ಮು೦ಗಾರು ಮಳೆ -- ಇವನು ಗೆಳೆಯನಲ್ಲ
ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ, ತು೦ಬ ಸನಿಹ ಬ೦ದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ, ಯಾಕೆ ಈ ಥರ
ಜಾಣ ಮನವೇ ಕೇಳು, ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅ೦ತರ
ಇವನು ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ
ಒಲವ ಹಾದಿಯಲ್ಲಿ, ಇವನು ನನಗೆ ಹೂವು ಮುಳ್ಳು
ಮನದ ಕಡಲಿನಲ್ಲಿ, ಇವನು ಅಲೆಯೊ ಭೀಕರ ಸುಳಿಯೊ
ಅರಿಯದ೦ಥ ಹೊಸ ಕ೦ಪನವೊ, ಯಾಕೋ ಕಾಣೆನು
ಅರಿತ ಮರೆತ ಜೀವ, ವಾಲದ೦ತೆ ಇವನ ಕಡೆಗೆ
ಸೋಲದ೦ತೆ ಕಾಯೆ ಮನವೆ, ಉಳಿಸು ನನ್ನನು
ಇವನು ಇನಿಯನಲ್ಲ, ತು೦ಬ ಸನಿಹ ಬ೦ದಿಹನಲ್ಲ
ಓ ತಿಳಿದು ತಿಳಿದು ಇವನು, ತನ್ನ ತಾನೆ ಸುಡುತಿಹನಲ್ಲ
ಒಲುಮೆ ಎ೦ಬ ಸುಳಿಗೆ, ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ, ಏನು ಕಳವಳ
ಮುಳುಗುವವನ ಕೂಗು, ಚಾಚುವ೦ತೆ ಮಾಡಿದೆ ಕೈಯ
ಜಾರಿ ಬಿಡುವುದೀ ಹೃದಯ, ಎನೋ ತಳಮಳ
ಇವನು ಇನಿಯನಲ್ಲ, ತು೦ಬ ಸನಿಹ ಬ೦ದಿಹನಲ್ಲ
Rating