ಭಾನುವಾರದ ಮಳೆ, ಪಾಟೀಲರ ನಾಟಕ

ಭಾನುವಾರದ ಮಳೆ, ಪಾಟೀಲರ ನಾಟಕ

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರೆ ಹಲವು ವರ್ಷಗಳ ಕಾಲ ಹಲವು ಸಮುದಾಯಗಳಲ್ಲಿ ಪಾಲ್ಗೊಂಡವರಿಗೆ ಗೊತ್ತಿರುತ್ತದೆ, ಎಲ್ಲರೊಂದಿಗೆ ಬೆರೆತು ಎಲ್ಲರನ್ನೂ ಆಮಂತ್ರಿಸುವ ಈ ರೀತಿ ಸಮುದಾಯಗಳಲ್ಲಿ ಹೊಸತೇನಲ್ಲ ಎಂಬುದು. ಸಮುದಾಯದಲ್ಲಿ ಸಮಾನತೆ ಕಾಣಿಸುವ ಹಲವು ವಿಷಯಗಳಲ್ಲಿ ಇದೂ ಒಂದು.

ಅಂದು 'ನಾಟಕ ಇದೆ, ಬನ್ನಿ' ಎಂದು ಬರೆದ ಲೇಖನ ಸರಿಯಾಗಿ ಪ್ರಕಟವಾಗಿಲ್ಲವೆಂದು ಜಯಲಕ್ಷ್ಮಿಯವರು ಸಂಪರ್ಕಿಸಿದಾಗ ಅದನ್ನು ಸರಿಪಡಿಸುವುದು ಹೇಗೆಂದು ತಿಳಿಸಿ "ನಾವೂ ಬರುತ್ತೇವೆ" ಅಂದಿದ್ದೆ. "ಬರ್ತೀರಾ?" ಎಂದು ಎರಡೆರಡು ಸಾರಿ ಕೇಳಿದ್ದರು, ಇವರೆಲ್ಲ ಕಂಪ್ಯೂಟರ್ ಬಿಟ್ಟು ಹೊರಗೆ ಹೋಗುವುದೇ ನಂಬಲಾಗದು ಎಂಬಂತೆ.

ಭಾನುವಾರ ಬಂತು, ನಾಟಕ ನೋಡೋಕೆ ಹೊರಟಿದ್ದೇನೋ ಸೈ, ಆದರೆ ಎಂದಿನಂತೆ ನಮ್ಮ ಪ್ರೋಗ್ರಾಮಿನಲ್ಲಿ twists ಎಂಡ್ turnsಉ. ಅರವಿಂದ ಮೈಸೂರಿನಿಂದ ಬಂದಿದ್ದ, ಅವ ಹಿಂದಿನ ದಿನ ಫೋನ್ ಮಾಡಿ "ಶ್ರೀನಗರದಲ್ಲಿದೀನಿ, ಸಿಗೋಣ್ವ?" ಅಂದಿದ್ದ.

ದಾರಿಯುದ್ದಕ್ಕು ಮಳೆ ಬೇರೆ ಭೋರ್ ಎಂದು ಹೊಡೆಯುತ್ತಿತ್ತು. ಪಾಲನಿಗೆ "ನೀನು ಆಶ್ರಮ ಬಸ್ ಸ್ಟಾಪಿಗೆ ಬಂದುಬಿಡು" ಎಂದು ಹೇಳಿ ಘಂಟೆಗಳೇ ಆಗಿಹೋಗಿತ್ತು. ಅವ ನಾಲ್ಕೈದು ಕಾಫಿ ಕುಡಿಯುತ್ತ, ನಮಗೆ ಕಾಯುತ್ತ ತಾಳ್ಮೆಯನ್ನು ಪರೀಕ್ಷೆಗೆ ಹಚ್ಚಿದ್ದ.

ಎನ್ ಆರ್ ಕಾಲೋನಿ ಮೇಯ್ನ್ ರೋಡಿನಲ್ಲಿ ಅರವಿಂದನಿಗೆ ಕಾಯುತ್ತಿರುವಾಗ ಧೊಪ್ ಎಂದು ಮರದ ರೆಂಬೆಗಳು ಮುರಿದು ಬೀಳುತ್ತಿದ್ದವು. ಅಲ್ಲೊಬ್ಬ ಮಹಾಶಯನಿಗೆ ಅದೇನು Sixth sense ಬೆಳಗಿತೋ ಸರಿಯಾಗಿ ರೆಂಬೆ ತಲೆಯ ಮೇಲೆ ಬೀಳುವಷ್ಟರಲ್ಲಿ ಬೇರೆ ಕಡೆ ಓಡಿದ್ದ. ನಮ್ಮ ಗ್ಯಾಂಗಿನವರೂ ಇಬ್ಬರು ತಲೆಯ ಮೇಲೆ ಬೀಳಿಸಿಕೊಳ್ಳದಂತೆ ತಪ್ಪಿಸಿಕೊಂಡು ಬಂದ ವಾರ್ತೆ ತಲುಪಿತಾದರೂ ಫುಟೇಜ್ ಸಿಗಲಿಲ್ಲ.

ಇದೆಲ್ಲದರ ನಡುವೆ ಕೊನೆಗೂ ಕಂಪ್ಯೂಟರ್, ಲ್ಯಾಪ್ಟಾಪ್ ಬಿಟ್ಟು ಭಾನುವಾರ ಸಾಯಂಕಾಲ ಹೀಗೇ ಜಯನಗರ, ಬಸವನಗುಡಿ, ಶ್ರೀನಗರಗಳ ನಡುವೆ ಅಲೆದಾಡುವುದಲ್ಲದೆ ಜಯನಗರ ನ್ಯಾಶನಲ್ ಕಾಲೇಜಿನ ಎಚ್ ಎನ್ ಕಲಾಕ್ಷೇತ್ರದಲ್ಲಿ ನಾಟಕವನ್ನೂ ನೋಡಿ ಬಂದೆವು. ಚೆನ್ನಾಗಿತ್ತು. ಬ್ಯಾಕ್ ಸ್ಟೇಜಿನಲ್ಲಿ ಜಯಲಕ್ಷ್ಮಿ ಪಾಟೀಲ್, ದೀಪಾ ರವಿಶಂಕರ್ ಹಾಗು 'ಮುಕ್ತ' ಬಳಗದ ಹಲವರು ಇದ್ದರು. ಕೆಲವು ಫೋಟೋಗಳು ಇಲ್ಲಿವೆ.

ಫೋಟೋಗ್ರಫಿ: ಪಾಲಚಂದ್ರ, ಶಿವು ಮತ್ತು hpn.

 

Rating
No votes yet

Comments