ಮಾಧ್ಯಮಗಳು ನಿದ್ದೆ ಮಾಡುವುದೇಕೆ?

ಮಾಧ್ಯಮಗಳು ನಿದ್ದೆ ಮಾಡುವುದೇಕೆ?

ಈ ಕೊಂಡಿ ನೋಡಿ...
ಈಡೇರದ ಮಲ್ಲೇಶ್ವರಂ ಅಂಡರ್ ಪಾಸ್ ಉದ್ದೇಶ
http://www.kannadaprabha.com/NewsItems.asp?ID=KPD20080518151050&Title=District+Page&lTitle=%C1%DBd%C0+%C8%DB%7D%E6%25&Topic=0&dName=%86%E6MV%DA%D7%DA%E0%C1%DA%DF&Dist=1

ಮಲ್ಲೇಶ್ವರದ ಅಂಡರ್ ಪಾಸ್ ಗೆ ಸಾಕಷ್ಟು ಬೊಬ್ಬೆ ಹೊಡೆದರೂ ಸಾಲದಾಗಿತ್ತೆ?

ಕಳಪೆ ಕಾವೇರಿ ಅಂಡರ್ ಪಾಸ್ ಆದ ಮೇಲೆ, ಸದ್ಯದಲ್ಲೇ ಗಂಗಾನಗರದಲ್ಲಿ ಕಾಮಗಾರಿ ಶುರು ಮಾಡಲಿದೆ...
ಕಾವೇರಿ ಅಂಡರ್ ಪಾಸ್ ಅರ್ಧ ಕಾಮಗಾರಿ ನಡೆಯುವವರೆಗೂ ರಸ್ತೆಗಳು ಹೇಗೆ ಕೂಡಲಿವೆ ಎಂಬ ಗೊಂದಲವಿತ್ತು...
ಹೆಚ್ಚು ಕಡಿಮೆ ಯಾವುದೇ ಪತ್ರಿಕೆಯಲ್ಲೂ ಪ್ಲಾನ್ ಏನೆಂಬುದು ಕಾಮಗಾರಿಗೆ ಮುನ್ನ ಮುದ್ರಣಗೊಳ್ಳಲೇ ಇಲ್ಲ...

ಇಂಥಾ ಮುಖ್ಯ ವಿಷಯಗಳಲ್ಲಿ ಮಾಧ್ಯಮಗಳು ನಿದ್ದೆ ಮಾಡುವುದೇಕೆ? ಪಾಲಿಕೆ ಇದರ ಬಗ್ಗೆ ಇವರಿಗೆ ಮೊದಲೇ ಏಕೆ ತಿಳಿಸದು?
ಸರಿ ಸುಮಾರು 20ಕ್ಕೂ ಹೆಚ್ಚು ಅಂಡರ್ ಪಾಸ್ ಗಳನ್ನು ಮಾಡುವ ಉದ್ದೇಶ ಪಾಲಿಕೆಗೆ ಇದೆ...
ಮಾಧ್ಯಮಗಳಲ್ಲಿ ಇದರ ಬಗ್ಗೆ ಚರ್ಚೆ ಏಕೆ ಆಗದು? ಮಾಧ್ಯಮಗಳೆಲ್ಲ ಸೇರಿ P.I.L ಹಾಕಬಾರದೇಕೆ?

ಟ್ರಾಫಿಕ್ ಸಮಸ್ಯೆಯಲ್ಲಿ ಬಳಲುತ್ತಿರುವ ಬೆಂಗಳೂರಿನಲ್ಲಿ ದೂರ ದೃಷ್ಟಿ ಇಲ್ಲದೆ ಮಾಡುವ ಇಂಥ ಕೆಲಸಗಳಿಂದ, ಉಪಯೋಗವೇನು ಹೆಚ್ಚು ಕಾಣದು ಮತ್ತು ಜನರ ಸಮಯ, ಹಣ ಪೋಲಾಗುವ ಸಾಧ್ಯತೆಗಳೇ ಹೆಚ್ಚಿದೆ...

--ಶ್ರೀ

Rating
No votes yet