ರಾಜ ಯೋಗ,
ರಾಜಯೋಗ
ಆಸಕ್ತಿ ಬೇಕಣ್ಣ ತ್ಯಾಗದಲಿ
ಅನಾಸಕ್ತಿ ಬೇಕಣ್ಣ ಆಸೆಯಲಿ
ಆಸೆಗೆ ಪಾಶವು ಮೋಸವಣ್ಣ
ಮೋಸದ ನಾಶವು ತ್ಯಾಗವಣ್ಣ
ಆಸೆಯ ಕೂಸೆ ಆಸಕ್ತಿ
ತ್ಯಾಗದ ಮಗುವೆ ತಂದುರಸ್ತಿ
ಕೋಪದ ಮೂಲವು ಆಸೆಯಪ್ಪ
ದೀಪದ ಮೂಲವು ತ್ಯಾಗವಪ್ಪ
ಆಸೆಯ ತ್ಯಾಗದ ಮೀಸೆಯ ವೀರ
ದೇಶದ ಏಳಿಗೆ ಮಾಡುವ ಪೌರ
ದೇಹಕೆ ಭೋಗದ ಆಸೆಯೇ ರೋಗ
ಭೋಗದ ತ್ಯಾಗವೆ ಶ್ರೀ ರಾಜಯೋಗ/
ಅಹೋರಾತ್ರ
೨೯/೦೪/೦೬.
ರಾತ್ರಿ:- ೧:೨೫.
Rating
Comments
ರಾಜಯೋಗ