ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ
ರೈತರ ತೊಂದರೆಗಳನ್ನು "ಲೈಫು ಇಷ್ಟೇನೆ" ಚಿತ್ರದ "ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು" ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ.
ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು
ರೈತರ ಗೋಳಿಗೆ ಇಲ್ಲ ಮುಲಾಮು
ಹಳೆ ಸಿಎಂಗಳಿಗೆಲ್ಲ ದೊಡ್ಡ ಸಲಾಮು
ಕಿವಿಯಲ್ಲಿ ನೀವು ಇಟ್ಟ ಹೂವೆ ಖಾಯಮ್ಮು
ಎಲ್ಲೇ ಇದ್ರೂನು ನೀವ್ ಹೆಂಗೆ ಇದ್ರೂನು
ಒಮ್ಮೆಯಾದ್ರೂ ಬಂದು ಕೇಳಿ ನಮ್ಮ ಗೋಳನ್ನು
ಮಾಜಿ ಆದ ಮೇಲೆ ನೀವು ಮರ್ತ್ರಿ ನಮ್ಮನ್ನು...
ಥೂ...ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು
ರೈತರ ಗೋಳಿಗೆ ಇಲ್ಲ ಮುಲಾಮು ...
ತುಂಬಾ ಮಳೆ ಬರತ್ತೆ ಅಂತ ಅನ್ಕೊಂಡಿದ್ದೆ ನಾನು ಆಕಾಶಾನ ನೋಡಿ...
ಗುಡುಗು ಸೌಂಡು ಮಾಡಿಕೊಂಡು ಮಳೆ ಬರೋ ಹಾಗೆ ಇತ್ತು ಕಪ್ಪು ಮೋಡದಲ್ಲಿ...
ಯಾಕೋ ಏನೋ ನಮ್ಮ ದೇವ್ರು ಕರುಣೆ ತೋರ್ಸೋದ್ ಬಿಟ್ಬುಟ್ಟವ್ನೆ
ಮಳೆ ಬರೋ ಆಸೆ ತೋರ್ಸಿ ಸೈಲೆಂಟಾಗಿ ಹೋಗ್ತಾ ಅವನೇ...
ನಾನೂ ಈ ವರ್ಷ ಬ್ಯಾಂಕು ಲೋನು ತೀರ್ಸೋಕಾಗಿಲ್ಲ...
ಆಗ್ಲೇ ಅಸಲಿಗಿಂತ ಇಂಟರೆಸ್ಟು ಜಾಸ್ತಿ ಆಯ್ತಲ್ಲ...
ಯಾರಿಗ್ಹೆಳೋಣ ನಮ್ಮ ಲೋನು ಪ್ರಾಬ್ಲೆಮ್ಮು...
ಲೋನು ತೀರ್ಸೋಕಾಗ್ದೆ ನಾನು ಡ್ರಿಂಕಿಂಗ್ ಪಾಯ್ಸನ್ನು....
ಮಳೆ ಬರದೆ ಇದ್ರೆ ಏನು ಪಂಪು ಸೆಟ್ಟು ಹಾಕಿಸಿಕೊಳ್ಳಿ ಸಾಲ ಕೊಡ್ತಿವಂದ್ರು
ಸಾಲಕ್ಕಾಗಿ ಬ್ಯಾಂಕಿನ್ ಸುತ್ತ ಹಗಲು ರಾತ್ರಿ ಬಸ್ಸಿನಲ್ಲಿ ಓಡಾಡ್ಕೊಂಡು ಇದ್ವಿ..
ಅಂತೂ ಇಂತೂ ಸಾಲ ಮಾಡಿ ಪಂಪು ಸೆಟ್ಟು ಹಾಕಿಸಿಕೊಂಡೆ...
ಎಲ್ಲಾ ರೆಡಿ ಮಾಡಿ ನಾನು ಉಳೋದಕ್ಕೆ ಕಾಯ್ಕೊಂಡಿದ್ದೆ...
ಎಲ್ಲಾ ಮಾಡಿದ್ರು ನೀರು ಬರ್ತಾ ಇಲ್ಲ ಪಂಪು ಸೆಟ್ಟಲ್ಲಿ..
ಆಮೇಲ್ ಗೊತ್ತಾಯ್ತು ಕರೆಂಟ್ ಇರೋದೇ ಇಲ್ಲ ನಮ್ಮ ಊರಲ್ಲಿ....
ಯಾರಿಗ್ಹೆಳೋಣ ನಮ್ಮ ಕರೆಂಟ್ ಪ್ರಾಬ್ಲೆಮ್ಮು...
ಎಲ್ಲಾ ಹಳ್ಳಿಲೂ ಇದೆ ಸೇಮು ಪ್ರಾಬ್ಲೆಮ್ಮು...
ಹಾಗೋ ಹೀಗೋ ನೀರು ಬಂದ್ರೆ ಗೊಬ್ರಕ್ಕಾಗಿ ನಿಲ್ಲಬೇಕು ಕ್ಯೂನಲ್ಲಿ ನಾವು
ಕಷ್ಟ ಪಟ್ಟು ಗೊಬ್ರ ತಗೊಂಡ್ ಬೆವ್ರು ಸುರ್ಸಿ ದುಡೀತಿವಿ ಹೊಲದಲ್ಲಿ ನಾವು...
ಒಳ್ಳೆ ಬೆಳೆ ಸಾಕು ನಂಗೆ ತೀರ್ಸೋದಕ್ಕೆ ನನ್ನ ಲೋನು...
ಆಮೇಲೇನು ಆಯ್ತು ಅಂತ ನಿಮಗೆ ನಾನು ಹೆಂಗೆ ಹೇಳ್ಲಿ..
ಮಾರ್ಕೆಟ್ಟಿಗೆ ಹೋದ್ರೆ ನಂಗೆ ಒಳ್ಳೆ ಬೆಲೆ ಸಿಗ್ಲಿಲ್ಲ ಕಣ್ರೀ...
ದಲ್ಲಾಳಿನೆ ಎಲ್ಲಾ ಪ್ರಾಫಿಟ್ ಮಾಡ್ಬೇಕಂತ ನೋಡ್ತಾರೆ ಕಣ್ರೀ....
ಯಾರಿಗ್ಹೆಳೋಣ ನಮ್ಮ ನೆಕ್ಷ್ತು ಪ್ರಾಬ್ಲೆಮ್ಮು...
ರೈತರ ಲೈಫಿಗೆ ಇಲ್ಲ ಖಾಯಂ ಸಲ್ಯೂಷನ್ನು
Comments
ಉ: ರೈತರ ಗೋಳಿಗೆ ಇಲ್ಲ ಮುಲಾಮು
In reply to ಉ: ರೈತರ ಗೋಳಿಗೆ ಇಲ್ಲ ಮುಲಾಮು by sathishnasa
ಉ: ರೈತರ ಗೋಳಿಗೆ ಇಲ್ಲ ಮುಲಾಮು
ಉ: ರೈತರ ಗೋಳಿಗೆ ಇಲ್ಲ ಮುಲಾಮು
In reply to ಉ: ರೈತರ ಗೋಳಿಗೆ ಇಲ್ಲ ಮುಲಾಮು by makara
ಉ: ರೈತರ ಗೋಳಿಗೆ ಇಲ್ಲ ಮುಲಾಮು
ಉ: ರೈತರ ಗೋಳಿಗೆ ಇಲ್ಲ ಮುಲಾಮು
In reply to ಉ: ರೈತರ ಗೋಳಿಗೆ ಇಲ್ಲ ಮುಲಾಮು by ಗಣೇಶ
ಉ: ರೈತರ ಗೋಳಿಗೆ ಇಲ್ಲ ಮುಲಾಮು
ಉ: ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ
In reply to ಉ: ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ by shashikannada
ಉ: ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ
ಉ: ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ
In reply to ಉ: ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ by sumangala badami
ಉ: ರೈತರ ಗೋಳಿಗೆ ಇಲ್ಲ ಮುಲಾಮು - ಲೈಫು ಇಷ್ಟೇನೆ