ಮಳೆಗಾಲ - ಲಕ್ಷ್ಮೀಕಾಂತ ಇಟ್ನಾಳ
ಮಳೆಗಾಲ
(ಗುಲ್ಜಾರರ ‘ಮಾನ್ಸೂನ್’ ಕವನದ ಅನುವಾದ)
ಮಳೆಗಾಲ ಬಂದರೆ ನೀರಿಗೂ ಸಹ
ಕಾಲುಗಳು ಮೂಡುತ್ತವೆ,
ಗೋಡೆ-ಬಾಗಿಲುಗಳಿಗೆ ಹಾಯ್ದು
ಓಡುವುದು ಓಣಿಗಳಲ್ಲಿ,
ಕುಣಿಯುತ್ತ ಚಿಮ್ಮುತ್ತ
ಖುಷಿಯನ್ನು ತಡೆಯದೆ,
ಯಾವುದೋ ‘ಮ್ಯಾಚ್’ಲ್ಲಿ ಗೆದ್ದ
ಹುಡುಗರ ಹಿಂಡಿನ ತರಹ!
ಗೆದ್ದು ಬರುವ ಓಣಿ ಹುಡುಗರೊಮ್ಮೆ ‘ಮ್ಯಾಚ್’ನ್ನು
ಕ್ಯಾನವಾಸಿನ ಬೂಟು ಮೆಟ್ಟುತ್ತ,
ಪುಟಿಯುತಿರುವ ಚೆಂಡಿನ ತರಹ,
ಗೋಡೆ-ಬಾಗಿಲುಗಳಿಗೆ ತಟ್ಟುತ್ತ ಕುಣಿಯುವರು
ಮಳೆನೀರು ಪುಟಿದು ಚಿಮ್ಮುವ ಹಾಗೆ!
ಕೃಪೆ : ಗುಲ್ಜಾರ ಸಾಹಬ್
Rating
Comments
ಸುಂದರ ಕವನದೊಂದಿಗೆ ಮತ್ತೆ
ಸುಂದರ ಕವನದೊಂದಿಗೆ ಮತ್ತೆ ಪ್ರತ್ಯಕ್ಷರಾದ ಇತ್ನಾಳರಿಗೆ ಸ್ವಾಗತ.
ಸುಂದರ ಅನುವಾದ. ಚೆನ್ನಾಗಿದೆ.
ಸುಂದರ ಅನುವಾದ. ಚೆನ್ನಾಗಿದೆ.
ಈಗ ಹಾಸನದಲ್ಲಿ ಎರಡು ದಿನಗಳಿಂದಲೂ ಮಳೆ ಬರುತ್ತಿದೆ!!
In reply to ಸುಂದರ ಅನುವಾದ. ಚೆನ್ನಾಗಿದೆ. by kavinagaraj
ಪ್ರಿಯ ಕವಿ ನಾಗರಾಜ್ ರವರಿಗೆ,
ಪ್ರಿಯ ಕವಿ ನಾಗರಾಜ್ ರವರಿಗೆ, ಮೊದಲು ಆ ಪ್ರಕೃತಿಮಾತೆಗೆ ವಂದನೆ ತಿಳಿಸೋಣ, ಕಾವೇರಿ ಹೊತ್ತಿ ಉರಿಯುವ ಈ ಕ್ಷಣದಲ್ಲಿ ಮಳೆ ತಂದೀದೀರಲ್ಲ ಸರ್. ನಿಮ್ಮಂಥ ಪುಣ್ಯವಂತರು ಇರುವುದರಿಂದಲೇ ಮಳೆ ಬಂತೇನೋ. ಕಾವೇರಿ ಪ್ರಾಬ್ಲೆಮ್ ಹಾಸನ ಮೂಲಕವಾದರೂ ಶಮನವಾಗಲಿ!. ಗುಲ್ಜಾರ ರ ಕವನದ ಅನುವಾದವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ ತಮಗೆ ಅನಂತ ವಂದನೆಗಳು ಸರ್.
ಪ್ರಿಯ ಗಣೇಶರವರಿಗೆ, ತಮ್ಮ
ಪ್ರಿಯ ಗಣೇಶರವರಿಗೆ, ತಮ್ಮ ಪ್ರತಿಕ್ರಿಯೆಯೊಂದಿಗೆ ಸ್ವಾಗತಕ್ಕಾಗಿ ಧನ್ಯವಾದಗಳು. ಹಾಗೆಯೇ ಕವನದ ಅನುವಾದವನ್ನು ಮೆಚ್ಚಿದ್ದಕ್ಕಾಗಿ ವಂದನೆಗಳು.
In reply to ಪ್ರಿಯ ಗಣೇಶರವರಿಗೆ, ತಮ್ಮ by lpitnal@gmail.com
ಉತ್ತಮ ಕವನ.
ಉತ್ತಮ ಕವನ.
In reply to ಉತ್ತಮ ಕವನ. by Premashri
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರೇಮಶ್ರೀಜಿಯವರೇ,,
ಲಕ್ಷ್ಮಿಕಾಂತ ಇಟ್ನಾಳರಿಗೆ
ಲಕ್ಷ್ಮಿಕಾಂತ ಇಟ್ನಾಳರಿಗೆ ವಂದನೆಗಳು
ಕವಿ ಗುಲ್ಜಾರರ ' ಮಾನ್ಸೂನ್ ' ಕವನವನ್ನು ಚೆನ್ನಾಗಿ ಕನ್ನಡಿಕರಿಸಿದ್ದಿರಿ. ಕವನ ಸಾಗುವ ಪರಿಯಲ್ಲೊಇಯೆ ಒಂದು ಭಿನ್ನತೆಯಿದೆ, ಓಘವಿದೆ ಮತ್ತು ಲಾಸ್ಯವಿದೆ. ಉತ್ತಮ ಕವನ ನೀಡಿದ್ದೀರಿ ಧನ್ಯವಾದಗಳು.
In reply to ಲಕ್ಷ್ಮಿಕಾಂತ ಇಟ್ನಾಳರಿಗೆ by H A Patil
ಹಿರಿಯರಾದ ಹೆಚ್ ಎ ಪಾಟೀಲರವರಿಗೆ,
ಹಿರಿಯರಾದ ಹೆಚ್ ಎ ಪಾಟೀಲರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕವನದ ಅನುವಾದಕ್ಕೆ ಮೆಚ್ಚುಗೆ ಸೂಚಿಸಿ, ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು.