ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

ಮತದಾರ ಪ್ರಜಾಕೋಟಿ ಬಾಲಮುದುಡಿಕೊಂಡಿದ್ದುಬಿಡಬೇಕೇ?

 ಉಪಲೋಕಾಯುಕ್ತರು, ಹುದ್ದೆ ಬಿಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ. ಸ್ವತಃ ಕಾನೂನು ಮತ್ತು ಸಂವಿಧಾನದ ಉದ್ಧಾಮ ಪರಿಣಿತರವರು. ಅವರ ನಿಲವಿಗೆ ಸಾಂವಿಧಾನಿಕ, ತಾಂತ್ರಿಕ ಸಮರ್ಥನೆ ಇದ್ದೇ ಇರುತ್ತದೆ. ಆದರೆ ಇಡೀ ಬೆಳವಣಿಗೆ, ಸಹಜ-ಸಾಧಾರಣ ’ನಾಡಾಡಿ’ ಪ್ರಜೆಗಳ ವಿವೇಕಕ್ಕೆ ಕಕವಾ ಹಿಡಿಸಿರದಿದ್ದರೆ ಆಶ್ಚರ್ಯ! ಉಪ-ಆಯುಕ್ತದ ನಿಯುಕ್ತಿ, ಅದಕ್ಕೆ ಮುಖ್ಯ ನ್ಯಾಯಮೂರ್ತಿಗಳ ಬೈಗುಳ, ’ಬನ್ನಿ’ ಎಂದು ಕರೆದು ಪ್ರಮಾಣವಚನ ಬೋಧಿಸಿದ ರಾಜ್ಯಪಾಲರಿಂದಲೇ, ಇದಕ್ಕೆ ಬೆಂಬಲ... ಮತದಾರ ಪ್ರಜಾಕೋಟಿ, ’ಕೇಳಲಿಕ್ಕೆ ನಾವ್ಯಾರು?’ ಎಂದು ಬಾಲಮುದುರಿಕೊಂಡಿದ್ದುಬಿಡಬೇಕಾದ ಸನ್ನಿವೇಶ! ಹಿಂದೆ ಉಪಲೋಕಾಯುಕ್ತ ಹುದ್ದಯಲ್ಲಿದ್ದವರೂ ಮತ್ತು ಅದಕ್ಕೆ ಮೇಲಿನ ಲೋಕಪಾಲಹುದ್ದೆಗೆ ನಿಯೋಜನೆಗೊಂಡ ನ್ಯಾವೇತ್ತರುಗಳು, ಸಂವಿಧಾನದ ಹಕ್ಕು-ಅಧಿಕಾರಗಳ ಪ್ರಶ್ನೆ ಎತ್ತಿ, ಸವಾಲೆಸೆಯದೆ, ತಮ್ಮ ವ್ಯಕ್ತಿತ್ವದ ಮತ್ತು ಹುದ್ದೆಯ ಮರ್ಯಾದಸ್ಥಿಕೆ ಉಳಿಸಿಕೊಂಡು ಹೊರಬಂದರೆಂದುಕೊಂಡಿದ್ದೆವು. ಆದರೆ ಈಗಿನ ಬೆಳವಣಿಗೆ, ಕಡು ಸತ್ಯವೊಂದನ್ನು ಕಂಡರಿಸಿದೆ; ದೇಶದ ಸಂವಿಧಾನ, ಕಾನೂನುಗಳು ಎಷ್ಟೇ ಮಹೋನ್ನತಿಯದಾದರೂ, ಅದು ಸಾರ್ಥಕವಾಗುವುದು, ಜಾರಿಗೊಳಿಸುವ ಉನ್ನತ ವ್ಯಕ್ತಿಗಳ ಸಂಸ್ಕೃತಿ, ಸಂಸ್ಕಾರ, ಪ್ರಾಮಾಣಿಕತೆ, ಆತ್ಮವಂತಿಕೆಗಳಿಂದ ಮಾತ್ರವೇ!
 

Rating
No votes yet

Comments