ಲಿನಕ್ಸಾಯಣ - ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
ಲಿನಕ್ಸ ಹ್ಯಾಗೆ ಇನ್ಸ್ಟಾಲ್ ಮಾಡೋದು ಅಂತ ನೋಡಿದ್ವಿ, ಅದರಲ್ಲಿ ಹ್ಯಾಗೆ ಕೆಲ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡಿ ಉಪಯೋಗಿಸೋದು ಅಂತಾನೂ ನೋಡಿದ್ವಿ ಅಲ್ವಾ? ಈಗ ಲಿನಕ್ಸ್ ನ ಸ್ವಲ್ಪ ಹೊಳಹೊಕ್ಕಿ ಅದರಲ್ಲೇನಿದೆ. ಅದು ಹ್ಯಾಗೆ ಕೆಲಸ ಮಾಡತ್ತೆ ಅನ್ನೋದನ್ನ ನೋಡೋಣ.
ಲಿನಕ್ಸ್ ಇಂದು ಅನೇಕ ಹಾರ್ಡ್ವೇರ್ ಗಳಲ್ಲಿ ಬಳಕೆಯಲ್ಲಿದೆ. ಅಂದ್ರೆ, ಇದನ್ನ ಬರೀ ಡೆಸ್ಕ್ಟಾಪ್, ಲ್ಯಾಪ್ಟಾಪ್ ಅಥವಾ ಸರ್ವರ್ಗಳಲ್ಲಿ ಮಾತ್ರ ಉಪಯೋಗಿಸೋದಿಲ್ಲ. ಅದನ್ನ ಮೊಬೈಲ್ ಫೋನ್ಗಳಲ್ಲಿ, ಎಂಬೆಡೆಡ್ ಸಿಸ್ಟಂ ಗಳಲ್ಲಿ ಕೂಡ ಉಪಯೋಗಿಸ್ತಾರೆ. ಆದ್ರೆ ಇವೆಲ್ಲವುಗಳಲ್ಲೂ ಅದು ಕೆಲಸ ಮಾಡ್ಲಿಕ್ಕೆ ಶುರು ಮಾಡೋದು ಮಾತ್ರ ಒಂದೇ ತರ. ಲಿನಕ್ಸ್ ನಿಮ್ಮ ಕಂಪ್ಯೂಟರ್ನಲ್ಲಿ ಕೆಲಸ ಮಾಡ್ಲಿಕ್ಕೆ ತನ್ನನ್ನ ತಾನು ಸಿದ್ದ ಪಡಿಸಿಕೊಳ್ಳೋ ಒಂದು ಕ್ರಿಯೆಯನ್ನ "ಬೂಟಿಂಗ್ ಪ್ರಾಸೆಸ್ (booting process)"ಅಂತ ಕರೀತೀವಿ.
ನಾನು ಇದರ ಬಗ್ಗೆ ಹೆಚ್ಚಿನದನ್ನ ವಿವರಿಸೋದಕ್ಕೆ ಮುಂಚೆ ಲಿನಕ್ಸಾಯಣ -೪- ಬಯೋಸ್ (BIOS) ಲೇಖನವನ್ನೋಮ್ಮೆ ಓದಿ ಬಿಡಿ.ನಂತರ ನಿಮಗೆ, ಹಾರ್ಡ್ದಿಸ್ಕ್ ನ ಮಾಸ್ಟರ್ ಬೂಟ್ ರೆಕಾರ್ಡ್ (MBR), ಬೂಟ್ ಲೋಡರ್, ಲಿನಕ್ಸ ನ ಹೃದಯ ಭಾಗವಾದ ಕರ್ನೆಲ್ (Kernel),ಯೂಸರ್ ಸ್ಪೇಸ್ (init)ಗಳ ಬಗ್ಗೆ ತುಂಬಾ ಸುಲಭ ಎನ್ನಿಸೋ ಹಾಗೆ ಮಾಹಿತಿ ನೀಡ್ತೇನೆ.
ಈ ಕೆಳಗಿನ ಚಿತ್ರದ ಕಡೆಗೊಮ್ಮೆ ಕಣ್ಣಾಯಿಸಿ. ಇದು ನನ್ನ ಮೋಟೋಮಿಂಗ್ ಅ೧೨೦೦ ಮೊಬೈಲ್ ಫೋನ್. ಇದು ಕಾರ್ಯನಿರ್ವಹಿಸೋದು ಕೂಡ ಲಿನಕ್ಸ್ ತಂತ್ರಾಂಶದಿಂದಲೆ. ಕೆಳಗಿನ ಚಿತ್ರದಲ್ಲಿ ನನ್ನ ಫೋನಿನಲ್ಲಿ ಇನ್ಸ್ಟಾಲ್ ಆಗಿರೋ ಲಿನಕ್ಸ್ ನ ಬೋಟ್ ಲೋಡರ್ (Boot loader) ಅಂದ್ರೆ ನಿಮಗೆ ಬೇಕಿರುವ ಆಪರೇಟಿಂಗ್ ಸಿಸ್ಟಂ (ವಿಂಡೋಸ್/ಲಿನಕ್ಸ್) ಅನ್ನ ನಿಮ್ಮ ಕಂಪ್ಯೂಟರ್ ನಲ್ಲಿ ಲೋಡ್ ಮಾಡ್ಲಿಕ್ಕೆ ಉಬುಂಟು ಇನ್ಸ್ಟಾಲ್ ಆಗಿರೋ ನಿಮ್ಮ ಕಂಪ್ಯೂಟರ್ ನಲ್ಲಿ ಬಯೋಸ್ ನ ನಂತರ ಬರತ್ತಲ್ಲ ಆ ಒಂದು ಸ್ಕ್ರೀನ್. ಈಗ ತಿಳೀತಾ ಒಂದು ಸಲ ಲಿನಕ್ಸ್ ಹ್ಯಾಗೆ ಕೆಲಸ ಮಾಡತ್ತೆ ಅಂತ ತಿಳಿದ್ಕೊಂಡ್ರೆ ಅದರ ಜೊತೆ ಡೆಸ್ಕ್ಟಾಪ್ ಮೇಲೇಕೆ, ಅದನ್ನ ಉಪಯೋಗಿಸ್ತಿರೋ ಸರ್ವರ್ ನಲ್ಲಿನ ದೋಷಗಳನ್ನೂ ನಾವು ಕಂಡು ಹಿಡಿದು ಪರಿಹರಿಸ ಬಹುದು.
ನಿಮಗೆ, ಈ ಒಂದು ವಿಭಾಗದಲ್ಲಿ ಏನಾದ್ರೂ ಪ್ರಶ್ನೆಗಳೂ ಆಗಲೇ ತಲೆಯಲ್ಲಿದ್ದರೆ ಕಾಮೆಂಟ್ ಹಾಕಿ ಅವುಗಳನ್ನ ಉತ್ತರಿಸುವ ಕೆಲಸವನ್ನ ಮುಂದಿನ ಸಂಚಿಕೆಗಳಲ್ಲಿ ಮಾಡ್ತೇನೆ.
Comments
ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
In reply to ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧ by ASHOKKUMAR
ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
In reply to ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧ by Aravinda
ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧