ಭಗವದ್ಗೀತೆ ಕೇವಲ ಇದೊಂದು ಗ್ರಂಥವಲ್ಲ ; ನಮ್ಮ ಜೀವನದ ಮಾರ್ಗದರ್ಶಕ

ಭಗವದ್ಗೀತೆ ಕೇವಲ ಇದೊಂದು ಗ್ರಂಥವಲ್ಲ ; ನಮ್ಮ ಜೀವನದ ಮಾರ್ಗದರ್ಶಕ

ಭಗವದ್ಗೀತೆಗಿಂತ ಶ್ರೇಷ್ಠವಾದ ಗ್ರಂಥ ಇನ್ನೊಂದಿಲ್ಲ.ಅಲ್ಲದೆ ಹಿಂದೂ ಧರ್ಮದಲ್ಲಿ ಅತ್ಯಂತ ಪೂಜನೀಯವಾದ ಗ್ರಂಥ. ಇದು ಮನುಷ್ಯನ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವ ಮಾರ್ಗದರ್ಶನ. ನಮ್ಮ ಹಿಂದೂ ಧರ್ಮದಲ್ಲಿ ಭಗವದ್ಗೀತೆಯ ಬಗ್ಗೆ ಅರಿವಿಲ್ಲದ ಅದೆಷ್ಟೊ ಜನರಿದ್ದಾರೆ. ಎಷ್ಟೋ ಜನಕ್ಕೆ ಭಗವದ್ಗೀತೆ ನಮ್ಮ ಪವಿತ್ರ ಗ್ರಂಥ ಎಂಬುದೆ ತಿಳಿದಿಲ್ಲ. ಇಂದಿನ ಯುವ ಪೀಳಿಗೆಯೂ ಇದಕ್ಕೆ ಹೊರತಾಗಿಲ್ಲ. ಈ ಮಧ್ಯೆ ಹಿಂದೂಗಳು ಮುಖ್ಯವಾಗಿ ಒಂದು ದಿನವನ್ನು ನೆನಪಿನಲ್ಲಿ ಇಡಲೇ ಬೇಕು ಅದು ೧೮೯೩, ಸೆಪ್ಟೆಂಬರ್ ೧೧. ಅಂದು ಸ್ವಾಮಿವಿವೇಕಾನಂದರು ಅಮೇರಿಕದ ಚಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಭಗವದ್ಗೀತೆಯ ತತ್ವಗಳ ಬಗ್ಗೆ ಇಡೀ ವಿಶ್ವಕ್ಕೆ ಅದರ ಮಹತ್ವವನ್ನು ತಿಳಿಸಿ, ವಿಶ್ವವೇ ಭಾರತವನ್ನು ಗೌರವಿಸುವಂತೆ ಮಾಡಿದ್ದರು.

ಎಲ್ಲ ಧರ್ಮಗಳಲ್ಲೂ ಒಂದೊಂದು ಧರ್ಮಗ್ರಂಥ ಇದೆ.ಅದರಂತೆ ಅವರು ತಮ್ಮ ಧರ್ಮಗ್ರಂಥಕ್ಕೆ ಒಂದು ಪೂಜನೀಯ ಸ್ಥಾನವನ್ನು ನೀಡಿ ತಮ್ಮ ಮನೆಯ ಪೂಜಾ ಸ್ಥಳದಲ್ಲಿ ಇಡುವ ಜೊತೆಗೆ ಆ ಗ್ರಂಥದ ಬಗ್ಗೆ ತಿಳಿದಿದ್ದಾರೆ. ಅತ್ಯಂತ ಬೇಸರದ ವಿಷಯ ಎಂದರೆ ಈ ಮಾತು ಹಿಂದೂಗಳಿಗೆ ಅನ್ವಯಿಸುವುದಿಲ್ಲ. ಹಿಂದೂಗಳು ಭಗವದ್ಗೀತೆ ಬಗ್ಗೆ ತಿಳಿದಿರುವವರಿಗಿಂತ ತಿಳಿಯದೆ ಇರುವವರ ಸಂಖ್ಯೆಯೇ ಅಧಿಕವಾಗಿದೆ. ನಾವು ಪ್ರಮುಖವಾಗಿ ಗಮನಿಸಬೇಕಾಗಿರುವ ವಿಷಯ ಇನ್ನೊಂದು ಇದೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಮಾಡಬೇಕೆಂದು ಪ್ರಸ್ತಾಪಿಸಿದಾಗಲೆಲ್ಲ ಅಲ್ಲಲ್ಲಿ ವಿರೋಧಿ ಅಲೆಗಳು ಬರಲಾರಂಭಿಸುತ್ತದೆ.ಭಗವದ್ಗೀತೆ ನಿಜವಾಗಿ ಹೇಳಬೇಕೆಂದರೆ ಇದು ಯಾವುದೇ ಜಾತಿಗೆ ಅಥವಾ ಮತಕ್ಕೆ ಮಾತ್ರ ಸಂಭಂದಿಸಿದಲ್ಲ.ಇದು ಮಾನವನ ಜೀವನ್ಮೌಲ್ಯವನ್ನು ಎತ್ತಿ ಹಿಡಿಯುವ ಕೈಗನ್ನಡಿ.ಭಗವದ್ಗೀತೆಯನ್ನು ವಿರೋಧಿಸುವ ವಿರೋಧಿಗಳು ಇದನ್ನು ತಿಳಿದುಕೊಳ್ಳುವ ಅಗತ್ಯವಿದೆ.
ಇದನ್ನೆಲ್ಲ ಪ್ರಸ್ತುತಪಡಿಸುವ ಹಿಂದಿರುವ ಅಂಶ ಕೇವಲ ಇಷ್ಟೇ ಹಿಂದೂಗಳಲ್ಲಿ ಧರ್ಮಗ್ರಂಥದ ಬಗ್ಗೆ ಜ್ಞಾನವಿರಲಿ ಎಂಬುದಷ್ಟೆ. ನಮ್ಮಲ್ಲಿ ಸಾಕಷ್ಟು ಸಂಘಸಂಸ್ಥೆಗಳು, ದೇವಾಲಯ ಮಠಗಳು ಇದ್ದರೂ ಭಗವದ್ಗೀತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿಫಲವಾಗಿವೆ.ನಮ್ಮಲ್ಲಿ ಪ್ರಮುಖವಾಗಿ ಜಾಗೃತೆಯ ಕೊರತೆ ಎದ್ದು ಕಾಣುತ್ತಿದೆ. ಇದಕ್ಕಾಗಿ "ಭಗವದ್ಗೀತೆ ಅಭಿಯಾನ"ದ ಅವಶ್ಯಕತೆ ಇದೆ.

ನಮ್ಮಲ್ಲಿ ಭಗವದ್ಗೀತೆ ನಿಯಮಗಳ ಬಗ್ಗೆ, ಇದನ್ನು ಮನೆಯಲ್ಲಿ ಇರಿಸುವ ಬಗ್ಗೆ ಇಂದಿಗೂ ಸಾಕಷ್ಟು ಗೊಂದಲ ಇದ್ದಿದ್ದರಿಂದಲೇ ಜನರಲ್ಲಿ ಈ ಬಗ್ಗೆ ತಿಳುವಳಿಕೆ ಇಲ್ಲದಂತಾಗಿದೆ.ಭಗವದ್ಗೀತೆಯ ಬಗ್ಗೆ ಜ್ಞಾನ ಇರುವವರು ಇನ್ನೊಬ್ಬರಿಗೆ ಅದರ ಬಗ್ಗೆ ತಿಳಿಸಿ ಆ ಮೂಲಕ ಎಲ್ಲರಿಗೂ ಭಗವದ್ಗೀತೆಯ ಮಹತ್ವದ ಅರಿವಾಗಲಿ ಎಂಬುದೇ ನಮ್ಮ ಹಾರೈಕೆ.

- ಗಣೇಶ್ ಮೇಸ್ತ

File attachments
Rating
Average: 1 (1 vote)

Comments

Submitted by shreekant.mishrikoti Sat, 03/30/2019 - 18:59

ಗೆಳೆಯ ಗಣೇಶ್, ಭಗವದ್ಗೀತೆಯು ಹೇಗೆ ಪೂಜನೀಯ, ಅದು ಎತ್ತಿ ಹಿಡಿಯುವ ಜೀವನ ಮೌಲ್ಯಗಳು ಯಾವುವು, ಭಗವದ್ಗೀತೆಯ ಮಹತ್ವ ಏನು ಎಂದು ನೀವು ತಿಳಿಸಿದ್ದರೆ ನಿಮ್ಮ ಬರಹ ಇನ್ನಷ್ಟು ಉಪಯುಕ್ತ ಆಗುತ್ತಿತ್ತು.
ವಂದನೆಗಳು.