ರಾಜ್ ಮತ್ತು ದೇವಸ್ಥಾನ

ರಾಜ್ ಮತ್ತು ದೇವಸ್ಥಾನ

ಡಾ. ರಾಜ್‍ಕುಮಾರ್‍ಗೆ ದೇವಸ್ಥಾನ ಕಟ್ಟಬೇಕಂತೆ.ಡೆಕ್ಕನ್ ಹೆರಾಲ್ಡ್ ನ ಈ ವರದಿ ನೋಡಿ.http://www.deccanherald.com/deccanherald/apr192006/city2110502006418.asp

ರಾಜ್ ಅಭಿಮಾನಿಗಳ ಸಂಘ ಇದನ್ನು ತಡಿಬೇಕು.ಯಾವತ್ತು ರಾಜ್ ಪ್ರೀತಿಯ ಅಣ್ಣಾವ್ರು ಆಗಿಯೇ ನಮ್ಮ ಜೊತೆ ಇರಲಿ..

ಇ-ಟಿವಿಯಲ್ಲಿ 'ರಸ ಋಷಿಗೆ ನಮಸ್ಕಾರ" ಎನ್ನುವ ಕಾರ್ಯಕ್ರಮ ಬರುತಿತ್ತು.ಆ ಕಾರ್ಯಕ್ರಮದ ಕೊನೆಯ ಸಂಚಿಕೆಯಲ್ಲಿ ತೇಜಸ್ವಿಯವರ ಸಂದರ್ಶನ ಇತ್ತು.ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ಕಾಲ, ಕುಪ್ಪಳ್ಳಿಯಲ್ಲಿ ಕುವೆಂಪು ಸ್ಮಾರಕಾರ್ಥವಾಗಿ ಏನಾದ್ರು ಮಾಡಬೇಕು ಅಂತ ಹೇಳಿದ್ರಂತೆ.ಆಗ ತೇಜಸ್ವಿಯವರು,"ಇನ್ನು ಎಲ್ಲಿಯಾದ್ರು ದೇವಸ್ಥಾನ ಎಲ್ಲಾ ಕಟ್ಟಿ ಬಿಟ್ರೆ ಫಜೀತಿ" ಅಂತ ತಾವೆ ಕಲ್ಲುಗಳನ್ನು ತಂದು ಅಲ್ಲಿ ಇಟ್ಟರಂತೆ(ಯಾವುದೋ ಯುರೋಪಿಯನ್ ಶೈಲಿಯಲ್ಲಿ;ಆ ಕಲ್ಲುಗಳ ಮಹತ್ವದ ಬಗ್ಗೆ ಅವರು ಆ ಕಾರ್ಯಕ್ರಮದಲ್ಲಿ ಏನನ್ನು ಹೇಳಲು ನಿರಾಕರಿಸಿದರು).

ರಾಜ್ ಅಭಿಮಾನಿಗಳಿಗೂ ಸದ್ಭುದ್ದಿ ಬರಲಿ...

Rating
No votes yet