ಮುಡುಕುತೊರೆ - ಒಂದು ಬರಹ
ಮುಡುಕುತೊರೆ - ಈ ಇಕ್ಕೆ/ಸ್ತಳ ನಂಗೆ ಬೊ ಇಶ್ಟ. ಮೈಸೂರಿನ ತಿರುಮಕೂಡಲು ನರಸೀಪುರ ತಾಲ್ಲೂಕಿಗೆ ಸೇರಿದೆ. ಇಂದಿಗೂ ಹೆಸರಾಗಿರುವ ತಲಕಾಡಿಗೆ ಇದು ತುಂಬಾ ಹತ್ತಿರ. ಇಲ್ಲಿ ಕಾವೇರಿ ಚೂಪಾಗಿ ತಿರುವಿರುವುದು ನೋಡಲು ಬಲು ಚೆನ್ನ. ಇದರ ಹೆಸರೇ ಹೇಳುವಂತೆ ಮುಡುಕು+ತೊರೆ = ತಿರುವು+ತೊರೆ = ತಿರುಗಿರುವ ನದಿ ಎಂದು ತಿಳಿಯಬಹುದು. ನಮ್ಮ ಹಿರಿಯರನ್ನು ನೋಡಿ ಏನ್ ಚೆಂದ ಹೆಸರು ಇಟ್ಟಿದ್ದಾರೆ. ಇಲ್ಲಿ ಮುಡುಕುತೊರೆ ಜಾತ್ರೆಯಾದಾಗ ದನಗಳ ಜಾತ್ರೆ ಕೂಡ ಮಾಡುತ್ತಾರೆ. ಇಂದಿಗೂ ನಮ್ಮ ಕಡೆ ಮುಡುಕುತೊರೆ ಜಾತ್ರೆ ಎತ್ತುಗಳು ಅಂದ್ರೆ ಬಹಳ ಬೇಡಿಕೆ ( ಏನ್ ಒಳ್ಳೆ ಮುಡುಕುತೊರೆ ಜಾತ್ರೆ ಎತ್ತುಗಳ್ ತರ ಕೊಬ್ಬಿದಿಯಾ ಅಂತ ಗೇಲಿ ಮಾಡುವುದುಂಟು :) ). . ಇಲ್ಲಿ 'ಮಲ್ಲಿಕಾರ್ಜುನನ' ಗುಡಿಯಿದೆ.
Rating