ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ಆತ್ಮೀಯರೇ
ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ನಿಮಗೆಲ್ಲಾ ಹಾಗೆ ಸುಮ್ಮನೆ ಒ೦ದು ಪ್ರಶ್ನೆ (ಇದು ಪ್ರಶ್ನೆನೋ ಇಲ್ಲ ಭಾವನೆಗಳ ಹ೦ಚಿಕೊಳ್ಳುವಿಕೆಯೋ ಗೊತ್ತಿಲ್ಲ)
ನೀವೆಲ್ರೂ ಒ೦ದಲ್ಲ ಒ೦ದಿವ್ಸ ಯಾವ್ದೋ ಘಳಿಗೇಲಿ ಏನೋ ನೆನಸ್ಕೊ೦ಡು ಅತ್ತಿದ್ದೀರಾ?
ಅದು ಸ೦ತೋಷದ ವಿಷಯ ಆಗಿರ್ಬೋದು ದುಖಃದ ವಿಷಯ ಆಗಿರ್ಬೋದು ಅತಿಯಾದ ಭಾವೋದ್ವೇಗಕ್ಕೆ ಒಳಗಾಗಿ ಅತ್ತಿದ್ರೆ ಅದನ್ನ ಬರೆಯಿರಿ
ಒ೦ದು ಕಡೆಯಿ೦ದ ಬಸ್ಸೋ ಕರೋ ಫಾಸ್ಟಾಗಿ ಬರ್ತಾ ಇರುತ್ತೆ ಒ೦ದು ಕ್ಯೂಟಾಗಿರೋ ನಾಯಿಮರಿ ರಸ್ತೆ ಮಧ್ಯೆ ಸಿಕ್ಕಿಹಾಕೊ೦ಬಿಡುತ್ತೆ
ನಿಮ್ಮ ಕೈನಲ್ಲಿ ಅದನ್ನ ಬಿಡಸಕ್ಕೂ ಆಗದೆ ಇರೋವ೦ಥ ಕ್ಷಣ ಎದೆ ಬಡಿತ ಹೆಚ್ಚಾಗಿ ಅಯ್ಯೋ! ಅ೦ತ ಮನಸ್ಸಿನಲ್ಲೇ ಅ೦ದುಕೊ೦ಡು ಕೊರಗಿ
ಕಣ್ಣೀರಾಗಿದ್ದರೆ ಆ ಥರದ್ದು
ಇಲ್ಲಾ
ನಿಮ್ಮ ಮನೇಲಿ ಒ೦ದು ಪುಟ್ಟ ಪಾಪು ಹುಟ್ಟುತ್ತೆ(ಅಕ್ಕ೦ಗೋ ತ೦ಗೀಗೋ,ಇಲ್ಲಾ ನಿಮ್ಮದೇ ….:))ಆ ಕ್ಷಣ ಟೆನ್ಶನ್ನಿನಲ್ಲಿ ಕಳೆದು
ಮಗು ಹುಟ್ಟಿ ಆದಮೇಲೆ ಅದನ್ನ ನೋಡಿ ಅದರ ನುಣುಪಾದ ಕಾಲು ಕೈಗಳನ್ನ ಮುಟ್ಟಿ ಖುಷಿಯಿ೦ದ ಕಣ್ಣೀರಾಗದೀರಾ?

ಅವಾಗಿನ ಕ್ಷಣಗಳನ್ನ ಹ೦ಚಿಕೊಳ್ಳಿ (ofcourse ಈಗ ಸ೦ಪದಲ್ಲಿ ಮಾಡ್ತಾಇರೋದು ಅದೇ ಅ೦ದ್ಕೊಳ್ಳಿ ಹೇಳ್ದೇ ಬಿಟ್ಟ ನೆನಪುಗಳು ನ೦ಗೆ sorry ಸ೦ಪದಗೆ ಹೇಳಿ)

ಹರೀಶ ಆತ್ರೇಯ

Rating
No votes yet

Comments