ಮಿಡತೆ ಸಂತೆ ಕತೆ
ಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
ಇದರದ್ದದು ಅದರದ್ದಿದು ಕಾಲ್ಕೆರೆದೂ ಕೆರೆದೂ
ಮತ್ಮತ್ತೆ ಸೆರಟೊನನ್ ತಲೇಲಿ ಉಕ್ಕೀ ಉಕ್ಕಿ
ಹುಚ್ಚೆದ್ದು ಲಗ್ಗೆಯಿಟ್ಟಲ್ಲೆಲ್ಲಾ ಹಾವಳಿ;
ಮರಾ ಗಿಡಾ ಬೆಳೆಗಳಿಗೆಲ್ಲಾ
ಕಂಟಕಪ್ರಾಯ
ಈ ಬೈರಾಗಿ ಮಿಡತೆ ರೌಡಿ ಸಂತೆ.
ಒಂಟಿ ಮಿಡತೆ ಕೋಟಿ
ಕೋಟಿಯಾಗಿ ಹಿಂಡು ಕಟ್ಟಿ
ಕೊಂಡು ಎಬ್ಬಿಸೋ ಈ ಗುಲ್ಲಿನ
ಹಿಂದಿನ ಸಾಂಗತ್ಯದ ಗುಟ್ಟು-
ಹಿಂದ್ಬರೋ ಮಿಡತೆ ಬಿಟ್ಕೊಂಡ ಬಾಯಿಗೆ
ತನ್ನಂಡು ಸಿಕ್ಕದಂಗೆ ಬಿರಬಿರನೆ ಓಡ್ತಿರೋದೇ!
ಉಸ್ಸಪ್ಪಾಂತ ಅಡ್ಡಗಾಲು ಹಾಕಿಬಿಟ್ಟರೆ ಮುಗೀತು-
ಹಿಂಡವ್ವೆಲ್ಲಾ ಸೇರ್ಕೊಂಡು
ಆ ಮಿಡತೇನ ಹಿಡಿದು ಮುಂದಿಟ್ಕೊಂಡು
ಕತ್ಕಡದು,
ಕಾಲ್ಮುರಿದು,
ಕಣ್ಕಿತ್ತು
ಒಂದೊಂದಂಗಾನೇ ತಿಂದು ತೇಗಿ
ಕ್ಯಾನಿಬಲ್ ವಿಧಿ ಪೂರೈಸಿ
ಅಮಲಿಳಿದಾಗ ಬೈರಾಗಿ
ನೇ ಪಾಪ ಮಿಡತೆ ಒಂಟಿ
ಯಾಗಿ ಅಂಡಲೆಯೋದೆ ಕೆಲಸ
ಮತ್ತೆ ಬಂದು ಯಾರಾದರೂ
ಕಾಲ್ಸವರೋ ತನಕ.
ಚಿತ್ರಗಳು : www.usfws.org ಹಾಗು www.newscientist.com
Comments
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by cmariejoseph
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by anivaasi
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by cmariejoseph
ಉ: ಮಿಡತೆ ಸಂತೆ ಕತೆ
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by omshivaprakash
ಉ: ಮಿಡತೆ ಸಂತೆ ಕತೆ
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by Vyasraj
ಉ: ಮಿಡತೆ ಸಂತೆ ಕತೆ
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by palachandra
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by anivaasi
ಉ: ಮಿಡತೆ ಸಂತೆ ಕತೆ
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by harshab
ಉ: ಮಿಡತೆ ಸಂತೆ ಕತೆ
ಉ: ಮಿಡತೆ ಸಂತೆ ಕತೆ
In reply to ಉ: ಮಿಡತೆ ಸಂತೆ ಕತೆ by cmariejoseph
ಉ: ಮಿಡತೆ ಸಂತೆ ಕತೆ