭಯ ಆಗಲಿಲ್ಲ
ಆಗಿದ್ದ ರಿಲಯನ್ಸ್ ಮೊಬೈಲ್ ಆನ್ ಮಾಡಿದೆ
"ಸಾರ್ ನಾನುಹೇಳಿಲ್ಬಾ ಆ ಹುಡ್ಗ ಇಲ್ಲೇ ಮುಂದೆ ನಿಂತಿದಾನೆ. ನೀವು ಮುಂದೆ ಬಂದ್ರೆ ಕಾಣ್ತಾನೆ ಬನ್ನಿ ಸಾರ್ " ನಿಜವಾಗಿಯೂ ಯಾರಿಗೊ ಫೋನ್ ಮಾಡಿರಲಿಲ್ಲ
ಅವನು ಸುತ್ತಾ ಮುತ್ತಾ ನೋಡಿದ
"ಮೇಡಂ ನಾ ನಿಮಗೆ ಏನೂ ಮಾಡೋಕೆ ಬರ್ಲಿಲ್ಲ . ಹಿಂಗೆ ಕೆಲ್ಸ ಮುಗಿಸ್ಕೊಂಡು ಮನೆಗೆ ಹೋಗ್ತಿದ್ದೆ. ನೀವಿಷ್ಟೊಂದು ಹೆದರ್ಕೊಂದ್ರೆ ಹೆಂಗೆ" ಎಂದ
"ನಾನ್ಯಾಕೆ ಹೆದರ್ಕೊಳ್ಳಿ. ಈ ಊರಿನ ಛೇರ್ಮನ್‍೬ಗೆ ಆಗಲೆ ಹೇಳಿದೀನಿ . ನಿಮಗೆ ಭಯ ಅಗ್ಬೇಕಾಗುತ್ತೆ"
"ಅಯ್ಯೋ ಆವತ್ತು ಯಾವುದೋ ಕೋಪದಲ್ಲಿ ಹೇಳಿದ್ದು ಮೇಡಮ್ ಅದನ್ನ ಸೀರಿಯಸ್ಸಾಗಿ ತಗೋಬೇಡಿ ಮೇಡಮ್ " ಅಷ್ತು ಹೇಳಿಆತ ಓಟ ಕಿತ್ತ
ಹೀಗೆ ಅವನಂತೆ
ಒಂದು ತಿಂಗಳಲ್ಲಿ ಡಿಗ್ರಿ ಸರ್ಟಿಫಿಕೇಟ್ ಕೊಡಿಸಿ . ಪರೀಕ್ಶೆಯಲ್ಲಿ ಪಾಸ್ ಮಾಡಿಸಿ, ಹೀಗೆ ಬೆದರಿಸುತ್ತಲೇ ಇರುತ್ತಾರೆ ,ಬೆದರಿಕೆಗೆ ಬಗ್ಗದಿದ್ದರೆ ಸುಮ್ಮನಾಗುತ್ತಾರೆ.
ಹೋದ ವಾರವೂ ಇಂತಹುದೇ ಒಂದು ಕೇಸ್ ಬಂದಿತ್ತು
ಅದೂ ಇದೇ ಅಂತ್ಯ ಕಂಡಿತು
ಅದರ ನೆನಪಿನಲ್ಲಿ ಈ ಪೋಸ್ಟ್
ಬೊಗಳುವ ನಾಯಿ ಕಚ್ಚುವುದಿಲ್ಲ ಅಲ್ಲವೇ?

"

Rating
No votes yet

Comments