ಮೀಡಿಯ ಪ್ಲೇಯರ್ ೧೧ ಬೀಟ - ಬೆಳ್ಳಿ ತಟ್ಟೆ, ತಂಗಳೂಟ - ಜೊತೆಗೊಂದು ಅಂಗಡಿ ಬೇರೆ!
ಮೀಡಿಯ ಪ್ಲೇಯರ್ ೧೧ ಮೊನ್ನೆ ತಾನೆ ಪಾದಾರ್ಪಣೆ ಮಾಡಿದೆ. ವಿಂಡೋಸ್ ಎಕ್ಸ್ ಪಿ ಯ ಲೀಗಲ್ ಕಾಪಿ ಯಜಮಾನರಾದ ಎಲ್ಲರೂ ಇದನ್ನು ಮೈಕ್ರೊಸಾಫ್ಟಿನ ವಬ್ಸೈಟಿನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಬುಧವಾರವೇ ಸ್ಲಾಶ್ ಡಾಟ್ ಮೂಲಕ ಇದರ ಬಗ್ಗೆ ತಿಳಿದುಬಂದಿದ್ದರೂ ಇಂದು ಇದನ್ನು ಡೌನ್ಲೋಡ್ ಮಾಡಲು ಸಾಧ್ಯವಾದ್ದರಿಂದ ಇನ್ಸ್ಟಾಲ್ ಮಾಡಿ ನೋಡಿದೆ. ಏನು ಹೊಸತಿರಬಹುದೆಂಬ ಎಂದಿನ ಕುತೂಹಲ ಇಟ್ಟುಕೊಂಡು ನೋಡಿದಾಗ ಭಾರೀ ನಿರಾಶೆ ಕಾದಿತ್ತು... ವಿಂಡೋಸ್ ಮೀಡಿಯ ಪ್ಲೇಯರ್ ೧೧ ಕೂಡ (ಎಂದಿನಂತೆ) [:http://www.apple.com/itunes/|Itunesನ] ಹತ್ತಿರವೂ ಸುಳಿಯುವಷ್ಟು ಸಮರ್ಪಕವಾಗಿಲ್ಲ.
ಹೊಸತೊಂದು ಸ್ಕಿನ್/ಪರದೆ/ಬಟ್ಟೆ ಹೊದಿಸಿ ಅದೇ ತಂಗಳೂಟವನ್ನು ಬಡಿಸಿದ್ದಾರೆ, ಮೈಕ್ರೊಸಾಫ್ಟಿನವರು. ಜೊತೆಗೆ ಹಿಂದಿಗಿಂತಲೂ ಹೆಚ್ಚು ನಿಮ್ಮ ಸ್ವಂತ ಮಾಹಿತಿ ಸಂಗ್ರಹಣ ಕಾರ್ಯವನ್ನು ಮಾತ್ರ (ಗೂಗಲ್ ಅನ್ನು ಮೀರಿಸಲು ಛಲ ತೊಟ್ಟಂತೆ) ಅತ್ಯಂತ ಸಮರ್ಪಕವಾಗಿ ಮಾಡುತ್ತದೆ! ನೀವುಗಳೂ ಈ ಸಾಫ್ಟ್ವೇರನ್ನ ಡೌನ್ಲೋಡ್ ಮಾಡಿದರೆ ಇನ್ಸ್ಟಾಲ್ ಮಾಡುವಾಗ ಸಾಧ್ಯವಾದಷ್ಟೂ 'custom' ಆಪ್ಶನ್ನುಗಳನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ... ಹಾಗೂ ಸಾಧ್ಯವಾದಷ್ಟು 'ಮಾಹಿತಿ ಕಳುಹಿಸುವ'ಂತಹ ಆಫ್ಶನ್ನುಗಳನ್ನು 'uncheck' ಮಾಡಿ.
ಹೊಸ ಮೀಡಿಯ ಪ್ಲೇಯರ್ ನಲ್ಲಿ ಹೊಸತು - ಬರೇ itunes ಸಡ್ಡು ಹೊಡೆಯಲೆಂದು ಹೊರಟ ಪ್ರಯತ್ನದ (ಅಥವಾ ಕಾಂಪಿಟೇಶನ್ ನೀಡುವ ಮಹತ್ವಾಕಾಂಕ್ಷೆ ಇಟ್ಟುಕೊಂಡ) ಅಂಗಡಿಯೆಂದರೆ ತಪ್ಪಾಗಲಾರದು. ಮೆಮೊರಿ ತಿನ್ನುವುದರಲ್ಲಿ ತಂತ್ರಾಂಶಗಳಿಗಿರಬೇಕಾದ ಸದಭಿರುಚಿಯ ಜುಗ್ಗತನ ಸ್ವಲ್ಪ ಹೆಚ್ಚಾಗಿರುವುದು (ಒಳ್ಳೆಯ ಬೆಳವಣಿಗೆ, ಅದು) ಬಿಟ್ಟರೆ ಹೊಸ ಮೀಡಿಯ ಪ್ಲೇಯರಿನಲ್ಲಿ ವಿಶೇಷವೇನೂ ಇಲ್ಲ. ಆದರೆ ಕಣ್ಣಿಗೆ ಮುದ ನೀಡುವ ಹೊಸ ಸ್ಕಿನ್/ಪರದೆ/ಬಟ್ಟೆ ಹೊದ್ದುಕೊಂಡು ಬಂದಿದೆ, ಈ ಹೊಸ ಆವೃತ್ತಿ.
ನನ್ನ ಮೊಬೈಲು ಫೋನಿಗೆ ಕೂಡ ಐಟ್ಯೂನ್ಸ್ ನೀಡುವಷ್ಟು ಒಳ್ಳೆಯ support ಮೀಡಿಯ ಪ್ಲೇಯರ್ ಕೊಡದಿರುವುದು (ನನಗೆ) ಮತ್ತೊಂದು ನಿರಾಶೆಯ ಸಂಗತಿ. ಇತ್ತೀಚೆಗೆ ಮೀಡಿಯ ಪ್ಲೇಯರಿನಲ್ಲಿನಿಂದಲೇ ಆಡಿಯೋ ಸಿಡಿ ಬರ್ನ್ ಮಾಡುವ ಸೌಲಭ್ಯ ಲಭ್ಯವಿದ್ದರೂ ಅದು ಮೈಕ್ರೊಸಾಫ್ಟಿನ ಕಟ್ಟಾ ಲೈಸೆನ್ಸುವಾದಿಯಾಗಿ ವರ್ತಿಸುವುದರಿಂದ ಅದನ್ನು ಬಹಳಷ್ಟು ಜನ ಬಳಸುವುದಂತೂ ಕಾಣೆ. ಈಗಂತೂ ಎಲ್ಲ ಫ್ರೀ ಪ್ಲೇಯರುಗಳೂ ಸಿ ಡಿ, ಡಿ ವಿ ಡಿ ಬರ್ನ್ ಮಾಡುವ ಸೌಲಭ್ಯ ಒದಗಿಸುತ್ವೆ... so there :) ಇನ್ನು ಹೆಚ್ಚೇನೂ ಹೇಳುವ ಅವಶ್ಯಕತೆಯಿಲ್ಲವೆಂದು ನಂಬುತ್ತೇನೆ... ವಾಪಸ್ Itunesಗೇ ಮರಳಬೇಕಷ್ಟೆ!
(ಸ್ಕ್ರೀನ್ಶಾಟ್ಗಳನ್ನು ಅಪ್ಲೋಡ್ ಮಾಡಿದ್ದು, ಈಗ ನನ್ನ ಇಂಟರ್ನೆಟ್ ಕನ್ನೆಕ್ಷನ್ ಕೈ ಕೊಡುತ್ತಿರುವುದರಿಂದ ನಾಳೆ ನಾಳಿದ್ದು ಅವುಗಳನ್ನು ಈ ಪೋಸ್ಟಿನೊಂದಿಗೆ ಸೇರಿಸುವೆ. ಸದ್ಯಕ್ಕೆ ಅವನ್ನು [:http://sampada.net/tracker|ಈ ಸಂಪರ್ಕದಲ್ಲಿ] ನೋಡಬಹುದು)