'ಮುಂಬಯಿಯ ಮಣಿಭವನ್'- ಭಾರತದ  ಸ್ವಾತಂತ್ರ್ಯ ಚಳುವಳಿಯ ಒಂದು  ಪ್ರಧಾನ ಕೇಂದ್ರವಾಗಿತ್ತು  !

'ಮುಂಬಯಿಯ ಮಣಿಭವನ್'- ಭಾರತದ  ಸ್ವಾತಂತ್ರ್ಯ ಚಳುವಳಿಯ ಒಂದು  ಪ್ರಧಾನ ಕೇಂದ್ರವಾಗಿತ್ತು  !

ಚಿತ್ರ

building

ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಬಯಿನಗರ ಒಂದು ಪ್ರಮುಖಪಾತ್ರ ವಹಿಸಿತ್ತು. ಗಾಂಧೀಜಿಯವರು ಈ ನಗರದ ಒಬ್ಬ ಹೆಮ್ಮೆಯ ನಾಗರೀಕರಾಗಿದ್ದರು. ಬೊಂಬಾಯಿಗೆ ಬಂದಾಗಲೆಲ್ಲ ಅವರು 'ಮಣಿಭವನ'ದಲ್ಲೇ ತಂಗುತ್ತಿದ್ದರು.  ಸ್ವಾತಂತ್ರ್ಯ ಬಂದಮೇಲೆ  ೧೯೫೯ ರ ಮಾರ್ಚ್ ೩ ರಂದು ಮಣಿಭವನವನ್ನು ಮರುಸಂದರ್ಶಿಸಿದ ಪಂಡಿತ್,  ಜವಹರ್ಲಾಲ್ ನೆಹರುರವರು ಗಮನಿಸಿದ್ದು : "ಮುಂಬಯಿನ ಜನರಿಗೆ ಮಣಿಭವನ ಸ್ವಾತಂತ್ರ್ಯ ಹೋರಾಟಗಾರರ ಒಂದು ನೆನಪಿನ ಪ್ರತೀಕವಾಗಿದೆ. ಮಹಾತ್ಮ ಗಾಂಧಿಯವರು ವಾಸವಾಗಿದ್ದ ಸ್ಥಳವದು.  ೧೯೫೫ ರಲ್ಲಿ 'ಗಾಂಧೀ ಸ್ಮಾರಕ ನಿಧಿ ಸಂಸ್ಥೆ' ಇದನ್ನು 'ಗಾಂಧಿ ಸ್ಮಾರಕ' 'ವನ್ನಾಗಿ ಪರಿವರ್ತಿಸಿರುವುದು ನನಗೆ ಅತ್ಯಂತ  ಮುದಕೊಟ್ಟಿದೆ".  ಒಳಗಡೆ ಉತ್ಕೃಷ್ಟವಾದ ಪುಸ್ತಕಭಂಡಾರ, ಗಾಂಧೀಜಿಯವರ ಜೀವನ ಸಾಧನೆಗಳನ್ನು ವೀಕ್ಷಿಸಲು ಚಿಕ್ಕ 'ಫೋಟೋ ಗ್ಯಾಲರಿ' ಇದೆ. ಗಾಂಧೀಜಿಯವರು ಮಣಿಭವನದ ಟೆರೇಸ್ ಮೇಲೆ ನಿರ್ಮಿಸಿದ  ಟೆಂಟ್ ನಲ್ಲಿ ವಾಸಿಸುತ್ತಿದ್ದರು. ಅಲ್ಲಿಗೆ  ಅವರನ್ನು ಭೇಟಿಮಾಡಲು ಗಣ್ಯವ್ಯಕ್ತಿಗಳು ಬರುತ್ತಿದ್ದರು 

library

ದಕ್ಷಿಣ ಮುಂಬಯಿನ ಲ್ಯಾಬರ್ನಮ್  ರಸ್ತೆಯಲ್ಲಿರುವ ೨ ಅಂತಸ್ತಿನ ಮನೆ, ಜನ ಜಂಗುಳಿ ಇಲ್ಲದ ಗಾಮದೇವಿ ಜಿಲ್ಲೆಯ ಪರಿಸರದಲ್ಲಿ ನಿರ್ಮಿಸಲಾಗಿದೆ. ಶ್ರೀ ರೇವಶಂಕರ್ ಜಗಜೀವನ್  ಜವೇರಿ ಎಂಬ ಗಾಂಧೀಜಿಯವರ ಅತ್ಯಂತ ಆಪ್ತ ಸ್ನೇಹಿನ ಮನೆಯಾಗಿತ್ತು. ಸುಮಾರು ೧೭ ವರ್ಷ (೧೯೧೭-೩೪) ಗಾಂಧೀಜಿಯವರ ಸತ್ಯಾಗ್ರಹ ಚಳುವಳಿಯಕಾಲದಲ್ಲಿ ಕೇಂದ್ರಬಿಂದುವಾಗಿ ಮಹತ್ವದ ಪಾತ್ರವಹಿಸಿತ್ತು.  ಈ ಮನೆಯಿಂದಲೇ ಸ್ವಾತಂತ್ರ್ಯ ಹೋರಾಟದ  ಎಲ್ಲಾ ಕಾರ್ಯ ಚಟುವಟಿಕೆಗಳೂ ನಡೆಯುತ್ತಿದ್ದವು. ಮಣಿಭವನದ ಇತಿಹಾಸವನ್ನು ಗಮನಿಸಿದರೆ, ಗಾಂಧಿಯವರು ಒಬ್ಬ ಸಾಮಾನ್ಯ ಹೋರಾಟಗಾರರಾಗಿ ಪ್ರಾರಂಭಿಸಿ  ಮುಂದೆ ವಿಶ್ವದಲ್ಲೇ ಕ್ರಾಂತಿಕಾರಿ ಸತ್ಯಾಗ್ರಹಿಯಾಗಿ ಶಾಂತಿಯಿಂದ ವಿರೋಧಿಸುತ್ತಾ ನಮ್ಮ  ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದುಕೊಡುವವರೆಗೆ, ಅಂದರೆ   ಭಾರತದ ಸ್ವಾತಂತ್ರ್ಯ ಸಂಗ್ರಾಮದ  ಸಮಯದಲ್ಲಿ  ಒಂದು ದೊಡ್ಡ ಭೂಮಿಕೆಯನ್ನು ನಿರ್ವಹಿಸಿತ್ತು.

ಮಣಿಭವನದಿಂದಲೇ ಗಾಂಧಿಯವರು ೧೯೧೮ ರಲ್ಲಿ ತಮ್ಮ ಅಸಹಕಾರ ಚಳುವಳಿಯನ್ನು ಶಾಂತಿಯುತವಾಗಿ ಆರಂಭಿಸಿದ್ದು.  ಮಣಿಭವನದಲ್ಲೇ ವಾಸಿಸುತ್ತಿರುವಾಗ ಗಾಂಧಿಯವರು ಹತ್ತಿಯ ಕಾರ್ಡಿಂಗ್ ಮಾಡುವ ಪ್ರಕ್ರಿಯೆಯನ್ನು ಕಲಿತು ಅಭ್ಯಾಸಮಾಡಿದರು. ಸದಾ ಚರಖಾದಲ್ಲಿ ಹತ್ತಿನೂಲನ್ನು ನೂಲುವಾಗ ಆಗುವ ಶಬ್ದ ಅವರಿಗೆ ಬಲು ಪ್ರಿಯ. ಅವರಿಗೆ  ಚರಖಾದ ಶಬ್ದವೇ  ಅವರ ಖಾಯಿಲೆಯನ್ನು ತ್ವರಿತವಾಗಿ ಗುಣಪಡಿಸುವ  ಒಂದು ರಾಮಬಾಣವಾಗಿತ್ತು. 

ಗಾಂಧೀಜಿಯವರ ಅರೋಗ್ಯ ಬಹಳ ಹದಗೆಟ್ಟಿತ್ತು. ಆ  ಸಮಯದಲ್ಲಿ ಅಂದರೆ, ಜನವರಿ, ೧೯೧೯ ರಲ್ಲಿ ಇಲ್ಲಿಯೇ ಕಸ್ತೂರ್ ಬಾರವರ ಮಾತಿಗೆ ಮಣಿದು ಮೇಕೆ ಹಾಲನ್ನು  ಕುಡಿಯಲು ಅಭ್ಯಾಸಮಾಡಿದ್ದು.  ೧೯೧೯ ರ ಮಾರ್ಚ್ ತಿಂಗಳಿನಲ್ಲಿ  ಮಣಿಭವನದಿಂದಲೇ 'ರೋಲೆಟ್ ಆಕ್ಟ್ ವಿರುದ್ಧ ಸತ್ಯಾಗ್ರಹ'ವನ್ನು ಶುರುಮಾಡಿದರು. 'ಭಾರತೀಯ ಪ್ರೆಸ್ ಆಕ್ಟ್' ನ್ನು ಪ್ರತಿಭಟಿಸಲು 'ಸತ್ಯಾಗ್ರಹಿ' ಎಂಬ ವಾರ ಪತ್ರಿಕೆಯನ್ನು ೭, ಏಪ್ರಿಲ್, ೧೯೧೯ ರಲ್ಲಿ ಪ್ರಾರಂಭಿಸಿದರು.  

-ಸಂಗ್ರಹಗಳಿಂದ   

.

Rating
Average: 2.5 (2 votes)