ಮುತ್ತು

ಮುತ್ತು

ಮಾತು ಸಾಕು,ಮುತ್ತು ಬೇಕು
ನೀಡೊಂದು ಸಿಹಿಮುತ್ತು
ನಾ ಮರೆಯಬೇಕು ಆ ಮುತ್ತು
ಆ ಮುತ್ತುಗಳ ತೆಪ್ಪದ ಮೇಲೆ
ಸವೆಯಲಿ ನಮ್ಮ ಮುತ್ತಿನ ಪಯಣ
ಹೀಗೆ ಸಾಗುತಿರಲಿ ನನ್ನ ನಿನ್ನ
ಮುತ್ತಿನ ಹುಡುಕಾಟ .........
ನೋಡಿದವರು ಹೇಳ್ತಾರೆ ಇದು ಹುಡುಗಾಟ

ಮುತ್ತಿನ ಅಮಲಿನಲ್ಲಿ ನಾನದೆ ಮಲಿನ
ಅಳಿಯದೆ ಉಳಿಯಲಿ ಆ ಮಿಲನ
ಆ ಮುತ್ತಿನ ಗಮ್ಮತು
ಮರೆತೋಯ್ತು ಈ ಜಗತ್ತು
ಆದರೆ ನಾ ಮರೆಯೋಲ್ಲ ಈ ಹೊತ್ತು...........
ನಿನ್ನ ಮುತ್ತಿಟ್ಟ ನೆನಪು
ಕಾಡ್ತಾ ಇರುತ್ತೆ ಯಾವತ್ತು
ಮಧುರ ಮಧುರ ಆ ಕ್ಷಣ
ರಸಕ್ಷಣದ ಸವಿಸಿಂಚನ
ನೆನೆದರೆ ಈಗಲೂ ಮೈ ರೋಮಾಂಚನ
ಇದು ಮುತ್ತಿನ ಬೇಡಿಕೆಯ ಮುತ್ತಿನ ಆಹ್ವಾನ
ಈಗಲಾದರೂ ಕೊಡು ಆ ಮುತ್ತಿನ ಜ್ಞಾನ

Rating
No votes yet