ರೇಖೆಗಳು

ರೇಖೆಗಳು

banana leaf


ರೇಖೆಗಳು - ಅವಳ ಕೈ ಬೆರಳುಗಳು ಬಾಳೆಲೆಯಲಿ


ಸಾಗಿ ಮೂಡಿಸಿದ ದಾರಿಗಳು.


ಎಲೆಯಲಿರುವ ಬಗೆ ಬಗೆಯ ಭಕ್ಷ್ಯಗಳೆಷ್ಟೋ?


ಅವುಗಳ ಸ್ಪರ್ಷ ಕ೦ಡ ಬೆರಳು ಬಾರಿಗಳೆಷ್ಟೋ?


ಅಡುಗೆಯ ರುಚಿಯರಿತವೇ ಬೆರಳು?


ಸೇರಿದವೇ ಹೊಟ್ಟೆ ಕರಳು?


ಅವಳ ಕಣ್ಗಳ ನೋಟದ ಹರಿತವೆಲ್ಲೋ?


ಮನವ ಕಾಡುವ ದೂರದ ಸೆಳೆತವೆಲ್ಲೋ?


ಒ೦ದಗಳನು ನಾಲಿಗೆ ರುಚಿಸಲಿಲ್ಲ,


ಆದರೆ, ರೇಖೆಗಳು ಮೂಡಿದವು ನೂರಾರು.


ಚಿತ್ರ ವಿಚಿತ್ರ ರೇಖೆಗಳಾಡಿದವು ಬೆರಳು ಎಲೆಯ ತು೦ಬ,


ಚಿತ್ತ ಕದಡಿ ತೊಳಲು ಮನದ ಅವಳ ಬಿ೦ಬ,


ಎಲೆಯ ಮೇಲಿತ್ತು - ಅವಳ ಮನಸ್ಥಿತಿ.


ಎಲೆಯಾದರೂ ಅರಿಯಿತೇ ಆ ನೋವ ರೀತಿ?


ನೆನಪುಗಳುಕ್ಕಿ ಕಣ್ಣ ತು೦ಬಿದವು


ನೆನಪುಗಳಲ್ಲೇ ರೇಖೆ ಅಳಿದವು.


ಬೆರಳಾಯಿತು ಭಕ್ಷ್ಯಗಳೊಳಗಾಡಿ ಮತ್ತೇ ರೇಖಿಸಲು ತಯಾರು.


ಅವಳ ಮನಕೆ ಸ್ಪ೦ದಿಸಿ, ರೇಖೆಗಳ ನೀರಿಕ್ಷೆಗೆ ಬರುವರಾರು?

Rating
No votes yet