ಭಗವಂತನ ಪ್ರಿಯ ಭಕ್ತನ ಗುಣಗಳು ೨

ಭಗವಂತನ ಪ್ರಿಯ ಭಕ್ತನ ಗುಣಗಳು ೨

ನಾವೇಕೆ ಭಗವಂತನಿಗೆ ಪ್ರಿಯರಾಗಬೇಕು ?ಸಾಮಾನ್ಯವಾಗಿ ನಮಗೆ ಮಕ್ಕಳೆಂದರೆ ಪ್ರಿಯ .ಅವುಗಳ ಆಟ ಪಾಠ ತೊದಲ್ನುಡಿ ಎಲ್ಲವೂ ನಮಗೆ ಆನಂದವನ್ನುಂಟು ಮಾಡುತ್ತವೆ .ಯಾವ ಸ್ವಾರ್ಥವಿಲ್ಲದೆ ಅವುಗಳು ಆಡುತ್ತವೆ .ನಾವು ಮೆಚ್ಚಿ ಅವಕ್ಕೆ ಇಷ್ಟವಾದುದನ್ನು ಕೊಡುತ್ತೇವೆ .ಹಾಗೆ ನಮ್ಮ ನಡತೆ ,ಗುಣಗಳನ್ನು ನೋಡಿ ಅವನಿಗೆ ಪ್ರಿಯವೆನಿಸಿದರೆ ಪರಮಾತ್ಮ ನಮಗೆ ಬ್ರಹ್ಮಾನಂದವನ್ನು ಕರುಣಿಸುತ್ತಾನೆ .
*******ಯಾವ ವ್ಯಕ್ತಿ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವನೋ ತನ್ನೆಲ್ಲವನ್ನೂ ಭಗವಂತನಿಗೆ ಅರ್ಪಿಸಿರುವನೋ ,ಸುಖ ದುಃಖಗಳನ್ನೂ ಸಮಭಾವದಿಂದ ಸ್ವೀಕರಿಸುವನೋ ಆ ವ್ಯಕ್ತಿ ದೇವ ಪ್ರಿಯನಾಗುತ್ತಾನೆ.ಮನುಷ್ಯನ ಸಹಜ ಗುಣ ಅಳು ಬಂದಾಗ ಅಳುವುದು ನಗು ಬಂದಾಗ ನಗುವುದು ಇವುಗಳನ್ನು ಸಮಭಾವದಿಂದ ಸ್ವೀಕರಿಸುವುದಾದರೂ ಹೇಗೆ? ಕಷ್ಟಗಳು ಬಂದಾಗ ಇಡೀ ಪ್ರಪಂಚವೇ ತಲೆಯ ಮೇಲೆ ಬಿದ್ದಿತೇನೋ ಎಂಬಂತೆ , ಇಲ್ಲಾ ಸುಖದ ದಿನಗಳು ಬಂದಾಗ ಇಡೀ ಪ್ರಪಂಚವೇ ಕಾಲ ಕೆಳಗೆ ಬಂದಾದುವುದು ತಪ್ಪು .ಎಲ್ಲದಕ್ಕೂ ಕಾರಣಗಳಿವೆ ಮತ್ತು ಅದನ್ನು ಯೋಚಿಸಿ ತಿಳಿಯಬೇಕಾದುದು ನಮ್ಮ ಕರ್ತವ್ಯ .ಚಿಂತನೆ ಅಥವಾ ತಪಸ್ಸು ನಮ್ಮನ್ನು ಹೆಚ್ಚು ಹಣ್ಣಾಗುವಂತೆ ಮಾಡುತ್ತದೆ .ಯಾವ ವ್ಯಕ್ತಿ ಬೇರೆಯವರ ಮಾತುಗಳಿಂದ ಉದ್ವೆಗಕ್ಕೊಳಗಾಗುವುದಿಲ್ಲವೋ ಮತ್ತು ತನ್ನ ಮಾತುಗಳಿಂದ ಯಾರನ್ನೂ ಉದ್ವೆಗಕ್ಕೊಳಗಾಗುವಂತೆ ಮಾಡುವುದಿಲ್ಲವೋ ಆ ವ್ಯಕಿ ಭಗವತ್ಪ್ರಿಯನು ಭಯ ಅಸೂಯೇಗಳಿಂದ ಮುಕ್ತನಾದವನು ಸಮಸಿತ್ತವನ್ನು ಕಾಯ್ದುಕೊಂದಿರುವವನು ಕೃಷ್ಣ ಪ್ರಿಯನು .ಕಷ್ಟ ನಷ್ಟಗಳಿಗೆ ಭಯಪಡದೆ ಇನ್ನೊಬ್ಬರ ಏಳಿಗೆಯನ್ನು ಕಂಡು ಅಸೂಯೆಪಡದೆ ಇರುವುದು ಪ್ರಿಯ ಭಕ್ತನ ಗುಣ.ಸಣ್ಣ ವ್ಶಯಗಳಿಗೆ ಉದ್ವೆಗಕ್ಕೊಳಗಾಗಿ ಸಂಬಂಧಗಳನ್ನೇ ಕಡಿದುಕೊಂಡಿರುವ ಉದಾಹರಣೆಗಳಿವೆ ನಷ್ಟಕ್ಕೊಳಗಾದ ಉದಾಹರಣೆಗಳೂ ಇವೆ.ಒಂದೆರಡು ನಿಮಿಷ ಸಮಾಧಾನ ಚಿತ್ತರಾಗಿ ಯೋಚಿಸಿ ಮುಂದಡಿ ಇಡುವುದರಿಂದ ಲಾಭವೇ ಹೊರತು ನಷ್ಟವಿಲ್ಲ.ಯಾವ ವ್ಯಕ್ತಿ ಆಸೆಗಳಿಂದ ದೂರವೋ ಅಂತರಂಗ ಬಹಿರಂಗ ಶುದ್ಧನೋ ಮಾನವ ಜನ್ಮದ ಉದ್ದೇಶವನ್ನು ಅರಿಯಲು ಪ್ರಯತ್ನ ಪಡುತ್ತಿರುವನೋ ಮತ್ತು ಅರಿತಿರುವನೋ ಸ್ವಾರ್ಥವನ್ನು ತ್ಯಾಗ ಮಾಡಿರುವನೋ ಆತನು ಭಗವನ್ಮಿತ್ರನು.ಶತ್ರು ಮಿತ್ರನನ್ನು ಸಮಭಾವದಿಂದ ನೋದತಕ್ಕವನು ಜಂಗಮ ಮನವಿಲ್ಲವ್ನು ಆ ಧಾತನಿಗೆ ಪ್ರಿಯನಾಗುತ್ತಾನೆ
******************** ಸನ್ಮಂಗಳಾನಿ ಭವಂತು *********************************
ಮುಗಿಯುತು

Rating
No votes yet