ಮೌನ

ಮೌನ

ತೆರದ ತುಂಬು ಅರವಿಂದದಲಿ,
ಮೊಗ್ಗು ಹೊವಾಗುವ ಹಾಗೆ,
ತುಟಿಗಳೆರಡು ಹಾರ ಹೊಸೆದು,
ನಿಘಂಟನ್ನೇ ಬರಿದು ಮಾಡುವ ಹಾಗೆ,
ಮಾತನಾಡಿತು ನಿನ್ನ ಮೌನ.

ಮುಳುಗು ಸೂರ್ಯನೆಡೆಗಿನ ನಯನ,
ನೆನಪುಗಳ ಸಂಗ್ರಹಿಸುವ ಹಾಗೆ,
ಒಮ್ಮೊಮ್ಮೆ ಆಟವಾಡುವ ರೆಪ್ಪೆ,
ಒಳಗೆ ಏನೋ ಬಚ್ಚಿಡುವ ಹಾಗೆ,
ಮಾತನಾಡಿತು ನಿನ್ನ ಮೌನ.

ಅಂಗಯ್ಯಿಯ ಅಂಗಳದಲ್ಲಿ ಮಲಗಿದ ಕೆನ್ನೆ,
ಒಂದು ಗುಳಿಯನ್ನು ಕಟ್ಟುವ ಹಾಗೆ,
ಹೂವೊಳಗೆ ಕಂಡ ಆ ಲಜ್ಜೆ,
ನಿನ್ನಲ್ಲೇ ಪ್ರತಿಫಲಿಸುವ ಹಾಗೆ,
ಮಾತನಾಡಿತು ನಿನ್ನ ಮೌನ.

ಕಿರುನಗೆಯ ಕಾಣದ ನೆರಳು,
ಈ ಹೃದಯ ಕಲಕುವ ಹಾಗೆ,
ನೀ ಎಲ್ಲೊ ಮರೆಯಲಿದ್ದರು,
ನನ್ನೆದೆಗೆ ಕೇಳುವ ಹಾಗೆ,
ಮಾತನಾಡಿತು ನಿನ್ನ ಮೌನ.

Rating
No votes yet