ಬೆನ್ನು ತಟ್ಟಿದವರು :-)
ಯಾರಾದರೂ ಬೆನ್ನು ತಟ್ಟಿದರೆ ಯಾರಿಗೆ ತಾನೇ ಸಂತೋಷವಾಗುವುದಿಲ್ಲ?
ಅದೂ, ಅಪರಿಚಿತರು ಒಂದು ಒಳ್ಳೆ ಮಾತು ಹೇಳಿದರೂ ಮನಸ್ಸಿಗೆ ಹಿತವಾಗುವುದು ಸಹಜ. ಇದೇ ಕಾರಣಕ್ಕೆ, ಭಾರೀ ಸಂಗೀತಗಾರರೂ ಕೂಡ, ಕಾರ್ಯಕ್ರಮದ ನಂತರ ಒಬ್ಬ ಕೇಳುಗ ಅವರ ಬಳಿ ಹೋಗಿ ಇಂದಿನ ಕಾರ್ಯಕ್ರಮ ಚೆನ್ನಾಗಿತ್ತು, ಈ ರಾಗ ಈ ಕೃತಿ ಹಿಡಿಸಿತು ಎಂಬುದನ್ನು ಹೇಳಿದರೆ ಆನಂದಪಡುತ್ತಾರೆ. ಇದನ್ನು ಪ್ರಖ್ಯಾತ ಕಲಾವಿದೆಯರಾದ ಮೈಸೂರು ನಾಗಮಣಿ ಶ್ರೀನಾಥ್, ಸುಧಾ ರಘುನಾಥನ್ ಮೊದಲಾದವರು ಸ್ವತಃ ಹೇಳಿದ್ದನ್ನು ಕೇಳಿರುವೆ.
ಇಷ್ಟೆಲ್ಲ ಮಾತಿಗೆ ಕಾರಣವೇನು ಎಂದಿರಾ? ಇವತ್ತು ಕೆಂಡಸಂಪಿಗೆ ಪೋರ್ಟಲ್ ದಿನಪತ್ರಿಕೆಯ ದಿನದ ಬ್ಲಾಗ್ ಆಗಿ ಹಂಸ ನಾದ :) ಕಾಣಿಸಿಕೊಂಡಿದೆ.
-ಹಂಸಾನಂದಿ
(ನನ್ನ (mostly) ಇಂಗ್ಲಿಷ್ ಬ್ಲಾಗ್ ಅಲ್ಲಿದೆ ನಮ್ಮ ಮನೆ:- http://neelanjana.wordpress.com/ )
Rating