ಭೀಮಸೇನ ಶತಮಾನ

ಭೀಮಸೇನ ಶತಮಾನ

ಚಿತ್ರ

ಘನ ಘರಾನಾಗಳ ಸುಧೆಯ ಸಂಚಯಿಸಿ
ಎದೆಯಿಂದ ಎದೆಗೆ ಸಿಂಚನಗೊಳಿಸಿ ಸತತ
ಧರೆಗೆ ಸುಸ್ವರವಾದ, ಮೆರೆವ ದನಿಯಾದ
ಮೊರೆವ ಸಾಗರ ಶಾರೀರ ಸಿರಿ ಅಮಿತನೀತ

ಪುರಂದರ ತುಕಾ ಅಭಂಗ ವಾಣಿಯಾದ
ಸವಾಯಿ ಗಂಧರ್ವ ಗುರುವಿನ ಗರ್ವನಾದ 
ಸಂಗೀತಗರಡಿಯ ಖಯಾಲ ಗಾರುಡಿಗನೀತ
ಭೀಮಸೇನ ಕಡೆದ ತಾನಾಲಾಪ ನವನೀತ

ನೆನಪ ಹಾಡಾದ

ಗಾನ ಘಮದಿಂದ ಮನ ಚಿತ್ತಾಗಿಸಿದವನಿಗೆ
ಜನ್ಮಶತಮಾನೋತ್ಸವದ ಅಕ್ಷರದ ನಮನ

 

Rating
Average: 4.5 (2 votes)