ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !

ಮುಸ್ಲಿಂ ವಿದ್ಯಾವಂತರು ಈಗಲಾದರೂ ಎಚ್ಚರಗೊಳ್ಳಲಿ !

ವಿದ್ಯೆ ಮನುಷ್ಯನನ್ನು ವಿಶ್ವ ಮಾನವನನ್ನಾಗಿಸಬೇಕು. ನಾನು ಬೇರೆ, ನೀನು ಬೇರೆ ಎಂಬ ಭಾವ ಹೋಗಿ 'ವಸುಧೈವ ಕುಟುಂಬಕಂ' ಎನ್ನುವುದನ್ನು ವಿದ್ಯಾವಂತರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆ ಅಂತಹ ವಿದ್ಯೆಯನ್ನು ನಮಗೆ ಕೊಡುತ್ತಿಲ್ಲವಾದರೂ, ವಿದ್ಯಾವಂತರಿಗೆ ಇಂತಹ ಉದಾತ್ತ ವಿಚಾರಗಳಿಗೆ ತೆರೆದುಕೊಳ್ಳುವ ಅವಕಾಶ ಹೆಚ್ಚಾಗಿರುತ್ತದೆ. ಅನಕ್ಷರಸ್ಥರಿಗೆ ಅಧ್ಯಯನದ ಅವಕಾಶಗಳೂ, ಪ್ರಪಂಚವನ್ನು ತಿರುಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಅವಕಾಶಗಳು ಕಡಿಮೆ.

ಆದರೆ, ಇತ್ತೀಚಿನ ಕೆಲವು ಘಟನೆಗಳನ್ನು ನೋಡಿದರೆ ಎಷ್ಟು ಓದಿದರೇನು? ಕೆಲವರಲ್ಲಿ ಮತಾಂಧತೆಯೇ ಅದನ್ನೆಲ್ಲಾ ಮೀರಿ ನಿಲ್ಲುತ್ತಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಸೆರೆ ಸಿಕ್ಕ ಹನೀಫನೇನೂ ಕಡಿಮೆ ಓದಿದವನಲ್ಲ. ವೃತ್ತಿಯಲ್ಲಿ ವೈದ್ಯನೂ, ಸರ್ವಧರ್ಮ ಸಮಾನತೆಗೆ ಹೆಸರಾದ ಧರ್ಮಸ್ಥಳದ ವಿದ್ಯಾಸಂಸ್ಥೆಯಲ್ಲಿ, ಅದರಲ್ಲೂ ಉತ್ತಮ ಜೀವನ ಶಿಕ್ಷಣ ನೀಡುವ ಸಿದ್ಧವನ ಗುರುಕುಲದಲ್ಲಿ ಓದಿದವನು. ಆದರೂ ಇವೆಲ್ಲವನ್ನೂ ಮೀರಿ ಒಬ್ಬ ಬೆಳೆದು ಅಪರಾಧಿಯಾಗಿ ಬೆಳೆದು ನಿಲ್ಲಬೇಕಾದರೆ, ಮತಾಂಧದತೆಯೆಂಬುದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಅಚ್ಚರಿ ಮೂಡಿಸುತ್ತದೆ.

ಹಾಗಾದರೆ, ಹಿಂಸೆಯಿಂದ ಒಂದು ಮತವನ್ನು ಜಗತ್ತಿನಲ್ಲಿ ವಿಸ್ತರಿಸಿದಲ್ಲಿ, ಅಂತಹ ಮುಂದೆಯಾದರೂ ಶಾಂತಿಯುತ ಜೇವನ ಸಾಧ್ಯವಾದೀತೇ? ಜಗದ ಶಾಂತಿಗೆ ಬೇಕಾದದ್ದು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಧರ್ಮವೇ ಹೊರತು, ಸಂಕುಚಿತ ಮನೋಭಾವದ, ಪರಮತ ಸಹಿಷುವಲ್ಲದ್ಣ ಮತಗಳಲ್ಲ. ಇಂತಹ ಘಟನೆಗಳ ಬಗ್ಗೆ, ಇಂದಿನ ಮುಸ್ಲಿಂ ಸಮುದಾಯ ನಡೆಯುತ್ತಿರುವ ದಿಕ್ಕಿನ ಬಗ್ಗೆ ನಮ್ಮ ಬುದ್ಧಿಜೀವಿಗಳೂ, ವಿದ್ಯಾವಂತ ಮುಸ್ಲಿಂ ನಾಯಕರೂ ಗಂಭೀಋ ಚಿಂತನೆ ನಡೆಸಬೇಕಾಗಿದೆ. ನಾನೇನೂ ಮುಸ್ಲಿಂ ದ್ವೇಷಿಯಲ್ಲ. ಮುಸ್ಲಿಂ ಸಮುದಾಯ ಹೀಗೇ ಮುಂದುವರಿದರೆ, ವಿದೇಶಗಳಲ್ಲಿ ಮಾತ್ರವಲ್ಲ, ನಮ್ಮ ದೇಶದಲ್ಲೂ ಮುಸ್ಲಿಮನಾದ ಮಾತ್ರಕ್ಕೆ ಒಬ್ಬ ವ್ಯಕ್ತಿಯನ್ನು ಸಂಶಯದಿಂದ ನೋಡುವ ದಿನಗಳು ದೂರವಿಲ್ಲ. ಒಂದು ಮತಕ್ಕೆ ಇದಕ್ಕಿಂತ ಅವಮಾನ ಬೇರೊಂದಿಲ್ಲ. ಇದನ್ನು ತಪ್ಪಿಸಲು, ಮುಸ್ಲಿಮರಿಗೆ ಸರಿಯಾದ ನಾಯಕತ್ವದ ಅಗತ್ಯವಿದೆ. ಮತಾಂಧ ಮೌಲ್ವಿಗಳ ಹಿಡಿತದಿಂದ ಮುಸ್ಲಿಮರನ್ನು ಪಾರು ಮಾಡಬೇಕಾಗಿದೆ. ಎಲ್ಲರೊಂದಿಗೆ ಬಾಳುವುದನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗಳಿಗೆ ಕಲಿಸಬೇಕಾಗಿದೆ.

Rating
No votes yet

Comments