ಮೂಢ ಉವಾಚ - 153

ಮೂಢ ಉವಾಚ - 153

ನೆಲವ ಸೋಕದಿಹ ಅನ್ನವಿಹುದೇನು

ನೆಲವ ತಾಕದಿಹ ಪಾದಗಳು ಉಂಟೇನು |

ಮಡಿಯೆಂದು ಹಾರಾಡಿ ದಣಿವುದೇತಕೆ ಹೇಳು

ದೇವಗೇ ಇಲ್ಲ ಮಡಿ ನಿನಗೇಕೆ ಮೂಢ || ..305


ಸವಿಗವಳದ ರುಚಿಯ ಕರವು ತಿಳಿದೀತೆ

ಸವಿಗಾನದ ಸವಿಯ ನಯನ ಸವಿದೀತೆ |

ಚೆಲುವು ಚಿತ್ತಾರಗಳ ಕಿವಿಯು ಕಂಡೀತೆ

ಅವರವರ ಭಾಗ್ಯ ಅವರದೊ ಮೂಢ || ..306

********************

-ಕ.ವೆಂ.ನಾಗರಾಜ್.

Rating
No votes yet

Comments