ಮಳೆಗಾಲ - ಲಕ್ಷ್ಮೀಕಾಂತ ಇಟ್ನಾಳ

ಮಳೆಗಾಲ - ಲಕ್ಷ್ಮೀಕಾಂತ ಇಟ್ನಾಳ

      ಮಳೆಗಾಲ
(ಗುಲ್ಜಾರರ ‘ಮಾನ್ಸೂನ್’ ಕವನದ ಅನುವಾದ)

ಮಳೆಗಾಲ ಬಂದರೆ ನೀರಿಗೂ ಸಹ
ಕಾಲುಗಳು ಮೂಡುತ್ತವೆ,
ಗೋಡೆ-ಬಾಗಿಲುಗಳಿಗೆ ಹಾಯ್ದು
ಓಡುವುದು ಓಣಿಗಳಲ್ಲಿ,
ಕುಣಿಯುತ್ತ ಚಿಮ್ಮುತ್ತ
ಖುಷಿಯನ್ನು ತಡೆಯದೆ,
ಯಾವುದೋ ‘ಮ್ಯಾಚ್’ಲ್ಲಿ ಗೆದ್ದ
ಹುಡುಗರ ಹಿಂಡಿನ ತರಹ!

ಗೆದ್ದು ಬರುವ ಓಣಿ ಹುಡುಗರೊಮ್ಮೆ ‘ಮ್ಯಾಚ್’ನ್ನು
ಕ್ಯಾನವಾಸಿನ ಬೂಟು ಮೆಟ್ಟುತ್ತ,
ಪುಟಿಯುತಿರುವ  ಚೆಂಡಿನ ತರಹ,
ಗೋಡೆ-ಬಾಗಿಲುಗಳಿಗೆ ತಟ್ಟುತ್ತ ಕುಣಿಯುವರು
ಮಳೆನೀರು ಪುಟಿದು ಚಿಮ್ಮುವ ಹಾಗೆ!

ಕೃಪೆ : ಗುಲ್ಜಾರ ಸಾಹಬ್

Rating
No votes yet

Comments

Submitted by lpitnal@gmail.com Sun, 02/10/2013 - 14:11

In reply to by kavinagaraj

ಪ್ರಿಯ ಕವಿ ನಾಗರಾಜ್ ರವರಿಗೆ, ಮೊದಲು ಆ ಪ್ರಕೃತಿಮಾತೆಗೆ ವಂದನೆ ತಿಳಿಸೋಣ, ಕಾವೇರಿ ಹೊತ್ತಿ ಉರಿಯುವ ಈ ಕ್ಷಣದಲ್ಲಿ ಮಳೆ ತಂದೀದೀರಲ್ಲ ಸರ್. ನಿಮ್ಮಂಥ ಪುಣ್ಯವಂತರು ಇರುವುದರಿಂದಲೇ ಮಳೆ ಬಂತೇನೋ. ಕಾವೇರಿ ಪ್ರಾಬ್ಲೆಮ್ ಹಾಸನ ಮೂಲಕವಾದರೂ ಶಮನವಾಗಲಿ!. ಗುಲ್ಜಾರ ರ ಕವನದ ಅನುವಾದವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ ತಮಗೆ ಅನಂತ ವಂದನೆಗಳು ಸರ್.

Submitted by lpitnal@gmail.com Sun, 02/10/2013 - 14:07

ಪ್ರಿಯ ಗಣೇಶರವರಿಗೆ, ತಮ್ಮ ಪ್ರತಿಕ್ರಿಯೆಯೊಂದಿಗೆ ಸ್ವಾಗತಕ್ಕಾಗಿ ಧನ್ಯವಾದಗಳು. ಹಾಗೆಯೇ ಕವನದ ಅನುವಾದವನ್ನು ಮೆಚ್ಚಿದ್ದಕ್ಕಾಗಿ ವಂದನೆಗಳು.

Submitted by H A Patil Mon, 02/11/2013 - 19:58

ಲಕ್ಷ್ಮಿಕಾಂತ ಇಟ್ನಾಳರಿಗೆ ವಂದನೆಗಳು
ಕವಿ ಗುಲ್ಜಾರರ ' ಮಾನ್ಸೂನ್ ' ಕವನವನ್ನು ಚೆನ್ನಾಗಿ ಕನ್ನಡಿಕರಿಸಿದ್ದಿರಿ. ಕವನ ಸಾಗುವ ಪರಿಯಲ್ಲೊಇಯೆ ಒಂದು ಭಿನ್ನತೆಯಿದೆ, ಓಘವಿದೆ ಮತ್ತು ಲಾಸ್ಯವಿದೆ. ಉತ್ತಮ ಕವನ ನೀಡಿದ್ದೀರಿ ಧನ್ಯವಾದಗಳು.

Submitted by lpitnal@gmail.com Mon, 02/11/2013 - 21:29

In reply to by H A Patil

ಹಿರಿಯರಾದ ಹೆಚ್ ಎ ಪಾಟೀಲರವರಿಗೆ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕವನದ ಅನುವಾದಕ್ಕೆ ಮೆಚ್ಚುಗೆ ಸೂಚಿಸಿ, ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು.