ಬೇಲಿ
ಅವನ ಗರ್ಲ್್ಫ್ರೆಂಡ್ ಅಪ್ರತಿಮ ಸುಂದರಿ. ನೋಡಿದ ಹುಡುಗರೆಲ್ಲಾ 'ವಾವ್!'ಅಂತ ಅನ್ನಲೇ ಬೇಕು.
ಎಲ್ಲಾ ಹುಡುಗರು ತನ್ನ ಹುಡುಗಿಯನ್ನೇ ನೋಡ್ತಾರೆ ಅಂತಾ ಅವನಿಗೂ ಗೊತ್ತು. ಅದಕ್ಕೆ ಯಾವಾಗಲೂ ಅವಳು ತನ್ನ ಜೊತೆ ಇದ್ದರೆ ಇತರ ಹುಡುಗರ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದ.
ಅವರ ದೃಷ್ಟಿ ತನ್ನ ಹುಡುಗಿಯತ್ತ ತಾಕದಂತೆ, ಅವಳನ್ನು ಯಾರಾದರೂ ನೋಡಿದರೆ ಸಾಕು ಅವರನ್ನು ಕಣ್ಣಲ್ಲೇ ಗದರಿಸುತ್ತಿದ್ದ. ತನ್ನ ಹುಡುಗಿಯನ್ನು ಇತರರು ನೋಡಿ ಎಂಜಲು ಸುರಿಸುವುದು ಅವನಿಗೆ ಸಹಿಸಕ್ಕೆ ಸಾಧ್ಯ ಆಗ್ತಾ ಇರಲಿಲ್ಲ. ಅವ ಯಾವಾಗಲೂ ಇತರರ ಕಣ್ಣು, ಚಲನವಲನಗಳನ್ನೇ ಗಮನಿಸುತ್ತಿದ್ದ.
ಅವ ಇತರರರನ್ನು ಗಮನಿಸುವುದರಲ್ಲಿ ಎಷ್ಟು ತಲ್ಲೀನನಾಗಿದ್ದನೆಂದರೆ ಪಕ್ಕದಲ್ಲೇ ಕುಳಿತಿದ್ದ ಆತನ ಗರ್ಲ್್ಫ್ರೆಂಡ್ ಇನ್ನೊಬ್ಬನ ಜೊತೆಗೆ ಓಡಿ ಹೋದದ್ದೂ ಅವನ ಗಮನಕ್ಕೆ ಬಂದಿರಲಿಲ್ಲ.
Rating