ಯಾವುದು ಮುಖ್ಯ ಮನುಷ್ಯನಿಗೆ?

ಯಾವುದು ಮುಖ್ಯ ಮನುಷ್ಯನಿಗೆ?

ನನ್ನ ಚಿಕ್ಕಮ್ಮ ನ ಮಗ ನನಗಿಂತ ಒಂದು ವರ್ಷಕ್ಕೆ ಕಿರಿಯವ. ಅವನು ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ. ನಾನು ಇನ್ನು ನನ್ನ ವಿದ್ಯಾಭ್ಯಾಸ ಮುಗಿಸಿರಲಿಲ್ಲ. ಆಗ ನಮ್ಮ ಸಂಬಂಧಿಗಳು ನಮ್ಮನ್ನು ನೋಡುವ ರೀತಿಯೇ ಬದಲಾಯ್ತು. ಅವನಿಗೆ ಎಲ್ಲ ಕಡೆ ಅಗ್ರ ತಾಂಬೂಲ. ನಾನು ಮಾಸ್ಟರ್ ಡಿಗ್ರಿ ಮುಗಿಸಿದ ನಂತರವೂ ಇದು ಬದಲಾಗಲಿಲ್ಲ. ನನಗೂ ಕೆಲಸ ಸಿಕ್ಕಿ ಮೊದಲ ಸಂಬಳ ೨,೫೦೦ ಅಮ್ಮನ ಕೈಗಿಡುವಾಗ ಆತ ೨೫, ೦೦೦ ದುಡಿಯುತ್ತಿದ್ದ. ಆದರೂ ಅಪ್ಪ ಬೆನ್ನು ತಟ್ಟಿದರೂ ಅಮ್ಮನ ಕಣ್ಣಂಚಿನಲ್ಲಿ ನೀರ ಗಮನಿಸಿದ್ದೆ. ನಾನು ನಿಸ್ಸಹಾಯಕನಾಗಿದ್ದೆ. ನಮ್ಮ ವ್ಯವಸ್ಥೆಯೇ ಹಾಗಿರುವಾಗ ನಾನು ಏನು ಮಾಡಲು ಸಾಧ್ಯವಿರಲಿಲ್ಲ. ರಾಜಕೀಯ ಮಾಡಲು ನಮಗೆ ಗೊತ್ತಿಲ್ಲ. ನನ್ನ ಓದು ನನ್ನ ಕೈ ಹಿಡಿದು ನಡೆಸಲು ಸೋತಿತ್ತು. ಅಥವಾ ನನಗೆ ದುಡಿಸಿಕೊಳ್ಳಲು ಬರುತ್ತಿರಲಿಲ್ಲವೇನೋ? ಅವನು ಡಿಗ್ರಿ ಮಾಡಿ ಗಳಿಸುವಷ್ಟು ಹಣವನ್ನು ನಾನು ಮಾಸ್ಟರ್ ಡಿಗ್ರಿ ಮಾಡಿಯು ಯಾಕೆ ಸಿಗುತ್ತಿಲ್ಲ ಎಂಬ ಸಂಗತಿಯನ್ನು ಅಮ್ಮನಿಗೆ ಹೇಳಿದರೂ ಅರ್ಥವಾಗುತ್ತಿರಲಿಲ್ಲ.

ಇದು ಆಗಿ ಒಂದೆರಡು ವರ್ಷ ಆಗಿರಬೇಕಷ್ಟೆ. ಆರ್ಥಿಕ ಹಿಂಜರಿತದ ಕಾರಣಕ್ಕೆ ಚಿಕ್ಕಮ್ಮನ ಮಗ ಕೆಲಸ ಕಳೆದುಕೊಂಡ. ಅವನಿಗೆ ಭೂಮಿಯೇ ಬಾಯ್ದೆರೆದಂತಾಯಿತು.ಮುಂದಿನ ಭವಿಷ್ಯ ಕತ್ತಲೆಯೇ ಅಂದು ಕೊಂಡ. ಅವನಿಗೆ ನಮ್ಮಂತೆ ಸರಳವಾಗಿ ಬದುಕಲು ಬಾರದು. ನಾನು ಅವನಿಗೆ ಮತ್ತೆ ವಿದ್ಯಾಭ್ಯಾಸ ಮುಂದುವರೆಸಲು ಹೇಳಿದೆ. ಈಗ ಮತ್ತೆ ಓದುತ್ತಿದ್ದಾನೆ.

ಈಗ ನನ್ನನ್ನು ಕಾಡುವ ಪ್ರಶ್ನೆಯೆಂದರೆ ಸಮಾಜ ಯಾವ ಅಂಶವನ್ನು ನೋಡಿ ವ್ಯಕ್ತಿಯನ್ನು ಪುರಸ್ಕ್ರರಿಸುತ್ತದೆ ಅನ್ನೋದು? ದುಡ್ದೋ, ವಿದ್ಯಾಭ್ಯಾಸವೋ, ಗುಣವೋ, ಶಿಫಾರಸ್ಸೋ,,,,,,,,
ಇದನ್ನು ನನ್ನ ತಂದೆಯಲ್ಲಿ ಕೇಳಿದರೆ ಅವರು ಹೇಳಿದ್ದು- ನಿನ್ನ ಮಂಕು ತಲೆಗೆ ಅದು ಹೊಳದಿದ್ದರೆ ನೀನು ಯಾವುದೋ ಸ್ಥಾನದಲ್ಲಿ ಇರುತ್ತಿದ್ದೆ ... ಅಂತ.. ಅದು ಹೌದು ಅನಿಸುತ್ತಿದೆ.. ನಿಮಗೆ????

Rating
No votes yet

Comments