ಮು೦ಗಾರು ಮಳೆ -- ಕುಣಿದು ಕುಣಿದು ಬಾರೆ...
ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಕುಣಿವ ನಿನ್ನ ಮೇಲೆ, ಮಳೆಯ ಹನಿಯ ಮಾಲೆ
ಜೀವಕೆ ಜೀವ ತ೦ದವಳೆ, ಜೀವಕ್ಕಿ೦ತ ಸನಿಹ ಬಾರೆ
ಒಲವೇ ವಿಸ್ಮಯ, ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕ೦ಡು ನಾನು ತನ್ಮಯ
ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತ೦ದವನೆ, ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ
ಇರುಳಲಿ ನೀನೆಲ್ಲೋ ಮೈಮುರಿದರೆ, ನನಗಿಲ್ಲಿ ನವಿರಾದ ಹೂಕ೦ಪನ
ಕಣ್ಣಲ್ಲಿ ನೀ ಕಣ್ಣಿಟ್ಟು ಬರಸೆಳೆದರೆ, ಮಾತಿಲ್ಲ ಕಥೆಯಿಲ್ಲ ಬರೀ ರೋಮಾ೦ಚನ
ನಿನ್ನ ಕಣ್ಣತು೦ಬ, ಇರಲಿ ನನ್ನ ಬಿ೦ಬ
ಹೂವಿಗೆ ಬಣ್ಣ ತ೦ದವನೆ, ಪರಿಮಳದಲ್ಲಿ ಅರಳುವ ಬಾರೋ
ಒಲವೇ ವಿಸ್ಮಯ
ಒಲವೇ ನೀನೊಲಿದ ಕ್ಷಣದಿ೦ದಲೇ, ಈ ಭೂಮಿ ಈ ಬಾನು ಹೊಸದಾಗಿದೆ
ಖುಶಿಯಿ೦ದ ಈ ಮನವೆಲ್ಲ ಹೂವಾಗಿರೆ, ಬೇರೇನೂ ಬೇಕಿಲ್ಲ ನೀನಲ್ಲದೆ
ಕುಣಿದು ಕುಣಿದು ಬಾರೆ, ಒಲಿದು ಒಲಿದು ಬಾರೆ
ಜೀವಕೆ ಜೀವ ತ೦ದವಳೆ, ಜೀವಕ್ಕಿ೦ತ ಸನಿಹ ಬಾರೆ
ಒಲವೇ ವಿಸ್ಮಯ, ಒಲವೇ ವಿಸ್ಮಯ
ನಿನ್ನ ಪ್ರೇಮ ರೂಪ ಕ೦ಡು ನಾನು ತನ್ಮಯ
ಹುಚ್ಚು ಹುಡುಗ ನೀನು, ಬಿಚ್ಚಿ ಹೇಳಲೇನು
ಜೀವಕೆ ರೆಕ್ಕೆ ತ೦ದವನೆ, ಬಾನಿಗೇರಿ ಹಾರುವ ಬಾರೋ ಒಲವೇ ವಿಸ್ಮಯ