ಮತ್ತದೇ ಸಂಜೆ ಮತ್ತದೇ ಬೇಸರ?!
ಮತ್ತದೇ ಸಂಜೆ ಮತ್ತದೇ ಬೇಸರ
ಮನಸು ಅರಸುತಿದೆ ನೆನಪಿನಾದರ
ಹುದುಗಿದೆ ಮಾತುಗಳು ನೂರು- ನೂರು
ಹೊರಡದು ಏನಂದರೂ ಚೂರು- ಪಾರು..........
ಮೌನವನು ಮೆರೆಸಿತ್ತು
ತಾನವನು ತಣಿಸಿತ್ತು
ಲಹರಿಯನು ಹರಿಸಿತ್ತು
ನಿನ್ನನು ನೆನೆಸಿತ್ತು..........
ಪೋಷಿಸಿದ ಆ ನೆನಪು ಬಿಚ್ಚಿಕೊಳ್ಳುತ್ತಾ
ಪದರ-ಪದರಗಳು ಅರಳುತ್ತಾ
ಪ್ರಣಯದ ಪರಾಗವನು ಪಸರಿಸುತ್ತಾ
ಪರವಶವಾಗಿ ನಿನ್ನ ಬರವನ್ನೇ ನೋಡುತ್ತಾ..........
ಹೃದಯ ಬಯಸುತಿದೆ ಸ್ನೇಹದಾಕ್ಷಣ
ಬಂದು ತೋರುವೆಯಾ ಒಲವಿನಾಕ್ಷಣ?
ಬರದು ಮಾತುಗಳು ಈ ಕ್ಷಣ
ಬೇಕಿಹುದು ನಿನ್ನ ಸನಿಹ ತಕ್ಷಣ..........
ನಿನ್ನ ಮೊಗವನು ಕಂಡೆ ಚಿಗುರೆಲೆಗಳಲಿ
ನಿನ್ನ ಸ್ಪರ್ಶವನನುಭವಿಸಿದೆ ತಗಲಿದ ತಂಗಾಳಿಯಲಿ
ನಿನ್ನ ಧ್ವನಿಯನು ಆಲಿಸಿದೆ ಹರಿವ ನೀರಿನ ಕಲ-ಕಲರವದಲಿ
ನಿನ್ನ ನೋಟಕೆ ಕಾದೆ ಕಾಲ್ದಾರಿಯಲಿ..........
ಕಾದಿರುವೆ ನಿನಗಾಗಿ
ಸಂಜೆಕೆಂಪಿನವರೆಗೆ
ಬರದಿರಲು ನೀನಾಗಿ
ಹೇಗೆ ತೋರಲಿ ನಿನಗೆ
ನನ್ನ ಈ ಪ್ರೇಮದ ಮೌನ-ಬೇಗೆ?..........
Rating
Comments
ಉ: ಮತ್ತದೇ ಸಂಜೆ ಮತ್ತದೇ ಬೇಸರ?!
In reply to ಉ: ಮತ್ತದೇ ಸಂಜೆ ಮತ್ತದೇ ಬೇಸರ?! by bhavanilokesh mandya
ಉ: ಮತ್ತದೇ ಸಂಜೆ ಮತ್ತದೇ ಬೇಸರ?!
ಉ: ಮತ್ತದೇ ಸಂಜೆ ಮತ್ತದೇ ಬೇಸರ?!
In reply to ಉ: ಮತ್ತದೇ ಸಂಜೆ ಮತ್ತದೇ ಬೇಸರ?! by natarajgowda.vitu
ಉ: ಮತ್ತದೇ ಸಂಜೆ ಮತ್ತದೇ ಬೇಸರ?!