ಮೂರ್ಖರೊಂದಿಗಿನ ಸಂವಾದ!

ಮೂರ್ಖರೊಂದಿಗಿನ ಸಂವಾದ!

ಉಚಿತವಲ್ಲ ನಿಜ ಮೂರ್ಖರೊಂದಿಗಿನ ಸಂವಾದ
ಉಚಿತವಲ್ಲ ನಿಜ ಮೂರ್ಖರೊಂದಿಗಿನ ಸಂವಾದ
ಒಳಿತಿಲ್ಲ ಇನಿತೂ ಖಂಡಿತ ಕೆಡಿತೆ ನಮಗದರಿಂದ

ಆದರವರನು ಮೂರ್ಖರೆಂದು ಅರಿವ ಪರಿಯೆಂತು
ಆದರವರನು ಮೂರ್ಖರೆಂದು ಅರಿವ ಪರಿಯೆಂತು
ಅದಕ್ಕೇ ಸಂವಾದ ನಡೆಸಿ ಉಗಿಸಿಕೊಳ್ಳಬೇಕಿಂತು

ತಪ್ಪು ಅವರದ್ದೂ ಅಲ್ಲ ನಿಜಕೂ ಇತ್ತ ನಮ್ಮದ್ದೂ ಅಲ್ಲ
ತಪ್ಪು ಅವರದ್ದೂ ಅಲ್ಲ ನಿಜಕೂ ಇತ್ತ ನಮ್ಮದ್ದೂ ಅಲ್ಲ
ಅವರು ಅಂತೆಯೇ ಎಂಬ ಅರಿವೇ ನಮಗೆ ಇದ್ದಿರಲಿಲ್ಲ

ಎಲ್ಲರನೂ ಸಮನಾಗಿ ನೋಡುವ ನಮ್ಮ ದೃಷ್ಟಿಕೋಣ
ಎಲ್ಲರನೂ ಸಮನಾಗಿ ನೋಡುವ ನಮ್ಮ ದೃಷ್ಟಿಕೋಣ
ಅದೆಷ್ಟು ದಿನ ನಮ್ಮನ್ನು ಕಾಡುತ್ತದೆಯೋ ನೋಡೋಣ

ಯಾರ ಮೇಲೂ ಸುಮ್ಮನೆ ಪಡಬಾರದೆಂದು ಅನುಮಾನ
ಯಾರ ಮೇಲೂ ಸುಮ್ಮನೆ ಪಡಬಾರದೆಂದು ಅನುಮಾನ
ಅಂದುಕೊಳ್ಳುವುದರಿಂದಲೇ ಆಗುವುದೀ ರೀತಿ ಅವಮಾನ

ಇರಲಿ ಇರಲಿ ಇಲ್ಲಿ ಏನೇ ಇದ್ದರೂ ಅದೆಲ್ಲ ಆ ದೇವರ ಇಚ್ಛೆ
ಇರಲಿ ಇರಲಿ ಇಲ್ಲಿ ಏನೇ ಇದ್ದರೂ ಅದೆಲ್ಲ ಆ ದೇವರ ಇಚ್ಛೆ
ಕೇಳುವವರು ಯಾರೂ ಇಲ್ಲ ಇಲ್ಲಿ ನಮ್ಮ ನಿಜ ಮನದ ಇಚ್ಛೆ

-ಆಸು ಹೆಗ್ಡೆ

Rating
No votes yet