ಮೊದಲ ತೊದಲು --- ನಾನು , ಅವಳು ಮತ್ತು ಲವ್

ಮೊದಲ ತೊದಲು --- ನಾನು , ಅವಳು ಮತ್ತು ಲವ್

"ಸಾಕಾ? ಹೆಂಗಿತಪ್ಪ" ಮೆಟ್ಟಿನಲ್ಲಿ ಮುಖಕ್ಕೆ ಹೊಡೆದಂತೆ ಅಂದ ಗೋಪಿ . ಮೊದಲೇ ಅವಳು ಸರಿಯಾಗಿ ಮಾತಾಡಲೇ ಇಲ್ಲ ಅನ್ನೋ ಕೋಪ , ಕೆಕ್ಕರಿಸಿ ನೋಡಿದೆ. " ನೋಡು ಗೋಪಾಲ , ನಾನು ಹೆದರೋ ಪೈಕಿ ಅಲ್ಲ , ಸ್ವಲ್ಪ ಯೋಚನೆ ಮಾಡು , ಆ ಪಾಪಿ ನಿನ್ನ ಹಾಳು ಮಾಡಿದ್ದಾನೆ , ಮುಂದೇನೂ ಮಾಡ್ತಾನೆ , ಸುಮ್ಮನೇ ನನ್ನ ಮಾತು ಕೇಳು ಉದ್ದಾರ ಆಗ್ತೀಯಾ ಹೇಗೂ ಉದ್ದ ಅಂತೂ ಆಗೋಲ್ಲ " ಅಂತ ಅವ್ನು ಅನ್ನುತಿದ್ದ ಹಾಗೇನೆ ಆ ಕಡೆ ಇಂದ ಬಂದ ಪಾಪಿ . ಬಂದವನೇ " ಲೋ ಕಂದ .. ಅವ್ನದ್ದು ಮಾಮೂಲಿ , ಏನೋ ಮಾತಡ್ತಾನೆ .. ಬಿಡು ಅದನ್ನ ..ಯಾಕೋ ಬೇಜಾನ್ ಬೇಜಾರ್ ನಲ್ಲಿ ಇರೋ ಹಾಗಿದೆ " ಅಂತ ಹೆಗಲ ಮೇಲೆ ಕೈ ಹಾಕಿದ. ನಂಗೆ ಯಾರಾದ್ರೂ ಮೈ ಮೇಲೆ ಕೈ ಹಾಕಿದ್ರೆ ಚೇಳು ಬಿಟ್ಟ ಹಾಗೆ ಆಗುತ್ತೆ .. " ಏನೂ ಇಲ್ಲ ಕಣೋ , ಹಾಗೆ ಸುಮ್ಮನೇ " ಅಂತ ಹೆಗಲ ಮೇಲಿನ ಕೈನ ಕಿತ್ತು ಎಸೆದೆ . ಪಾಪಿ ಮೊದ್ಲೇ ಮಾತು ಮನೋಹರ " ಇರ್ಲಿ ಹೇಳ್ರಿ .. ಆಗಿರೊದೇ ಉಂಟಂತೆ ..ಹೇಳಪ್ಪ ರಾಜಕುಮಾರ " ಅಂತ ಡೈಲೋಗ್ ಬೇರೆ ಹೊಡ್ದ . ವಿದಿ ಇಲ್ಲದೇ ನಾನು ಮೆತ್ತಗೆ " ಮಗ ಅದು ಏನಾಯಿತು" ಅಂತ ರಾಗ ಶುರು ಮಾಡ್ದೆ ಅಷ್ಟೇ , ಗೋಪಿ ಗಟ್ಟಿ ದ್ವನಿಲಿ " ಲೋ ಪಾಪಿ , ಆ ಹುಡ್ಗಿ ಇವ್ನು ಫೋನ್ ಮಾಡಿದ್ರೆ , ನಾನು ಈಗ ಫ್ರೆಂಡ್ ಜೊತೆ ಮಾತಾಡ್ತ ಇದೀನಿ ಆ ಮೇಲೆ ಕಾಲ್ ಮಾಡು ಅಂತ ರಪಕ್ಕನೆ ಕಟ್ ಮಾಡಿದ್ಲು ಕಣೋ .. ಅವ್ಲು ಈ ತರ ಮಾಡ್ತ ಇರೋದು ಇದು ಎಷ್ತನೇ ಸಾರಿನೋ .. ಇವ್ನ್ಗ್ ನಾಚ್ಕೆ, ಮಾನ , ಮರ್ಯಾದೆ ಅನ್ನೊದೇ ಇಲ್ಲ ಎಲ್ಲ ನಿನ್ದೇ ಕುಮಕ್ಕು .." ಅಂತಾ ರೇಗಿ ಒಂದು ಕ್ಶಣ ಮಾತು ನಿಲ್ಲಿಸಿ ಮುಖ ನೊಡ್ದ . ನಾನು ಬಿಡ್ಟೀನಾ ? ಪಾಪ ಕಣೋ ನಾಳೆ ಯಾವುದೋ ಮಣ್ಣು ಮಸಿ ಅಸೈನ್‌ಮೆಂಟ್ ಕೊಡೋಕೆ ಇದೆ ಅನ್ನ್ಸುತೆ , ತುಮ್ಬಾನೇ ಡೌಟ್ಸ್ ಇತ್ತೇನೋ , ಅದಕ್ಕೆ ಫ್ರೆಂಡ್ ಹತ್ರ ಡಿಸ್‌ಕಸ್ ಮಾಡ್ತಾ ಇರ್ಬೇಕೂಂತ ಮೆಲ್ಲಗೆ ನನ್ನ ಹುಡುಗಿ ಪರ ವಹಿಸಿದೆ . ಅದು ಸುಳ್ಳು ಅಂತ ಗೋಪಿಗೆ ಗೊತ್ತು , " ಗೋಪಾಲ , ರಾಜ್‍ಕುಮಾರ.. ತಾವು ಅವ್ಲನ್ನ ಐದನೇ ಕ್ಲಾಸ್ ಇಂದ ಲವ್ ಮಾಡ್ತಾ ಇರೋದು
ನಂಗೂ ಗೊತ್ತು , ಸುಮ್ಮನೇ ನಾನು ಮಾತಾಡೊಲ್ಲ .. ನೀನೇ ಡಿಸೈಡ್ ಮಾಡು "ಅಂತ ಮುಂದೆ ಎನೋ ಹೇಳೋಕ್ಕೆ ಹೊರಟ ಆವನ ಮಾತಿನ ಮಧ್ಯಕ್ಕೆ ಬಾಯೀ ಹಾಕಿ " ಲೇ ಅದು ಹಾಗಲ್ಲ ಕಣೋ " ಅನ್ನೋದೇ ತಡ " ನೀನು ಸ್ವಲ್ಪ ಮುಚ್ಕೊಂಡು ಇರಪ್ಪ ನಿಮ್ಮ ದೇವರ ಸತ್ಯ ನಮ್ಮಿಬ್ಬರಿಗೂ ಗೊತ್ತು " ಅಂತ ಶುರು ಹಚ್ಛೊಂಡ ..
ಬೇರೆ ದಾರಿ ಇಲ್ಲ , ಕೆಲ್ಳೇ ಬೇಕು .. " ಲೇ ಗೂಬಾಲ್ ಗೋಪಾಲ ..ನೀನೇ ಹೇಳು ಇದೆಲ್ಲಾ ಸರಿನಾ ಅಂತ .. ನೀನು ನಿದ್ದೆ ಕೆಟ್ಟು ಅಲಾರ್ಮ್ ಇಟ್ತ್ಕೊನ್ಡು 4 ಗಂಟೆಗೇ ಅವ್ಳಿಗೆ ಫೋನ್ ಮಾಡಿ , ಚಿನ್ನಿ ಏಳು ಪುಟ್ಟ .. ಓದ್ಕೊಳ್ಳೆ ಬಂಗಾರಿ ಅಂತ ಏಳಿಸ್ತಾ ಇದ್ದ್ರೆ ಆ ರಾಜ್‍ಕುಮಾರಿ ಪ್ಲೀಸ್ ಐದು ನಿಮಿಷ ಬಿಟ್ಟು ಏಳ್ಸು ಅನ್ತನೇ ಇರ್ತಾಳೆ ..ನೀನು ಹನ್ನೆರಡನೇ ಸಾರಿ ಎಳ್ಸಿದ ಮೇಲೇ ಹೂಂ ಇನ್ನು ಒದ್ಕೊತಿನೀ ಅನ್ತಾಳೆ .. ಅಷ್ತು ಅಂದು ಅವ್ಳು 8 ಗಂಟೆ ತಂಕಾ ಮಲ್ಗೊದು ಇದ್ದೇ ಇದೆ .. ಸಂಜೆ ಫೋನ್ ಮಾಡಿದ್ರೆ ಹೇ ನಿಂಗೆ ಗೊತ್ತಾ ? ನನ್ನ ಕ್ಲಾಸ್ಮೆಟ್ ಒಬ್ಬ ನನ್ನ ಮೇಲೆ ತಲೇ ಕೆಡಿಸಿಕೊನ್ಡು ಸ್ಲೀಪಿಂಗ್ ಪಿಲ್ಸ್ ತಗೋತ್ತಾನೆ ಅಂತ ಅನ್ನೋಳಿಗೆ ನೀನು ಮಲಗಿದ್ದು ಬರೀ 2 ಗಂಟೆ ಮಾತ್ರ ಅಂತ ಗೊತ್ತಾಗೋದಿಲ್ಲ ಅಲ್ವಾ !? ಆಮೇಲೆ ಒಳ್ಳೇ ಕೋಗಿಲೆ ಉಲಿಯೋ ತರಾ ನನ್ನ ಮೊಬೈಲ್ ಕರೆನ್ಸಿ ಖಾಲಿ ಕಣೊ ಅನ್ನ್ತಿದ್ದ ಹಾಗೆ ನೀನು ರಿಚಾರ್ಜ್ ಮಾಡಿಸ್ತೀಯ .. ಕರೆನ್ಸಿ ತುಂಬಿದ ಕೂಡ್ಲೇ ನಾನು ನಿಂಗೆ ಮತ್ತೆ ಮಾತಾಡ್ತಿನಿ ಅಂತ ಹೇಳಿ ಯಾರೋ ಬಾಯ್ ಫ್ರೆಂಡ್ ಒಬ್ಬನ ಜೊತೆ ಗಂಟೆ ಗಟ್ಲೆ ಲಲ್ಲೆ ಹೊಡಿತನೇ ಇರ್ತಾಳೆ .. ನೀನು 276 ಸಿಟಿ ಬಸ್ ಗೆ ಕಾಯೋ ಹಾಗೆ ಕಾಯ್ತಾ ಇರ್ತೀಯಾ .. ಇದೆಲ್ಲ ಬಿಡು .. ಅವಳ ಸೆಮಿಸ್ಟರ್ ಫೀಗೆ ಬೇಕು ಅಂತ
ಕೈ ಬಾಯಿ ಸುಟ್ಟುಕೊನ್ಡು , ಕ್ಯಾಟಲ್ ಫುಡ್ ತಿನ್ಕೋನ್ಡು ಕೆಲವೊಮ್ಮೆ ಬರೀ ಹೊಟ್ಟೆಲಿ ಮಲಗಿ ಡಾಲರ್ ಉಳಿಸ್ತಿಯಾ ಅದೇ ದುಡ್ಡ್ ನಲ್ಲಿ ನಿನ್ನ ಸುನ್ದ್ರಿ ಬಾಯ್ ಫ್ರೆಂಡ್ ಬೈಕ್ ನಲ್ಲಿ ಹಿಂದೆ ಕೂತು ಊರೆಲ್ಲ ಸುತ್ತಾಡಿ ಪಿzzಅ ಹಟ್ ನಲ್ಲಿ ಪೀಡ್ಜಾ ತಿನ್ನೋದು ಅನ್ನೋದನ್ನ ಹೇಗೇ ಮರಿತಿಯಾ , ಮೊನ್ನೆ ನಿನ್ನ ಫ್ರೆಂಡ್ ಅವರ ಫೋಟೋ ತೆಗೆದು "ಇವರು ಯಾರು ಬಲ್ಲೆಯೇನು ? " ಅಂತ ಕ್ಯಾಪ್‌ಶನ್ ಹಾಕಿ ಈಮೇಲ್ ಕಲ್ಸಿದ್ದ್ನಲ್ಲ , ಅದನ್ನ ನೋಡಿಯೂ ಸುಮ್ನೇ ಇದ್ದೀಯಾ ... " ಮುಂದೆ ಆವ್ನು ಏನೋ ಹೇಳ್ತಾನೇ ಇದ್ದ .. ನಾನು ಲ್ಯಾಪ್ ಟಾಪ್ ನಲ್ಲಿ ಮೀಡಿಯ ಪ್ಲೇಯರ್ ಪ್ಲೇ ಕ್ಲಿಕ್ ಮಾಡಿದ್ದೇ ತಡ " ನೀ ಶಾಪ ಕೊಟ್ಟರೂ ನಾ ನಾಶ ವಾದರೂ ನನಗೆ ನೀನೇ ಬೇಕು "ಅಂತ ರಘು ದೀಕ್ಷಿತ್ ಹಾಡತೊಡಗಿದ.

Rating
No votes yet