ಮೂರು ಚಮತ್ಕಾರದ ವಾಕ್ಯಗಳು

ಮೂರು ಚಮತ್ಕಾರದ ವಾಕ್ಯಗಳು

ಈ ಕೆಳಗಿನ ಸಂದರ್ಭಗಳಲ್ಲಿ ಬರುವ ವಾಕ್ಯಗಳನ್ನು ಹೇಗೂ ಅರ್ಥ ಮಾಡಿಕೊಳ್ಳಬಹುದು.
೧. ಒಬ್ಬ ರಾಜ ಮಂತ್ರಿಯನ್ನು ಕರೆದು ನಿನ್ನ ಮಗಳನ್ನು ಇಂಥವರಿಗೇ ಮದುವೆ ಮಾಡಿ ಕೊಡಬೇಕು ಎಂದು ಹೇಳಿದಾಗ ಮಂತ್ರಿ ' ಮಹಾರಾಜನಿಗೆ ತನ್ನ ಮಗಳ ಮೇಲೆ ಸಂಪೂರ್ಣ ಅಧಿಕಾರವಿದೆ ' ಅನ್ನುತ್ತಾನೆ. ಇದು DLI ನಲ್ಲಿರುವ ಮಾಲತೀ ಮಾಧವ ಎಂಬ ಪುಟ್ಟ ಕಥೆಯ ಪುಸ್ತಕದಲ್ಲಿದೆ.

೨. ಸಾಕ್ರಟೀಸ್ ಗಿಂತ ಹೆಚ್ಚಿನ ಜಾಣರು ಯಾರಾದರೂ ಇದ್ದಾರೆಯೇ ಎಂದು ಕೇಳಿದಾಗ ಗ್ರೀಕರ oracle ಎಂಬ ಹೆಸರಿನ , ನಮ್ಮ ಕಾರ್ಣೀಕದ ಮೈಲಾರದಂತಹ, ದೇವತೆ ' ಹೆಚ್ಚಿನ ಜಾಣರು ಯಾರೂ ಇಲ್ಲ ' ಎನ್ನುತ್ತದೆ.

೩. ಸ್ವರ್ಗಕ್ಕೆ ಯಾರು ಹೋಗುವರು ? ಎಂಬ ಪ್ರಶ್ನೆಗೆ ನಮ್ಮ ಕನಕದಾಸರು 'ನಾನು ಹೋದರೆ ಹೋದೇನು' ಎಂದರು.

Rating
No votes yet