ಮೊದಲನೆಯದಾಗಿ....

ಮೊದಲನೆಯದಾಗಿ....

ಕನ್ನಡದಲ್ಲಿ ಮಾತ್ರವಲ್ಲ, ನನ್ನ ಜೀವನದಲ್ಲೇ ಮೊದಲ ಬ್ಲಾಗ್ ಇದು..!! ಈ ’ಸಂಪದ’ ಕನ್ನಡ ಸಮುದಾಯದ ಉಪಯುಕ್ತತೆ, ವಿಶಾಲತೆ ನೆನೆಸಿಕೊಂಡರೆ ಭಯಂಕರ ಖುಷಿಯಾಗುತ್ತೆ..!! ಕೈಗೆ ಸಿಗುವ ಕನ್ನಡ ಬರಹಗಳನ್ನೆಲ್ಲ ಓದುವ ಅಭ್ಯಾಸವಿದೆ, ಆಗೊಮ್ಮೆ, ಈಗೊಮ್ಮೆ ಮನಸ್ಸಿಗೆ ಅನ್ನಿಸಿದನ್ನ ಬರೆಯೋ ಹವ್ಯಾಸವಿದೆ, ಆಧ್ಯಾತ್ಮ, ಕನ್ನಡ ಸಾಹಿತ್ಯ, ಸಿನಿಮಾ, ನನ್ನ ಇತರೆ ಆಸಕ್ತಿಯ ವಿಷಯಗಳು.
’ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂದು ನಂಬಿರುವ ಕನ್ನಡಿಗ.
ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುವಂತೆ, ಕನ್ನಡಿಗ ಎಂದು ಪರಿಚಯಿಸಿಕೊಳ್ಳಲು ಇಚ್ಚಿಸುತ್ತೇನೆ.

ಬಹಳ ದಿನಗಳಿಂದ ನಾನು ಬರೆದದ್ದನ್ನ, ನನ್ನ ವಿಚಾರಗಳನ್ನ ಒಂದು ಗುಂಪಿನೊಂದಿಗೆ ಹಂಚಿಕೊಳ್ಳುವ ಆಸೆಯಿತ್ತು. ಆ ಆಸೆ ಈಗ ’ಸಂಪದ’ ಮೂಲಕ ಚಿಗುರಿದೆ.

Rating
No votes yet