ಭೀಮಸೇನ ಜೋಷಿ: ನೆನಪಾದದ್ದು
ಲಂಡನ್ನಿನ ರಸ್ತೆಯಲ್ಲಿ ಕಾರ್ ಓಡಿಸುವಾಗ ತುಂಬಾ ದಿನಗಳಾದ ಮೇಲೆ ಭೀಮಸೇನ್ ಜೋಷಿಯನ್ನು ಕೇಳುತ್ತಿದ್ದೆ, ಭೀಮ್ ಪಲಾಸ್ ರಾಗದಲ್ಲಿ 'ಬೇಗುನ ಗುನ ಗಾಯೀಯೆ’ ಹಾಡುತ್ತಿದ್ದರೆ, ಮತ್ತೆ ಹುಬ್ಬಳ್ಳಿಯ ದಿನಗಳು ನೆನಪಾಗುತ್ತಿದ್ದವು. ಹುಬ್ಬಳ್ಳಿಯಲ್ಲಿದಾಗ ಸವಾಯಿ ಗಂಧರ್ವರ ಸ್ಮರಣೆಯ ದಿನಗಳಂದು ತಪ್ಪದೇ ಪ್ರತಿವರ್ಷ ಕುಂದಗೋಳಕ್ಕೆ ಹೋಗುತ್ತಿದ್ದೆವು; ರಾತ್ರಿ ಪೂರ್ತಿ ಸಂಗೀತಸುಧೆ (ಸಂಗೀತದ ರಮ್ ವಿಸ್ಕಿ ಅನ್ನಿ ಬೇಕಿದ್ದರೆ). ಭೀಮಸೇನ ಜೋಷಿ ತಪ್ಪದೇ ಬರುತ್ತಿದ್ದರು. ಆಗ ನಡೆದ ಎರಡು ಘಟನೆಗಳು ತುಂಬ ಸ್ವಾರಸ್ಯಕರವಾಗಿವೆ:
೪೫ ನಿಮಿಷಗಳ ರಾಗಧಾರಿಯ ನಂತರ, ದಾಸರ ಹಾಡನ್ನು ಹಾಡಿದರು. ಹಾಡು ಮುಗಿಯುತ್ತಿದ್ದಂತೆ, ಪ್ರೇಕ್ಷಕರಲ್ಲಿ ಕೆಲವರು 'ವಚನ, ವಚನ', ಅನ್ನಲು ಶುರು ಮಾಡಿದರು. ಆಗ ಭೀಮಣ್ಣ ಖಾರವಾಗಿ ಹೇಳಿದರು, 'ವಚನಾ ಹಾಡ್ಲಿಕ್ಕೆ ಬರೂದುಲ್ಲ, ವಚನ ವಾಚನಾ ಮಾಡಬೇಕು!' ಸಭೆ ದಂಗು.
ಇನ್ನೊಮ್ಮೆ ಹೀಗೇ ಆಯಿತು, ರಾಗಧಾರಿಯ ನಂತರ ಭೀಮಣ್ಣ ಗಂಟಲು ಸರಿಮಾಡಿಕೊಳ್ಳುತ್ತಿದ್ದರು. ಸರಿ, ಶ್ರೋತೃಗಳಲ್ಲಿ ಕೆಲವರು, 'ದಾಸರ ಹಾಡು’ (ಕನ್ನಡ) ಎಂದೂ, ಇನ್ನೊ ಕೆಲವರು 'ಅಭಂಗ್' (ಮರಾಠಿ) ಎಂದೂ ಶುರುವಚ್ಚಿಕೊಂಡರು. ಭೀಮಣ್ಣನಿಗೆ ಸೀಟ್ಟು ಬಂದಿದ್ದು ನೋಡಬೇಕಿತ್ತು, 'ಸಂಗೀತಕ್ಕ ಭಾಷಾ ಇರೂದುಲ್ಲ’ ಎಂದ್ಹೇಳಿ ಇನ್ನೊಂದು ರಾಗ ಶುರು ಮಾಡಿದರು.
Rating
Comments
ಉ:
In reply to ಉ: by Aram
ಉ: