ಮಾತಿನ ಮೋಡಿ

ಮಾತಿನ ಮೋಡಿ

ನಾನು,ಯಜಮಾನರು ಚರ್ಚಿಸಿ,ಅನೇಕ ಮಿತ್ರರ ಅಭಿಪ್ರಾಯ ಕೇಳಿ,ಸ್ಯಾಮ್ ಸಂಗ್ ಟಿ.ವಿ ತೆಗೆದುಕೊಳ್ಳಲು ಹೋದೆವು. ತೆಗೆದುಕೊಂಡುದು ಒನಿಡಾ.
ಇದೇ ರೀತಿ ಐ ಎಫ಼್ ಬಿ ವಾಷಿಂಗ್ ಮೆಷಿನ್ ತೆಗೆದು ಕೊಳ್ಳಲು ಹೋಗಿ ಕೊಂಡದ್ದು ವಿಡಿಯೊಕಾನ್.
ಸೊನಿ ಡಿ.ವಿ.ಡಿ ಪ್ಲೇಯರ್ ತೆಗೆದುಕೊಳ್ಳಲು ಹೋಗಿ ಡೇಪಿಕ್ ನೊಂದಿಗೆ ಮನೆಗೆ ಬಂದೆವು.ನೋಕಿಯಾ ಬದಲಿಗೆ ಸಾಮ್ಸಂಗ್ ಮೊಬೈಲ್ ಬಂತು.ಇದೆಲ್ಲಾ ಬೇರೆ ಬೇರೆ ಅಂಗಡಿಗಳಲ್ಲಿ,ಬೇರೆ ಬೇರೆ ಸೇಲ್ಸ್ ಮ್ಯಾನ್ ಗಳ ಮಾತಿನ ಮೋಡಿಯಿಂದ ಆದುದು.ಒಬ್ಬ ಸಾಧಾರಣ ಸೇಲ್ಸ್ ಮ್ಯಾನ್ ಗೆ ನಮ್ಮ ನಿರ್ಧಾರವನ್ನು ಬದಲಿಸುವ ತಾಕತ್ತಿರುವಾಗ ಇನ್ನು ಒಬ್ಬ ಉತ್ತಮ ವಾಗ್ಮಿ ಜನರ ಮೇಲೆ ಎಷ್ಟು ಹಿಡಿತ ಸಾಧಿಸಿಯಾನು?ಇದೇ ಕಷ್ಟ. ಆ ಸಾಹಿತಿ ಹೇಳಿದ್ದೂ ಸರಿ ಎನಿಸುತ್ತದೆ. ಈ ಸಾಹಿತಿ ಬರೆದದ್ದೂ ಸರಿ ಎನಿಸುತ್ತದೆ.
ಓದಿದ ನಮ್ಮ ಅವಸ್ಥೆಯೇ ಹೀಗಿರಲು,ಓದದ ಕಾಡಿನಲ್ಲಿ ವಾಸಿಸುವ ಯುವಕರನ್ನು ದಾರಿ ತಪ್ಪಿಸುವುದು ಎಷ್ಟರ ಕೆಲಸ.
ಹೀಗೆ ನಮ್ಮ ರಾಜಕಾರಣಿಗಳ ಮಾತಿನ ಮೋಡಿಗೊಳಗಾಗಿ,ಅವರ ಕೋಟಿಗಟ್ಟಲೆ ಹಣದ ಹಗರಣಗಳನ್ನೂ ಮರೆತು ಬಿಡುತ್ತೇವೆ.

Rating
No votes yet

Comments