ಮಾಯವಾದರು ಎಲ್ಲಿಗೆ

ಮಾಯವಾದರು ಎಲ್ಲಿಗೆ

ಮಾಯವಾದರು ಎಲ್ಲಿಗೆ
ಯಾರು ಯಾವ ಕಾಳುಗಳನು
ಇಲ್ಲಿ ತಂದು ನೆಟ್ಟವರು ಹೀಗೆ
ಯಾವ ಪ್ರತಿಫಲವ ಬಯಸಿ
ಎಲ್ಲಿ ಮರೆಯಾಗಿ ಅಡಗಿಹರು

ಸಸಿಯಾಗಿ, ಗಿಡವಾಗಿ, ಮರವಾಗಿ,
ಹೆಮ್ಮರಗಳು ತಾವಾಗಿ, ನೆರಳಾಗಿ
ತಂಪನು ಚೆಲ್ಲಿ ಇಂದು ಎಲ್ಲರಿಗಾಗಿ,
ಆಗಸವ ಚುಂಭಿಸುವ ಗುರಿಯನಿಟ್ಟು

ಇವು ಯಾರ ಕಲ್ಪನೆಯ ವಿನ್ಯಾಸಕ್ಕೆ
ಬಾಹುಗಳ ಬಳಸಿ ಬೆಳೆಸಿ ನಿಂತಿಹವು
ಹಸಿರ ಸೀರೆಯ ನೆರಿಗೆ ಭೂರಮೆಗೆ ತಾವಾಗಿ
ನಾಚಿ ನಗುತಿರಲು ಕಿರು ನಗೆಯ ಬೀಸಿ

ಬಗೆ ಬಗೆಯ ತರುಗಳನು ಹರಳುಗಳ
ಸರವಾಗಿ ಪೋಣಿಸಿ ಶಿಖರಗಳ ಮೇಲೆ
ಸಿಂಗರಿಸಿದವರು ಯಾರು, ಎಲ್ಲಿ ಮರೆಯಾಗಿ
ಯಾವ ಸಸಿಯಡಿಯಲ್ಲಿ ಕುಳಿತಿಹರು

ವನ ಜೀವ ರಾಶಿಗಳ ನೆಲೆಯಾಗಿ,
ಫಲ ಪುಷ್ಪ ಸಿರಿಗಂಧ ಸವಿಯಾಗಿ,
ಮೋಢಗಳ ಸೆರೆಹಿಡಿದು ಮಳೆಯಾಗಿ,
ಮಾಯಾವಿ ನದಿಗಳ ಜನಕ ನೀನಾಗಿ

ಪಣತೊಟ್ಟು ಸಸಿನೆಟ್ಟು ನಡೆದೆ ನೀನು
ಇಷ್ಟಾಗಿ, ಅಷ್ಟಾಗಿ, ಎಸ್ಟಾಗಿ ಎಲ್ಲರಿಗೆ
ಅಂದು, ಇಂದು, ಮುಂದೆ ಬರುವವರಿಗೆ
ದಾರಿ ತೋರಿಸಿ ಮಾಯವಾದರು ಎಲ್ಲಿಗೆ
****

ವಕ್ರ ವ್ಯಾಕರಣಗಳ ತಿಳಿಸಿ ಸಹಕರಿಸುವವರಿಗೆ ನನ್ನಿ.

Rating
No votes yet