ರೈಲು ಪ್ರಯಾಣದ ಅವಾಂತರ

ರೈಲು ಪ್ರಯಾಣದ ಅವಾಂತರ

ಎಲ್ಲಾ ಸಂಪದ ಬಳಗದವರಿಗೆ ನನ್ನ ನಮಸ್ಕಾರಗಳು ಕಣ್ರೀ 7 ನೇ ತಾರೀಕು ಕೆಲಸದ ನಿಮಿತ್ತ ದೆಹಲಿಯ ಕಡೆ ಹೊರಟಿದ್ದೆ, ಈ ಭಾರಿ ವಿಮಾನ ಏರುವುದು ಬೇಡ ಎಂದು ನಿರ್ದರಿಸಿ, ರೈಲಿನಲ್ಲಿ ಪ್ರಯಾಣಕ್ಕಾಗಿ ಟಿಕೆಟ್ ನ್ನು ತತ್ಕಾಲ್ ನಲ್ಲಿ ಸಂಪರ್ಕ್ ಕ್ರಾಂತಿ ಎಕ್ಸ್ಪ್ರೆಸ್ ನಲ್ಲಿ ಬುಕ್ ಮಾಡಿದೆ ನಾನು ಒಬ್ಬ ಹೋಗುತ್ತಿದ್ದರಿಂದ ಸೈಡ್ ಲೋಯರ್ ಬೆಸ್ಟ್ ಎಂದು ನಾನೇ ಸೈಡ್ ಲೋಯರ್ ಬುಕ್ ಮಾಡಿದೆ. ಅದರಂತೆ ನಾನು ಯಶವಂತ್ ಪುರಕ್ಕೆ ಹೋಗಿ ರೈಲ್ ಹತ್ತಿದೆ ಆ ರೈಲ್ ಹುಬ್ಬಳ್ಳಿಯ ಮಾರ್ಗವಾಗಿ ಹೊರಟ್ಟಿತ್ತು. ರೈಲು ಮದ್ಯಾಹ್ನ 1:30 ಕ್ಕೆ ಬಿಟ್ಟಿತು ನನ್ನ ಪಕ್ಕದಲ್ಲಿ ಬೆಂಗಳೂರುನವರೇ ಇಬ್ಬರು ಹುಡುಗರು ಇದ್ದರು ಅವರ ಪರಿಚಯದಿಂದ ಮಾತನಾಡುತ್ತಾ ಹೊರಟೆವು ನಮ್ಮ ಬೋಗಿ 3A (ಏಸಿ ಕೋಚ್ ) ಆಗಿತ್ತು ಸಾಕಷ್ಟು ಮಹಿಳೆಯರು ಸಹ ಇದ್ದರು. ಎಲ್ಲರ ಟಿಕೆಟ್ ವೀಕ್ಷಿಸಿದ ಟಿ.ಟಿ ನಮ್ಮ ನಮ್ಮ ಆಸನ ನಿಗದಿಪದಿಸುತ್ತಾ ಬರುತ್ತಿದ್ದರು, ನಾನು ಬುಕ್ ಮಾಡಿದ ಆಸನ ಕಿಟಕಿಯ ಕಡೆ ಸೈಡ್ಗೆ ಆದರೆ ಅಲ್ಲಿ ನೋಡಿದರೆ ಮದ್ಯ ಸೀಟು ಇತ್ತು ಹೋಗಲಿ ಬಿಡಿ ಇಬ್ಬರು ಕನ್ನಡ ಗೆಳೆಯರಿದ್ದಾರೆ ಎಂದು ಸುಮ್ಮನಾದೆ. ಆದರೆ ಒಬ್ಬ ಮುದಕಿಯು ಲೋವರ್ ಸಿಟ್ ಬುಕ್ ಮಾಡಿದ್ದರೆ ಅಲ್ಲಿ ನೋಡಿದರೆ ಮೇಲಿನ ಸೀಟು ಇತ್ತು. ಅದೇ ತರ ನೋಡುತ್ತಾ ಹೋದರೆ ನಾವು ಕೇಳಿ ನಿಗದಿಪಡಿಸಿದ ಆಸನ ನಮಗೆ ಇರಲಿಲ್ಲ. ನನ್ನ ಗೆಳೆಯನ ಸೀಟು ಕೆಳಗೆ ಇದ್ದದ್ದರಿಂದ ಅಜ್ಜಿಗೆ ಕೆಳಗಿನ ಆಸನ ನಾವೇ ಕೊಟ್ಟೆವು. ಹುಬ್ಬಳಿ ತಲುಪುವ ಹೊತ್ತಿಗೆ ರಾತ್ರಿಯಾಗಿತ್ತು ಎಲ್ಲರು ಮಲಗಲು ತಯಾರಿ ನಡೆಸುತ್ತಿದ್ದರು ಕೆಲವರು ಮಲಗಿದ್ದರು. ಅಷ್ಟರಲ್ಲಿ ಮತ್ತೊಬ್ಬ ಟಿ.ಟಿ ಬಂದ ಅವರು ಬಂದದ್ದೆ ನಿಮ್ಮ ಆಸನಗಳಲ್ಲಿ ನೀವು ಸರಿಯಾಗಿ ಕುಳಿತಿಲ್ಲ ಸೀಟು ಬದಲಿಸಬೇಕು ಎಂದು ಹೇಳುತ್ತಾ ಎಲ್ಲರನ್ನು ಸಹ ಅದಲು ಬದಲು ಮಾಡುತ್ತಾ ಹೊರಟೆವು ಕಾರಣ ಕೇಳಿದಾಗ ನೀವು ಕೆಂಪು ಮಾರ್ಕಿನ ನಂಬರ್ ಪ್ರಕಾರ ಕುಳಿತಿದ್ದಿರಾ ಅದು ತಪ್ಪು ಕಪ್ಪು ಬಣ್ಣದಲ್ಲಿ ನಮೂದಿಸಿದ ನಂಬರ್ ಪ್ರಕಾರ ಕುಳಿತುಕೊಳ್ಳಬೇಕು ಅಥವಾ ಮಲಗಬೇಕು ಎಂದರು ಅದರಂತೆ ಎದ್ದು ಬಿದ್ದು ಆಸನಗಳನ್ನು ಎಲ್ಲರು ಸಹ ಬದಲಿಸಿದರು. ನಾನು ಸಹ ಆಸನ ಬದಲಿಸಿದೆ ಆಗ ನನಗೆ ಕೆಳಗಿನ ಆಸನ ಸಿಕ್ಕಿತು. ಎಂಗೋ ಆ ರಾತ್ರಿ ಕಳೆಯಿತು. ಬೆಳಿಗ್ಗೆ ಪೂನ ತಲುಪಿದೆವು ಆಗ ಮತ್ತೊಬ್ಬ ಟಿ.ಟಿ ಬಂದು ರಗಳೆ ತೆಗೆದ ನೀವು ನಿಮ್ಮ ನಿಮ್ಮ ಆಸನ ಬಿಟ್ಟು ಬೇರೆಯವರ ಆಸನದಲ್ಲಿ ಕುಳಿತಿದ್ದಿರ ಎದ್ದೇಳಿ ಎನ್ನುತ್ತಾ ರಾಗ ತೆಗೆದ ನಾವು ಎಲ್ಲಾ ಕಥೆಯನ್ನು ವಿವರಿಸಿದೆವು ಇಲ್ಲ ಅದು ತಪ್ಪು ನೀವು ಕೆಂಪು ಬಣ್ಣದಲ್ಲಿ ನಮೂದಿಸಿದ ನಂಬರಿನ ಆಸನದಲ್ಲಿಯೇ ಕುಳಿತುಕೊಳ್ಳಬೇಕು ಅವನ್ಯಾವನೋ ಟಿ.ಟಿ ಹೇಳಿದ ಅಂತ ಕುಳಿತಿದ್ದಿರಾ, ಅವನು ಎಂತಾ ತಪ್ಪು ಮಾಡಿದ್ದಾನೆ ಸರ್ಕಾರಕ್ಕೆ ಗೊತ್ತಾದರೆ ಮನೆಗೆ ಹೋಗಬೇಕು ಅವನು ಎಂದು ಮತ್ತೆ ನಮ್ಮೆಲ್ಲರನ್ನ ಬದಲಿಸಿದ. ಈ ರೀತಿಯಾಗಿ ನಮ್ಮ ಭಾರತ ಸರ್ಕಾರ ಮತ್ತು ಅಧಿಕಾರಿಗಳು ನಿರ್ಲಕ್ಷೆ ತೋರಿಸಿದರೆ ಪ್ರಯಾಣಿಕರ ಗತಿ ಏನು ಅಂತ.
Rating
No votes yet

Comments