ರೈಲ್ವೆ ಇಂಜಿನ್ ಹೆಸರಿಸುವ ರೀತಿ

ರೈಲ್ವೆ ಇಂಜಿನ್ ಹೆಸರಿಸುವ ರೀತಿ

ರೈಲ್ವೆ ಇಂಜಿನ್ ಗಳ ಮುಂದಿನ ಭಾಗ ನೀವು ಗಮನಿಸಿದ್ದೀರಾ? ಗಮನಿಸಿದ್ದರೆ ನೀವು WDM-2 ತರಹದ ಹೆಸರುಗಳನ್ನು ನೋಡಿದ್ದೀರಾ? ಇಂತ ಹೆಸರುಗಳು ರೈಲ್ವೆ ಇಂಜಿನ್ ಗಳನ್ನು ಗುರುತಿಸಲು ಬರೆಯುತ್ತಾರೆ. ಅಂದ ಹಾಗೆ ಅವುಗಳನ್ನು ಹೆಸರಿಸಲು ರೀತಿನೀತಿ(naming-convention) ಇವೆ. ಭಾರತೀಯ ರೈಲ್ವೆಗಳಲ್ಲಿ ಇಂತಹ ಹೆಸರುಗಳನ್ನು ಕಾಣಬಹುದು.

ರೈಲ್ವೆ ಇಂಜಿನ್ ಗಳನ್ನು ಹೆಸರಿಸುವ ರೀತಿ ಹೀಗಿದೆ.
'[gauge][power][load][series][subtype][suffix]'

ಮೊದಲನೆಯದು [gauge] ಗೇಜ್ ಮಾಹಿತಿ. ಇಂಜಿನ್ ಯಾವ ಗೇಜ್ ನಲ್ಲಿ ಉಪಯೋಗಿಸುತ್ತಾರೆ ಎಂಬುದರ ಬಗ್ಗೆ. ಇದರ ವಿವರ ಹೀಗಿದೆ.
W = Broad Gauge
Y = Meter Gauge
Z = Narrow Gauge(೨ ಅಡಿ ೬ ಅಂಗುಲ)
N = Narrow Gauge (೨ ಅಡಿ)
---------------------------------------------------------------------------------------------------------------------
ಎರಡನೆಯದು [power]. ಇದು ಇಂಜಿನ್ ಅಲ್ಲಿ ಬಳಕೆಯಾಗುವ ಶಕ್ತಿ ಮೂಲದ ಬಗ್ಗೆ. ಇದರ ವಿವರ ಹೀಗಿದೆ.
D = Diesel
C = DC traction
A = AC traction
CA = Dual-power AC/DC traction
B = Battery electric(ವಿರಳ)
---------------------------------------------------------------------------------------------------------------------
ಮೂರನೆಯದು [load]. ಇದು ರೈಲ್ವೆ ಇಂಜಿನ್ ಯಾವುದಕ್ಕೆ ಬಳಸುತ್ತಾರೆ ಎಂಬುದರ ಬಗ್ಗೆ. ಇದರ ವಿವರ ಹೀಗಿದೆ.
M = Mixed Traffic
P = Passenger(ಪ್ರಯಾಣಿಕ)
G = Goods
S = Shunting
L = Light Duty (ಉಪಯೋಗದಲ್ಲಿಲ್ಲ)
U = Multiple Unit (EMU/ DEMU)
R = Railcar
---------------------------------------------------------------------------------------------------------------------
ನಾಲ್ಕನೆಯದು [series]. ಮೊದಲು ಕಾಲಕ್ರಮದ ಪ್ರಕಾರ ಉಪಯೋಗಿಸುತ್ತಿದ್ದರು. ಆದರೆ ಇತ್ತೀಚಿಗೆ ಇಂಜಿನ್ ಶಕ್ತಿಯನ್ನು ಬಿಂಬಿಸಲು ಬಳಸುತ್ತಾರೆ(ಅಶ್ವಶಕ್ತಿಯಲ್ಲಿ). ೨೦೦೨ ರಿಂದ ಇದು ಬಳಕೆಯಲ್ಲಿದೆ ಮತ್ತು ಪ್ರಯಾಣಿಕ ಡೀಸೆಲ್, ಗೂಡ್ಸ್ ಅಥವಾ ಮಿಶ್ರ ಇಂಜಿನ್ಗಳಲ್ಲಿ ಚಾಲ್ತಿಯಲ್ಲಿದೆ. ಇದು WDM-1 ಅಥವಾ WDM-2 ಇಂಜಿನ್ಗಳಿಗೆ ಅನ್ವಯಿಸುವುದಿಲ್ಲ. ಇದರ ವಿವರ ಹೀಗಿದೆ.
3- ೩೦೦೦hp ಗಿಂತ ಮೇಲೆ ಮತ್ತು ೪೦೦೦ಕ್ಕಿಂತ ಕೆಳಗೆ
4- ೪೦೦೦hp ಗಿಂತ ಮೇಲೆ ಮತ್ತು ೫೦೦೦ಕ್ಕಿಂತ ಕೆಳಗೆ
5- ೫೦೦೦hp ಗಿಂತ ಮೇಲೆ ಮತ್ತು ೬೦೦೦ಕ್ಕಿಂತ ಕೆಳಗೆ
---------------------------------------------------------------------------------------------------------------------
ಐದನೆಯದು [subtype]. ಇದು ಇಂಜಿನ್ ಶಕ್ತಿಯ ಸಣ್ಣ ಏರಿಕೆಯನ್ನು ಗುರುತಿಸಲು ಬಳಸುತ್ತಾರೆ. ಇದರ ವಿವರ ಹೀಗಿದೆ.
A-ಅಂದರೆ ೧೦೦hp.
B-ಅಂದರೆ ೨೦೦hp.
ಉದಾ: 3C = ೩೩೦೦hp ಹಾಗೆ.
ಕೆಲವು ಬಾರಿ ಇಂಜಿನ್ ಗಳ ಬ್ರೇಕ್ ತಂತ್ರಜ್ಞಾನ ಗುರುತಿಸಲು ಸಹ ಉಪಯೋಗಿಸುತ್ತಾರೆ.
ಉದಾ: A ಅಂದರೆ ಕೆಲವು ಇಂಜಿನ್ ಗಳು air-brake ಮತ್ತು vaccum-brake ಎರಡನ್ನೂ ಹೊಂದಿರುತ್ತವೆ.
---------------------------------------------------------------------------------------------------------------------
ಆರನೆಯದು ಮತ್ತು ಕೊನೆಯದು [suffix]. ಇದನ್ನು ಇಂಜಿನ್ ಗಳ gear-ratio ಅಥವಾ ವಿಶೇಷ brake-systemಗಳನ್ನು ಗುರುತಿಸಲು ಬಳಸುತ್ತಾರೆ.
---------------------------------------------------------------------------------------------------------------------
ಇಂಜಿನ್ ಉದಾಹರಣೆ: WDP-3A
W- broad-gauge ನಲ್ಲಿ ಚಲಿಸುವ ಇಂಜಿನ್ .
D- ಶಕ್ತಿಯ ಮೂಲ ಡೀಸೆಲ್ .
P- ಪ್ರಯಾಣಿಕ ರೈಲ್ವೆ ಇಂಜಿನ್(Passenger).
3A- ೩೧೦೦ ಅಶ್ವಶಕ್ತಿಯ ಇಂಜಿನ್.
---------------------------------------------------------------------------------------------------------------------
ಕೆಲವು ರೈಲ್ವೆ ಇಂಜಿನ್ ಗಳು:
೧) ಪ್ಯಾಸೆಂಜರ್ ರೈಲುಗಳ ಅಶ್ವಶಕ್ತಿ ೨೦೦೦-೨೫೦೦ರ ಹತ್ತಿರ ಇರುತ್ತದೆ. ಉದಾ:WDP-2A
೨) ಎಕ್ಸಪ್ರೆಸ್ ರೈಲುಗಳ ಅಶ್ವಶಕ್ತಿ ೩೦೦೦ಗಿಂತ ಮೇಲೆ ಇರುತ್ತದೆ. ಉದಾ: WDP-3A (ಬೆಂಗಳೂರು-ಮಂಗಳೂರು ರೈಲ್ವೆ ಇಂಜಿನ್ ಇದೆ ಮಾದರಿಯದ್ದು)
೩) ಜನಶತಾಬ್ದಿ, ಶತಾಬ್ದಿ ಮತ್ತು ರಾಜಧಾನಿ ರೈಲುಗಳ ಅಶ್ವಶಕ್ತಿ ೪೦೦೦ಗಿಂತ ಮೇಲೆ ಇರುತ್ತದೆ. WAP-4C. ಇಲ್ಲಿ A ಅಂದರೆ AC traction.
೪) ಗೂಡ್ಸ್ ರೈಲುಗಳ ಅಶ್ವಶಕ್ತಿ ೫೦೦೦ಗಿಂತ ಮೇಲೆ ಇರುತ್ತದೆ.

****************************************
ಮೂಲ ಮಾಹಿತಿ: IRFCA

ಚಿತ್ರ ಕೃಪೆ: IRFCA ಚಿತ್ರ ತಾಣ

EMU/DEMU ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

Railcar/Railbus ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

ಪದಗಳ ಮಾಹಿತಿ:
೧) IRFCA
೨) ವಿಕಿಪೀಡಿಯಾ
****************************************

Rating
No votes yet

Comments