ಬ್ಯಾಂಕ್ ಸೇವಾದರಗಳ ವೈಚಿತ್ರ್ಯ
ಬ್ಯಾಂಕುಗಳಲ್ಲಿ ಹಣ ವರ್ಗಾವಣೆಗೆ RTGS ಮತ್ತು NEFT ಎಂಬ ಎರಡು ತೆರನ ಸೇವೆಗಳು ಲಭ್ಯ. ಬ್ಯಾಂಕಿನ ಒಂದು ಖಾತೆಯಿಂದ ಇನ್ನೊಂದು ಶಾಖೆಯ ಖಾತೆಗೆ ವರ್ಗಾವಣೆ ಮಾಡಲು RTGS ಶಿಫಾರಸ್ಸು ಮಾಡುವ ಬ್ಯಾಂಕಿನವರು,ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿನ ಖಾತೆಗೆ ಹಣ ವರ್ಗಾವಣೆಗೆ NEFT ಬಳಸಲು ಹೇಳುತ್ತಾರೆ. ಇವೆರಡೂ ಬ್ಯಾಂಕುಗಳ ಕಂಪ್ಯೂಟರ್ ಜಾಲಗಳನ್ನು ಬಳಸಿ ಒದಗಿಸುವ ಸೇವೆಗಳು. RTGS ಸೇವೆಯು ತಕ್ಷಣ ಹಣ ವರ್ಗಾವಣೆಗೆ ಅನುವು ಮಾಡಿದರೆ,NEFT ವಿಧಾನವು ತುಸು ನಿಧಾನ. RTGS ಮತ್ತು NEFTಗೆ ಅನುಕ್ರಮವಾಗಿ Rs.25+ ಮತ್ತು Rs.6 ದರ ವಿಧಿಸಲಾಗುವುದು(ಕನಿಷ್ಠ).ಅದೇ ನೀವು ಅಂತರ್ಜಾಲ ಮೂಲಕ ಹಣ ವರ್ಗಾವಣೆಯನ್ನು ಸ್ವತ: ಮಾಡಿದರೆ NEFT ಮೂಲಕ ಮಾಡಿದರೆ, ದರ Rs.6. ಆದರೆ ಬ್ಯಾಂಕಿನ ಒಂದು ಖಾತೆಯಿಂದ ಇನ್ನೊಂದಕ್ಕೆ ಹಣ ವರ್ಗಾವಣೆ ಉಚಿತ.
ಹೇಗಿದೆ ಈ ಸೇವಾದರಗಳ ವೈಚಿತ್ರ್ಯ?
Rating
Comments
ಉ: ಬ್ಯಾಂಕ್ ಸೇವಾದರಗಳ ವೈಚಿತ್ರ್ಯ