ಭಾಸ್ಕರಾಚರ್ಯರ ಕುರಿತು ವಿನಂತಿ

ಭಾಸ್ಕರಾಚರ್ಯರ ಕುರಿತು ವಿನಂತಿ

 

ಮಹನೀಯರೆ,

ಗಣಿತ /ಖಗೋಲ ಶಾಸ್ತ್ರಜ್ಞ ಶ್ರೀ ಭಾಸ್ಕರಾಚಾರ್ಯರ ಕುರಿತು ನೀವು ಸಾಕಷ್ಟು ಮಾಹಿತಿ ಹೊಂದಿರುವಿರಿ ಎಂದು ತಿಳಿದಿದ್ದೇನೆ. ಆದರೆ  ವಿಷಯ ಅದಲ್ಲ. ನನ್ನ ಇತ್ತೀಚಿನ ನಂಬಿಕೆ ಎಂದರೆ ಈ ಗಣಿತ /ಜ್ಯೋತಿಷ್ಯ ಶಾಸ್ತ್ರಜ್ಞ ನನ್ನ ಹುಟ್ಟೂರಾದ ಬಿಜ್ಜರಗಿಯವನೆಂದು ನನಗೆ ಅನ್ನಿಸುತ್ತಿದೆ. ಅವರ ಹುಟ್ಟೂರು "Bijjada Bida"/ Vijjadaveed/ ಎಂದು ಬರೆಯುತ್ತಾರೆ, ಅದು ಕರ್ನಾಟಕದ್ದೆಂದೂ ಮತ್ತು ಅದು ಸಹ್ಯಾದ್ರಿಯ ಸುತ್ತಲಿನೆಂದೂ ತಿಳಿದುಬರುತ್ತದೆ. ವಿವರಣೆಗಳು ನನ್ನ ಊರಿನದೆಂದು ಅನ್ನಿಸುತ್ತದೆ. ಆದರೆ ಈ ವಿಜ್ಜಡವೀಡ - ಬಿಜ್ಜರಗಿ ಎಂದು ತಿಳಿಯುವುದು ಹೇಗೆ?. ನನಗನ್ನಿಸಿದಂತೆ ಭಾಸ್ಕರಾಚಾರ್ಯರು ,1114 ರಿಂದ 1185 ರವರೆಗೆ ಜೀವಿಸಿದ್ದರು, ಈ ಬಿಜ್ಜಳ 1156-1156 ರಲ್ಲಿ ಕಲಚೂರಿನ ರಾಜಮನೆತನದ ಸಾಮಂತನಾಗಿದ್ದು ಅಧಿಕಾರ ದುರಾಕ್ರಮಣ ಮಾಡಿದಬಗ್ಗೆ ಉಲ್ಲೇಖಗಳಿವೆ. ಈ ಬಿಜ್ಜಳ, ಈ ಕಲ್ಯಾಣಕ್ಕೆ ತೆರಳುವ ಮೊದಲು ಮಂಗಲವಾಡಾ ದಲ್ಲಿ ಇರುತ್ತಿದ್ದ, ಈ ಮಂಗಲವಾಡಾ ಈಗ ಮಹಾರ್ಷ್ಟ್ರದ ಗಡಿಯಲ್ಲಿರುವ ಮಂಗಳವೇಡಾ ಎಂದು ಎಲ್ಲರಿಗೂ ತಿಳಿದ ವಿಷಯ. ಈ ಮಂಗಳವೇಡಾ ಕೊಲ್ಲಪೂರದ ಸಮೀಪವಿದೆ ಮತ್ತು ಕೊಲ್ಲಾಪೂರ ಸಾತಾರಾಗಳು ಸಹ್ಯಾದ್ರಿಯ ಭಾಗಗಳಾಗಿದ್ದು, ಇದು ಭಾಸ್ಕರರಿಗೆ ಉಲ್ಲೇಖಿತವಾದ, ಸಹ್ಯಾದ್ರಿಯನ್ನು ಸುತ್ತುವರೆದ  ವಿಜ್ಜಡವೀಡ ಎಂದು ನನಗನಿಸುತ್ತದೆ. ನನ್ನ ಊರಾದ ಬಿಜ್ಜರಗಿ ಮೊದಲಿನ ಹೆಸರು ತಿಳಿದುಬರುತ್ತಿಲ್ಲ, ನಾನು ತಿಳಿದಂತೆ ಅದು ಬಿಜ್ಜಡ-ಬೀಡ ದಿಂದ ಬಿಜ್ಜರಗಿ ಆಗಿರಬಹುದೆಂದು ಬಲವಾಗಿ ನಂಬುತ್ತಿದ್ದೇನೆ.

 

ನನ್ನ ತಿಳುವಳಿಕೆ ತಪ್ಪಾಗಿಯೂ ಇರಬಹುದು. ಇದು ನನ್ನ ಒಂದು ಕಾತುರವಷ್ಟೇ. ಹಾಗೊಂದು ವೇಳೆ ಭ್ಹಾಸ್ಕರಾಚಾರ್ಯರ ಊರು ನನ್ನ ಬಿಜ್ಜರಗಿಯೇ ಆಗಿದ್ದಲ್ಲಿ ಅದೊಂದು ಗೌರವದ ಪ್ರಶ್ನೆ. ಆದ್ದರಿಂದ ಬಲ್ಲವರು ಇದರ ಕುರಿತು ಯೋಚಿಸಿ ತಮಗನಿಸಿದ್ದನ್ನು- ತಮಗೆ ಗೊತ್ತಿರುವುದನ್ನು- ವ್ಯಾಖ್ಯಾನಿಸಲು ಕಳಕಳಿಯ ವಿನಂತಿ

 

ಕೃಷ್ಣ ಕುಲಕರ್ಣಿ (ಬಿಜ್ಜರಗಿ)

ಮೇಲ್- kekyeke@gmail.com

 

Rating
No votes yet