ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?- A PLL version !

ಇತ್ತೀಚಿಗೆ ಸುನೀಲ್ ಒಂದು ಪ್ರಶ್ನೆ ಎತ್ತ್ದ್ರು. http://sampada.net/forum/9598
ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ? ಅಂತ.

ಈ ಪ್ರಶ್ನೆ ನಾನು PLL ದೃಷ್ಟಿ ಕೋನದಲ್ಲಿ ಯೋಚಿಸಿ ಬರೀತಾ ಇದ್ದೀನಿ.

ನೆನಪಿಟ್ಟುಕೊಳ್ಳಿ ಇದು PLL ಕಡೆಯಿಂದ ಮನಸ್ಸಿನ ನೋಟ. ಮನಸ್ಸಿನ ಕಡೆಯಿಂದ ಆರಂಬಿಸಿ ನೋಡಿದರೆ ಸ್ವಲ್ಪ ಬೇರೆ / ತಪ್ಪು ಅನಿಸಬಹುದು.

ನಾನು PLL ಡಿಸೈನ್ ಮಾಡೋ ಕಾಯಕದಲ್ಲಿರುವುದರಿಂದ ನಾನು ಈ ರೀತಿ ಯೋಚಿಸ್ತೀನಿ.

ಟ್ರಾಕಿಂಗ್ ಅನ್ನೋದು PLL ನಲ್ಲಿ ತುಂಬ ಮುಖ್ಯ ವಿಷಯ.
PLL ನಲ್ಲಿ frequency ಅನ್ನು ಟ್ರ್ಯಾಕ್ ಮಾಡ್ತೀವಿ.
ಇಲ್ಲಿ (ಜೀವನದಲ್ಲಿ!) ನಮ್ಮ ಗುರಿ ಮನಸ್ಸನ್ನು ಟ್ರ್ಯಾಕ್ ಮಾಡೋದು.

PLL ನಲ್ಲಿ frequency ಟ್ರ್ಯಾಕ್ ಮಾಡೋದು "ಮುಖ್ಯವಾಗಿ" ಎರಡು ವಿಷಯಗಳ ಮೇಲೆ ಡಿಪೆಂಡ್ ಆಗುತ್ತೆ.
೧. refernce frequency
೨. loop bandwidth

ಹೆಚ್ಚ್ frequency ಯನ್ನು refernce ಆಗಿ ಇಟ್ಟುಕೊಂಡರೆ ನಮ್ಮ PLL ಬೇಗ ನಮಗೆ ಬೇಕಾದ frequency ಗೆ ಲಾಕ್ ಆಗುತ್ತೆ. ಹೆಚ್ಚು frequency ಅಂದ್ರೆ ಅದರ ಅರ್ಥ ಕಡಿಮೆ time period ಅಂತ . ಅಂದರೆ PLL ತನ್ನ output frequency ನಲ್ಲಿ ಬದಲಾವಣೆಯಾದರೆ ಆ ಕಡಿಮೆ ಅವಧಿಯಲ್ಲೇ ತನ್ನ ನಿಜವಾದ frequency ಗೆ ಬದಲಾಯಿಸುತ್ತೆ. ಈ ಕೆಲಸವನ್ನು PLL ನ PFD ( phase frequency detector) ಭಾಗ ಮಾಡುತ್ತೆ.

ಹಾಗೇನೇ ನಮ್ಮ reference ಯಾವಾಗಲೂ ಸ್ವಲ್ಪ ದೊಡ್ಡದಿರಬೇಕು. ನಮ್ಮ ಮೇಲ್ಮಟ್ಟದ ಆದರ್ಶಗಳು ನಮಗೆ reference ಆಗಿರಬೇಕು. ಈ ಸಾಲನ್ನು ನೀವೇ ಸರಿಯಾಗಿ ಯೋಚಿಸಿದರೆ ತಿಳಿಯಾಗುತ್ತೆ.

ಎರಡನೇ ಅತಿ ಮುಖ್ಯ ವಿಷಯ PLL ಜಲ್ದಿ ಟ್ರ್ಯಾಕ್ ಮಾಡ್ಬೇಕು ಅಂದ್ರೆ ಅದರ loop bandwidth ಹೆಚ್ಚು ಇರಬೇಕು. ಇದರ ಅರ್ಥ ನಮ್ಮ ಮನಸ್ಸಿಗೆ ಅತಿಯಾಗಿ ಕಡಿವಾಣ ಹಾಕಲು ಹೋಗಬಾರದು. ಅದನ್ನು ಅದರ ಪಾಡಿಗೆ ಸ್ವಲ್ಪ ಮಟ್ಟಿಗೆ ಫ್ರೀ ಆಗಿ ಬಿಡಬೇಕು.

ಆದರೆ PLL ನ loop bandwidth ಅತಿ ಹೆಚ್ಚು ಇದ್ದರೆ jitter ಹೆಚ್ಚಾಗುತ್ತೆ!. ಹಾಗೇನೇ ಮನಸ್ಸಿನ ಮೇಲೆ ಸ್ವಲ್ಪ ಗಮನವೂ ಇರಬೇಕು. ಇಲ್ದೆ ಇದ್ರೆ ಸ್ಥಿತ ಪ್ರಜ್ಞತೆ ( ಇದು ಸ್ವಲ್ಪ ದೊಡ್ಡ ಪದ, ಇಲ್ಲಿಗೆ ಅಪ್ಲೈ ಆಗಲ್ಲ..ಬೇರೆ ಪದ ಸಿಗದ ಕಾರಣ ಇದನ್ನ ಇಲ್ಲಿ ಬಳಸಿದ್ದೇನೆ!) ಸಾಧಿಸಕ್ಕೆ ಆಗಲ್ಲ.

ಈ ವರ್ಶನ್ ಗೆ ಬೇರೆಯದೇ ಆದ , PLL ಮೇಲೆ ವಿವರವಾಗಿ ಬರೀಬೇಕು ಅಂತ ಇದ್ದೆ. ಮಿಂದೆ ಬರಿಯೋ ತಾಳ್ಮೆ ಬರಬಹುದು.

PLL ಅಂದ್ರೆ ಏನು ಅಂತ ತಿಳ್ಕೊಳ್ಳಕ್ಕೆ ಇಲ್ಲಿ ಚಿಟುಕಿಸಿ!
http://en.wikipedia.org/wiki/PLL

Rating
No votes yet

Comments