ಮನಸ್ಸನ್ನು ಓದುವ ಶಕ್ತಿ ಈಗ ಬಂದಿದೆ!

ಮನಸ್ಸನ್ನು ಓದುವ ಶಕ್ತಿ ಈಗ ಬಂದಿದೆ!

ಬೇರೋಬ್ಬರ ಮನಸ್ಸನ್ನು ಓದುವಾದಾಗಲಿ, ತಿಳಿಯುದಾಗಲಿ ಅತಿ ಕಷ್ಟ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನಿಮ್ಮ ಮುಂದೆಯೇ ನಿಂತು ನಿಮ್ಮನ್ನು ಮನಸ್ಸಿನಲ್ಲಿ ಯಾರಾದರು ಬ್ಯೆದುಕೊಳ್ಳುತ್ತಿದ್ದರೆ ಇನ್ನು ಪತ್ತೆ ಮಾಡಿಬಿಡಬಹುದು. ಮನಸ್ಸನ್ನು ಓದುವ ತಂತ್ರಜ್ನಾನವನ್ನು ವಿಜ್ನಾನಿಗಳು ಈಗ ಸಂಶೋಧಿಸಿದ್ದಾರೆ.
ಮನುಷ್ಯನ ಮನಸ್ಸನ್ನು ಓದಬೇಕು ಅವರ ಮನಸ್ಸಿನಲ್ಲಿರುವುದನ್ನು ತಿಳಿಯಬೇಕೆಂದು ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಬಂದಿದ್ದಾನೆ. ರಾಜರ ಕಾಲದಲ್ಲಿ ಶತ್ರುಗಳನ್ನು ಸರೆಹಿಡಿದು ಅವರಿಂದ ರಹಸ್ಯಗಳನ್ನು ತಿಳಿದುಕೊಳ್ಳಲು ಚಿತ್ರಹಿಂಸೆ ಕೊಡುವುದು , ಕಳ್ಳನನ್ನು ಬಂಧಿಸಿ ಅವನ ಬಾಯನ್ನು ಬಿಡಿಸಲು ಪೋಲೀಸರು ಕಷ್ಟ ಪಡುವುದು, ಪ್ರೇಮಿಗಳು ತಾವು ಪ್ರೀತಿಸಿದವರ ಮನಸ್ಸಿನಲ್ಲಿ ಪ್ರೀತಿಯಿದಯೇ ಎಂದು ತಿಳಿದುಕೊಳ್ಳುವುದು, ಅಪ್ಪ-ಮಕ್ಕಳ ನಡುವಿನ ಸಂಬಂಧದ ಭಾವನೆಗಳು, ಗಂಡ- ಹೆಂಡಂದಿರ ನಡುವಣ ಭಾವನೆಗಳನ್ನು ಪತ್ತೆ ಹಚ್ಚಲು ಈಗಲೂ ಎಷ್ಟು ಕಷ್ಟ ಪಡುತ್ತಿಲ್ಲ? ಬಹುಶಃ ಇನ್ನು ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಮನುಷ್ಯನ ಈ ಜಟಿಲವಾದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಅಮೇರಿಕಾದ ನರ ಶಾಸ್ತ್ರ ವಿಜ್ಣಾನಿ ರೆಬೆಕ್ಕಾ ಸ್ಯಾಕ್ಸ್ , ತನ್ನ ಪ್ರಯೋಗಲಾಯದಲ್ಲಿ ಶ್ರಮಿಸುತ್ತಿದ್ದಾರೆ. ಮನುಷ್ಯನ ಮಿದುಳು ಬಹು ಕ್ಲಿಷ್ಟಕರವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ಹೇಗೆ ನಿಭಾಯಿಸುತ್ತದೆ. ಒಳ್ಳೆಯ, ಕೆಟ್ಟ ನಂಬಿಕೆಗಳನ್ನು ಹೇಗೆ ಬೆಳೆಸಿಕೊಳ್ಳುತ್ತದೆ. ಭಾಷೆಯನ್ನು ಹೇಗೆ ಕಲಿತುಕೊಳ್ಳುತ್ತದೆ ಎಂಬುದನ್ನು ತಿಳಿದುಕೊಳ್ಳುವುದೇ ಅವರ ಮುಖ್ಯ ಗುರಿ. ಈ ಪ್ರಯತ್ನದಲ್ಲಿ ಅವರಿಗೆ ತಿಳಿದಿದ್ದು ಮನಸ್ಸನ್ನು ಓದುವುದು ಹೇಗೆ ಎಂದು .
ಓದುವುದು ಹೇಗೆ?
ಮನುಷ್ಯನ ಭಾವನೆಗಳನ್ನು ನೇರವಾಗಿ ಓದುವುದು ಕಷ್ಟ. ಅದಕ್ಕೆ ಅವರ ಹಿನ್ನೆಲೆ, ಅನುಭವ ಎಲ್ಲವನ್ನೂ ಅರ್ಥೆಸಿಕೊಳ್ಳಬೇಕಾಗುತ್ತದೆ. ನರ ಶಾಸ್ತ್ರ ವಿಜ್ಣಾನ ಹಾಗೂ ಕಾಗ್ನೆಟಿವ್ ಡಿಸೋನೆನ್ಸ್ ಗ್ರಾಹ್ಯಶಾಸ್ರ)ದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸ್ಯಾಕ್ಸ್ ಕಂಡುಹಿಡಿದಿದ್ದು- ’ಭಾವನೆಗಳನ್ನು ನೇರವಾಗಿ ತಿಳಿದುಕೊಳ್ಳುವುದು ಕಷ್ಟ. ಆದರೆ, ವ್ಯಕ್ತಿಯೊಬ್ಬ ಬೇರೆಯವರ ಬಗ್ಗೆ ಯೋಚಿಸಿವಾಗ ಮಿದುಳಿನ ಯಾವ ಭಾಗ ಕೆಲಸ ಮಾಡುತ್ತಿದೆ ಎಂಬುದನ್ನು ತಿಳಿಯಬಹುದು ಎಂದು.ಈ ಪ್ರಕ್ರಿಯೆಯಲ್ಲಿ ಮಿದುಳಿನಲ್ಲಿ ರಕ್ತ ಹರಿಯುವ ವೇಗವನ್ನು ಮೊದಲು ಓದಲಾಗುತ್ತದೆ. ಈ ವಿಧಾನಕ್ಕೆ ’ ಅಯಾಸ್ಕಾಂತೀಯ ಅನುರಣನ ಪ್ರತಿಬಿಂಬ ಕ್ರಿಯೆ’ (ಎಫ಼್ ಎಮ್ ಅರ್ ಐ) ಎನ್ನುತ್ತಾರೆ. ಈ ಕ್ರಿಯೆಯನ್ನು ಪ್ರಾಯೋಗಿಕವಾಗಿ ವ್ಯಕ್ತಿಯೊಬ್ಬರ ಮೇಲೆ ಪ್ರಯೋಗಿಸಿದಾಗ ಆಕಸ್ಮಿಕವಾಗಿ ಆವಿಷ್ಕಾರಗೊಂಡ ಸಂಗತಿ ಮಾನವ ಲೋಕದ ಅತಿ ವಿಸ್ಮಯ ಸಂಶೋಧನೆಗಳಲ್ಲಿ ಒಂದಾಯಿತು. ಇದರಲ್ಲಿ ತಿಳಿದದ್ದು, ಎಫ಼್ ಎಂ ಆರ್ ಐ ವಿಧಾನವನ್ನು ಬಳಸಿಕೊಂಡು ಭಾವನೆಗಳನ್ನು ಧ್ವನಿಯನ್ನಾಗಿ ಅಥವ ಅಕ್ಷರಗಳನ್ನಾಗಿ ಪರಿವರ್ತಿಸಬಹುದು ಎಂದು.
ಮಿದುಳಿನ ಒಳಹೊಕ್ಕಾಗ- ವ್ಯಕ್ತಿಯೊಬ್ಬ, ವಿವಿಧ ಭಾವನೆಗಳಾದ ಕೋಪ, ಪ್ರೀತಿ , ನಗು, ಶಾಂತ ಸ್ಥಿತಿಗಳಲ್ಲಿ ಹೇಗೆ ಪ್ರತಿಕ್ರಿಯಿಸುತ್ತಾನೆ. ಅವನ ದೇಹ ಭಾಷೆ ಹೇಗಿರುತ್ತದೆ ಎಂದು ಅಧ್ಯಯನ ಮಾಡಬೇಕಾಗುತ್ತದೆ. ಆನಂತರ ಎಫ಼್ ಎಂ ಅರ್ ಐ ವಿಧಾನದ ಮೂಲಕ ನಿಖರವಾದ ಭಾವನೆಗಳನ್ನು ಪತ್ತೆ ಹಚ್ಚಿ ಓದಿಕೊಳ್ಳಬಹುದು.ಈ ಅಧ್ಯಯನ ಕಷ್ಟವೇನಲ್ಲ ಎಂಬುದು ಸ್ಯಾಕ್ಸ್ ನ ಅಭಿಪ್ರಾಯ . ವ್ಯೆದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಬಳಕೆಯಲ್ಲಿರುವ ಎಂ ಅರ್ ಐ (ಮ್ಯಾಗ್ನೆಟಿಕ್ ರೆಸೋನ್ಯಾನ್ಸ್ ಇಮೇಜಿಂಗ್), ಇಇಜಿ (ಎಕೋ ಎನ್ಸೆಫಾಲೋಗ್ರಫಿ), ಸಿಟಿ (ಕಂಪ್ಯೂಟರ್ ಟೋಮೋಗ್ರಫಿ) ಸ್ಕ್ಯಾನಿಂಗ್ಗಳ ಮೂಲಕ ಗ್ರಾಫ಼್ ಗಳು ಹಾಗೂ ವಿವಿಧ ಅಯಸ್ಕಾಂತೀಯ ಚಿತ್ರಗಳನ್ನು ಪಡೆಯುವ ಹಾಗೆ, ಕೊಂಚ ಮಾರ್ಪಾಡುಗಳ ಜತೆಗೆ ಶಬ್ದ, ಅಕ್ಶರ ಹಾಗೂ ದೃಶ್ಯಗಳನ್ನು ಓದಬಹುದಾಗಿದೆ. ಈಗಾಗಲೇ ಸ್ಯಾಕ್ಸ್ ಕೆಲವು ಶಬ್ದ, ಅಕ್ಶರಗಳನ್ನು ಪಡೆದಿದ್ದು, ಅತಿ ಮೂಲಭೂತವಾದ ಶಬ್ದ ಅಕ್ಷರಗಳನ್ನುಪಡೆದಿದ್ದಾರೆ. ಅದರಲ್ಲಿರುವ ತಪ್ಪುಗಳನ್ನು ಸರಿಪಡಿಸಿದರೆ ಕೆಲಸ ಪೂರ್ಣಗೊಂಡಂತೆ. ಕನಸುಗಳನ್ನು ರೆಕಾರ್ಡ್ ಮಾಡಿಕೊಂಡು ನಂತರ ನೋಡಿದರೆ ಎಷ್ಟು ಚೆನ್ನ ಅಲ್ಲವೇ? ಇದರ ಪ್ರಯತ್ನದಲ್ಲಿ ಈಗ ಸ್ಯಾಕ್ಸ್ ಹಾಗೂ ವಿಜ್ನಾನಿಗಳ ತಂಡ ತೊಡಗಿದೆ ವಿವಿಧ ದೇಶಗಳ ಗೊಢಚರ್ಯೆ ವಿಭಾಗಗಳಲ್ಲಿ ದೇಶದ ರಕ್ಷಣೆಗೆ ಸಂಬಂಧಿತ ರಹಸ್ಯಗಳನ್ನು ಭೇದಿಸಲು, ಮನೋರೋಗಿಗಳಿಗೆ ಸಮರ್ಪಕ ಚಿಕಿತ್ಸೆಯನ್ನು ನೀಡಲು, ದಿನ ನಿತ್ಯದ ಜೀವನದಲ್ಲಿ ಸಂಬಂಧಗಳನ್ನು ಸರಿಯಾಗಿ ಅರ್ಥ್ಯೆಸಲು, ಶಿಕ್ಷಣ ವ್ಯವಸ್ಥೆಯಲ್ಲಿ ಸರಿಯಾಗಿ ವಿಷಯಗಳನ್ನು ಅರ್ಥ ಮಾಡಿಸಲಿರುವ ತೊಡಕುಗಳನ್ನು ನಿವಾರಿಸಲು ಈ ತಂತ್ರಜ್ನಾನ ಬಳಕೆಯಾಗುತ್ತದೆ ಎಂದು ವಿಜ್ನಾನಿಗಳು ತಿಳಿಸಿದ್ದಾರೆ. ಪ್ರಮುಖ ಸವಾಲು, ತೊಡಕುಗಳು. ಈ ವಿಧಾನಕ್ಕೆ ಇರುವ ಪ್ರಮುಖ ಸವಾಲು ಸಮಯದ ಪ್ರಶ್ನೆ . ವ್ಯಕ್ತಿಯ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲು ತಗುಲುವ ಸಮಯ ಅಧಿಕ. ಜತೆಗೆ ಈ ಪ್ರಕ್ರಿಯೆಗೆ ಅತಿ ದೊಡ್ಡ ಪ್ರಯೋಗಲಾಯ, ವ್ಯೆದ್ಯಕೀಯ ಉಪಕರಣಗಳು ಬೇಕಾದ್ದರಿಂದ ಜನಸಾನ್ಯರಿಗೆ ಇದರ ಬಳಕೆ ಎಟುಕದಿರಬಹುದು. ಹಾಗಾಗಿ ಸ್ಯಾಕ್ಸ್ ಪ್ರಕಾರ, ನ್ಯಾನೋ ತಂತ್ರಜ್ನಾನವನ್ನು ಬಳಸಿ, ಉಪಕರಣಗಳನ್ನು ಅತಿ ಚಿಕ್ಕದಾಗಿ ಮಾಡಿ ಮನಸ್ಸನ್ನು ಓದಲು ಪ್ರಯತ್ನಿಸಬಹುದು ಎನ್ನುತ್ತಾರೆ. ಇವೆಲ್ಲಕ್ಕೂ ಉತ್ತರವನ್ನು ಕಾಲವೇ ಹೇಳಲಿದೆ.

Rating
No votes yet

Comments