ಮರಗಳನ್ನು ಉಳಿಸಿ ವಿಡಿಯೋ ನೋಡಿ.....

ಮರಗಳನ್ನು ಉಳಿಸಿ ವಿಡಿಯೋ ನೋಡಿ.....

ಕಳೆದ ಹಲವಾರು ದಿನಗಳಿಂದ ಲಾಲ್ ಬಾಗ್ ಮತ್ತು ನಂದಾ ರೋಡ್ ನಲ್ಲಿ ಮೆಟ್ರೊ ಕಾಮಗಾರಿಯ ವಿರುದ್ದ "ಹಸಿರು ಉಸಿರು" ಕಾರ್ಯಕರ್ತರು ಹಾಗೂ ಹಲವಾರು ಸ್ವಯಂಸೇವಾ ಸಂಸ್ಥೆಯವರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಈ ಪ್ರತಿಭಟನೆಗೆ ಹಲವಾರು ಸ್ವಯಂಸೇವಕರು, ನಾಗರೀಕರು, ಹಾಗೂ ಮಾದ್ಯಮದವರು ಉತ್ತಮ ಪ್ರತಿಕ್ರಿಯೆಯನ್ನುಸಹ ನೀಡಿ ಸಹಕಾರವನ್ನು ನೀಡಿದ್ದಾರೆ.

ಈ ಪ್ರತಿಭಟನೆಗೆ ಹಲವಾರು ಜನರು ಹಲವಾರು ವಿಧದಲ್ಲಿ ಸಹಕಾರವನ್ನು ನೀಡಿ ಪ್ರತಿಭಟನೆಗೆ ಸಹಕಾರವನ್ನು ನೀಡುತ್ತಿದ್ದಾರೆ. ಅದರಲ್ಲಿ ಒಂದು ರಿಕೀ ಕೇಜ್ ರವರ ರಿಂಗ್ ಟ್ಯೂನ್. ಈ ರಿಂಗ್ ಟ್ಯೂನ್ ತುಂಬಾ ಪ್ರಸಿದ್ದಿಯನ್ನು ಹೊಂದಿತು. ಇದನ್ನು ಗಮನಿಸಿದ ರಿಕೀ ಲಾಲ್ ಬಾಗ್ ಮತ್ತು ನಂದಾ ರಸ್ತೆಯಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ನಾವು ಮಾಡುತ್ತಿರುವ ನಿರಂತರ ಪ್ರತಿಭಟನೆ ಹೆಚ್ಚು ಹೆಚ್ಚು ಜನರನ್ನು ತಲುಪಬೇಕೆಂಬ ಉದ್ದೇಶದಿಂದ ಎಲ್ಲ ಕನ್ನಡ ವಾಹಿನಿಗಳಲ್ಲಿ ಪ್ರಸಾರ ಮಾಡುವುದಕ್ಕಾಗಿ ನಾನು ಈ ವಿಡಿಯೋ ಆಲ್ಬಂ ಅನ್ನು ಚಿತ್ರೀಕರಿಸಿದ್ದಾರೆ.

ಪ್ರತಿಯೊಂದು ಸಮೂಹ ಮಾಧ್ಯಮವನ್ನು ತಲುಪುವುದು ಇದರ ಉದ್ದೇಶ. ಈ ಆಲ್ಬಂ ಕನ್ನಡ ಚಿತ್ರರಂಗದ ಜನಪ್ರಿಯ ತಾರೆಗಳಾದ ಕಿರಣ್, ಶ್ರೀನಗರ ಕಿಟ್ಟಿ, ಕ್ರಿಕೆಟ್ ನ ವೀಕ್ಷಕ ವಿವರಣೆಗಾರರಾದ ಚಾರು ಶರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕರಾದ ಮುದ್ದು ಕೃಷ್ಣ ಮುಂತಾದವರನ್ನು ಒಳಗೊಂಡಿದೆ. ಇವರೆಲ್ಲರೂ ನಮ್ಮೊಂದಿಗೆ ನಮ್ಮೀ ಪ್ರತಿಭಟನೆಯಲ್ಲಿ 
ಕೈ ಜೋಡಿಸಿದ್ದಾರೆ.

ಇದರ ಸಂಗೀತವನ್ನು ರಿಕೀ ನಿರ್ದೇಶಿಸಿದ್ದಾರೆ ಹಾಗು ಇದನ್ನು ಪ್ರಸ್ತುತ ಪಡಿಸಿದವರು ಅವಿನಾಶ್ ಚಬ್ಬಿ.ಸರ್ಕಾರ ಕೆಲವು ಸಾವಿರ ಪ್ರತಿಭಟನಾಕಾರರನ್ನು ನಿರ್ಲಕ್ಷಿಸಬಹುದು... ಆದರೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿದ್ದಾಗ ನಿರ್ಲಕ್ಷಿಸುವಂತಿಲ್ಲ..

ಇದನ್ನು ಸಾಧಿಸುವುದೇ ನಮ್ಮ ಗುರಿ.. ಸರ್ಕಾರ ನಮ್ಮನ್ನು ಅಲಕ್ಷ್ಯ ಮಾಡಲು ಬಿಡದಿರೋಣ.. ಈ ಆಲ್ಬಂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ, ಪ್ರತಿಭಟನೆಯನ್ನು ಬೆಂಬಲಿಸುವ ಪ್ರತಿಯೊಬ್ಬರನ್ನು ತಲುಪಲಿ..

ರಿಂಗ್ ಟ್ಯೂನ್ ಡೌನ್ ಲೋಡ್ ಬೇಕಾದಲ್ಲಿ ನನಗೆ ಸಂದೇಶವೊಂದನ್ನು ಕಳುಹಿಸಿ ನಿಮ್ಮ ಮಿಂಚಚೆಗೆ ತಲುಪಿಸ್ತೀನಿ.

 

Rating
No votes yet

Comments