ಮುಚ್ಚಿಟ್ಟದ್ದು ತನಗೆ !

ಮುಚ್ಚಿಟ್ಟದ್ದು ತನಗೆ !

ಮುಚ್ಚಿಟ್ಟದ್ದು ತನಗೆ !
 
ಡಾ|| ಅಸದ್ ಗಹಗಹಿಸಿ ನಕ್ಕ. 
 
ನನ್ನ ಪ್ರಶ್ನೆ ಅಷ್ಟೊಂದು ಹಾಸ್ಯಾಸ್ಪದವಾಗಿತ್ತೇ ಎಂಬ ಸಂಶಯ ನನ್ನನ್ನೇ ಕಾಡತೊಡಗಿತು.
 
ಲೋ ಪುಳ್‍ಚಾರ್, ಬೇರೆ ಯಾರನ್ನೂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಿ ನಗೆಪಾಟಲಾಗಬೇಡ. ನಮ್ಮ ದೃಷ್ಟಿಯಲ್ಲಿ ನಿನ್ನ ಸಮಸ್ಯೆ, ಒಂದು ಸಮಸ್ಯೆಯೇ ಅಲ್ಲ. ಅದನ್ನು ಸರಿಪಡಿಸಿಕೊಳ್ಳೋ ಪರಿಹಾರವೂ ನಿಮ್ಮಲ್ಲೇ ಇದೆ. ನನ್ನ ಬಾಯಿಂದ ಉತ್ತರ ಹೇಳಿಸಬೇಕು ಅಂತ ಯಾಕೆ ಹಟ ಮಾಡ್ತಿದೀಯೆ? ಎನ್ನುತ್ತಿದ್ದವನ ಹಣೆಯ ಮೇಲೆ ಇದ್ದಕ್ಕಿದ್ದಂತೆ ಎರಡು ನೆರಿಗೆಗಳು ಮೂಡಿದವು. 
 
ನಾನೇನಾದರೂ ನಿನ್ನ ಈ ಪ್ರಶ್ನೆಗೆ ಉತ್ತರಿಸಿದೆ ಅಂತ ಗೊತ್ತಾದ್ರೆ ನಮ್ಮವರೇ ನನ್ನನ್ನು ಕೊಂದುಬಿಡ್ತಾರೆ! ಊಂ, ಆದ್ರೂ ಹೇಳ್ತೀನಿ ಕೇಳಿಸ್ಕೋ ಅಂದ ಡಾ|| ಅಸದ್. ಈಗ ಅವನ ಧ್ವನಿಯಲ್ಲಿ, ಸಾವಿರ ವರ್ಷಗಳಿಂದ ನಿಮ್ಮನ್ನು ಲೂಟಿ ಹೊಡೆದು, ನಮಗೆ ಬೇಕಾದ್ದನ್ನು ಪಡೆದುಕೊಂಡಿದ್ದೇವೆ ಎನ್ನುವ ಗರ್ವ ಹೊರಸೂಸುತ್ತಿತ್ತು.
 
ಮೊದಲನೆಯದಾಗಿ ನೀವು ನಿಮ್ಮ ಹೆಂಗಸರಿಗೆ ತುಂಬ ಸ್ವಾತಂತ್ರ್ಯ ನೀಡಿದ್ದೀರಿ. ಸಾಲದ್ದಕ್ಕೆ ಅವರನ್ನು ಪೂಜಿಸಿ ಗೌರವಿಸ್ತೀರಿ. ಅದಕ್ಕೇ ಅವರು ನಿಮ್ಮ ತಲೆಯ ಮೇಲೇ ಹತ್ತಿ ಸವಾರಿ ಮಾಡ್ತಾರೆ. ನಮ್ಮನ್ನು ನೋಡಿ ಕಲಿತುಕೊಳ್ಳಿ, ಹೆಂಗಸರನ್ನು ಹೇಗೆ ಹದ್ದುಬಸ್ತಿನಲ್ಲಿ ಇಡಬೇಕು ಅಂತ.
 
ನೋಡೋ ಪುಳ್‍ಚಾರ್, ಅವರು ಕೇಳಿದ್ದನ್ನೆಲ್ಲಾ ಪೂರೈಸೋಕೆ ಹೋಗಲೇಬಾರದು. ದಿನಕ್ಕೆ ಮೂರುಸಾರಿ ಪ್ರೀತಿಸಿದರೂ ತೃಪ್ತರಾಗೋಲ್ಲ ಅವರು. ಪ್ರೀತಿಸಿ ಪ್ರೀತಿಸಿ ನೀವೇ ಸುಸ್ತಾಗಿಹೋಗ್ತೀರಿ. ಅವಕ್ಕೆ ಹೆಣಚಾಕರಿ ಕೊಟ್ಟು ಏಗಿಸಬೇಕು. ನಮಗೆ ಯಾವಾಗ ಬೇಕೋ ಆಗ ಮಾತ್ರ ಮುಟ್ಟಬೇಕು ಅವುಗಳನ್ನು. ಮರುಭೂಮಿಯ ಸಸ್ಯಗಳ ಬಗ್ಗೆ ಕೇಳಿದೀಯಾ? ಯಾವಾಗ ಮಳೆ ಬರುತ್ತೋ ಅಂತ ಕವ ಕವ ಅಂತ ಕಾಯ್ತಾ ಇರುತ್ವೆ ಬೀಜಗಳು. ಅಪರೂಪಕ್ಕೆ ಮಳೆ ಬಿದ್ದಾಗ, ಸರಭರನೆ ಮೊಳೆತು, ಚಿಗುರಿ, ಅಲ್ಪಾವಧಿಯಲ್ಲೇ ಹೆಚ್ಚು ಬೀಜೋತ್ಪಾದನೆ ಮಾಡಿ ಅಸುನೀಗುತ್ತವೆ. ಹ ಹ್ಹ ಹ್ಹಾ! ನಾವೂ ಕೂಡ ಮರುಭೂಮಿಯಿಂದ ಬಂದವರೇ ಕಣೋ ಅಂದ.
 
ಅಲ್ವೋ ಪುಳ್‍ಚಾರ್, ದಿನಕ್ಕೆ ಮೂರುಸಾರಿ ಸ್ನಾನ ಬೇರೆ ಮಾಡ್ತೀರಿ ನೀವು. ಪೆದ್ದು ಮುಂಡೇದೇ, ಬೀಜಕ್ಕೆ ಬಿಸಿನೀರು ಬಿದ್ದರೆ ಉತ್ಪಾದನಾ ಶಕ್ತಿ ಕುಂಠಿತವಾಗುತ್ತೆ ಅಂತ ವೈದ್ಯಜಗತ್ತು ಕೂಗಿ ಕೂಗಿ ಹೇಳ್ತಾ ಇದೆ. ನೀವು ಮಾತ್ರ ಬಿಸಿನೀರಿನ ಸುಖವೇ ಬೇಕು ಅಂತೀರಿ. ಅನುಭವಿಸಿ, ನಿಮ್ಮ ಹಣೆಬರಹ! ಇನ್ನೊಂದು ಕುತೂಹಲಕಾರಿ ಸಂಗತಿ ಗೊತ್ತಾ ನಿನಗೆ? ಈ ಹೆಂಗಸರಿಗೆ ಕೊಳಕು ಹಂದಿಗಳು ಅಂದ್ರೆ ತುಂಬ ಇಷ್ಟ! ಗಂಧಕದ ಹೊಗೆ ಸೂಸುವ ಪರ್ವತಗಳ ತಪ್ಪಲಿಗೆ ಸೆಕೆಂಡ್ ಹನಿಮೂನ್‍ಗೆ ಹೋಗುವವರ ಬಗೆಗೆ ಕೇಳಿಲ್ವಾ ನೀನು? ಲಘುವಾದ ಹೈಡ್ರೋಜನ್ ಸಲ್ಫೈಡಿನ ವಾಸನೆ ವಿಷಯೋದ್ರೇಕವನ್ನು ಉಂಟುಮಾಡುತ್ತೆ. ದಿನಗಟ್ಟಲೆ ಸ್ನಾನ ಮಾಡದೇ ಇದ್ದರೆ ನಮ್ಮ ದೇಹವೂ ಅಂಥದೇ ಷಿಂಡುನಾತ ಹೊರಡಿಸುತ್ತೆ. ಅದರ ಮೇಲೆ ಒಂದಿಷ್ಟು ಅತ್ತರು ಸುರಿದುಕೊಂಡು ಬಿಟ್ಟರೆ, ಈ ಹೆಂಗಸರು ಜನ್ಮ ಜನ್ಮಕ್ಕೂ ನಮ್ಮನ್ನೇ ಹುಡುಕಿಕೊಂಡು ಬರುತ್ವೆ.
 
ಅಲ್ಲಲೇ ಪುಳ್‍ಚಾರ್, ನೀವು ಪರಮ ರಸಿಕರು ಅಂತ ತೋರಿಸಿಕೊಳ್ಳೋಕೆ ದೇವಸ್ಥಾನಗಳಲ್ಲಿ ಕೂಡ ಮಿಥುನ ಶಿಲ್ಪಗಳನ್ನು ಕೆತ್ತಿದೀರಲ್ಲೋ. ಅಲ್ಲದೆ ಆ ನಿಮ್ಮ ಹೆಂಗಸರ ಉಡುಪುಗಳೋ! ಅರೆಬರೆಯಾಗಿ ದೇಹಸಿರಿಯನ್ನು ಎತ್ತಿ ತೋರಿಸುತ್ತಾ ಉದ್ರೇಕಿಸುತ್ತವೆ. ಅವುಗಳನ್ನು ನೋಡಿ ಜೊಲ್ಲು ಸುರಿಸಿಯೇ ನಿಮ್ಮ ಪೌರುಷವೆಲ್ಲ ಉಡುಗಿ ಹೋಗುತ್ತೆ. ಚೆಂದದ ವಸ್ತುಗಳನ್ನು ನಮಗೆ ಬೇಕಾದಾಗ ಮಾತ್ರ ನೋಡಿ ಅನುಭವಿಸಬೇಕಪ್ಪಾ. ಉಳಿದಂತೆ ಅವುಗಳನ್ನು ಭದ್ರವಾಗಿ ಮುಚ್ಚಿಟ್ಟಿರಬೇಕು. ಚೆನ್ನಾಗಿ ಪ್ಯಾಕ್ ಮಾಡಿದ ಉಡುಗೊರೆಗಳನ್ನು ಬಿಚ್ಚಿನೋಡುವಾಗಿನ ಕುತೂಹಲ, ತೆರೆದ ಉಡುಗೊರೆಗಳ ಬಗೆಗೆ ಇರೋಲ್ಲ ಅಲ್ವಾ? ಮುಚ್ಚಿಟ್ಟದ್ದು ತನಗೆ, ಬಿಚ್ಚಿಟ್ಟದ್ದು ಪರರಿಗೆ! ತಿಳ್ಕೋ.
ಲೇ ಪುಳ್‍ಚಾರ್, ಬಹುತೇಕ ಹೆಂಗಸರಿಗೆ ಬೇಕಾದ್ದು ಸ್ವಾತಂತ್ರ್ಯ ಅಲ್ಲಪ್ಪಾ. ಬಲಿಷ್ಠವಾದ ಗಂಡಸಿನಿಂದ ಆಳಿಸಿಕೊಳ್ಳೋಕೆ ಬಯಸುತ್ವೆ ಅವು. ಸರಿಯಾಗಿ ಬೇಲಿಹಾಕಿ ಕಾಯ್ದುಕೊಂಡರೆ ನಾವು ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ವೆ. ಬೇಲಿ ಇಲ್ಲದೆಯೂ ಬದುಕಬಹುದು ಅಂತ ಅವುಗಳಿಗೆ ತಿಳಿದುಬಿಟ್ಟರೆ, ನಿಮ್ಮ ಗತಿಯೇ ನಮಗೂ ಬಂದುಬಿಡುತ್ತೆ.
 
ಕೊನೇದಾಗಿ ಹೇಳ್ತೀನಿ, ಸರಿಯಾಗಿ ಕೇಳಿಸ್ಕೋ ಪುಳ್‍ಚಾರ್, ನಿಮ್ಮ ಧರ್ಮಶಾಸ್ತ್ರ, ಸಮಾನತೆಯ ಕಾನೂನು ಇವುಗಳನ್ನೆಲ್ಲಾ ತಗೊಂಡೋಗಿ ಮೊದಲು ತಿಪ್ಪೆಗೆ ಬಿಸಾಕು. ನಮ್ಮ ಹಾಗೆ ಮೂರು ಮಾತಿನ ವಿಚ್ಛೇದನದ ಒಂದು, ಒಂದೇಒಂದು ಸೌಲಭ್ಯ ಅಳವಡಿಸಿಕೊಳ್ಳಿ ಸಾಕು! ಇಪ್ಪತ್ತೇ ವರ್ಷಗಳಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳೂ ಬಗೆಹರಿದು ಹೋಗುತ್ತವೆ ಅಂದ ಡಾ|| ಅಸದ್.
 
ಅಸದ್ ಸಿದ್ಧಾಂತಗಳನ್ನು ಸುಳ್ಳು ಎಂದು ಸಾಬೀತುಪಡಿಸುವ ನೂರಾರು ಥಿಯರಿಗಳು ಇದ್ದರೂ ಅವುಗಳಿಂದೇನೂ ಪ್ರಯೋಜನವಿಲ್ಲ; ಪ್ರಾಕ್ಟಿಕಲ್ ತರಗತಿಗಳನ್ನು ಶುರುಮಾಡದ ಹೊರತು! ಅಂದುಕೊಳ್ಳುತ್ತಾ ಕ್ಲಿನಿಕ್ಕಿನಿಂದ ಹೊರಬಿದ್ದೆ.
*****
14-04-2016 - ಎಸ್ ಎನ್ ಸಿಂಹ, ಮೇಲುಕೋಟೆ
 

Rating
No votes yet

Comments