ಲಿಯಾಂಡರ್-ಭೂಪತಿ ಜುಗಲ್‌ಬಂದಿ

ಲಿಯಾಂಡರ್-ಭೂಪತಿ ಜುಗಲ್‌ಬಂದಿ

ನನಗೆ ಟೆನಿಸ್ ಬಗ್ಗೆ ಆಸಕ್ತಿ(ಆಡಲು ಅಲ್ಲ :) ) ಸುರುವಾಗಿದ್ದು, ಆನಂದ್ ಮತ್ತು ವಿಜಯ್ ಅಮೃತ್‌ರಾಜ್ ಕಾಲದಲ್ಲಿ. ಆಟ ಅರ್ಥವಾಗದಿದ್ದರೂ, ಪೇಪರ್‌ನಲ್ಲಿ ‘ಒಂದನೆಯ ಸುತ್ತಿನಲ್ಲಿ ಜಯ’ ‘ಎರಡನೆಯ ಸುತ್ತಿನಲ್ಲಿ ಸೋಲು,’ ನೋಡಿ ಅಷ್ಟಾದರೂ ಬಂದರಲ್ಲಾ ಎಂದು ಸಮಾಧಾನಿಸುತ್ತಿದ್ದೆ.

ನಂತರ ಟೆಲಿವಿಷನ್ ಬಂತು. ಆಟವೂ ಅರ್ಥವಾಗತೊಡಗಿತು.
ಟಿ.ವಿ., ಬೆಕರ್, ಮೆಕೆನ್ರೊ, ಈ ಆಟವನ್ನು ಭಾರತದ ಮನೆಮನೆಗೂ ತಲುಪಿಸಿದರು ಅನ್ನಬಹುದು.
ಮೆಕೆನ್ರೊ ಬಹಳ ತರಲೆ, ಜಗಳಗಂಟ. ಎದುರಾಳಿ, ರೆಫ್ರಿ ಬಿಡಿ, ಬಾಲ್‌ಬಾಯ್‌ಗಳ ಜತೆಯೂ ಜಗಳವಾಡುತ್ತಿದ್ದನು. ಆದರೂ ಅವನು ಎಲ್ಲರಿಗೂ ಇಷ್ಟವಾಗಿದ್ದನು.

ನಂತರ ಲಿಯಾಂಡರ್ ಮತ್ತು ಭೂಪತಿ ಡಬಲ್ಸ್ ಜೋಡಿಯಾದರು ನೋಡಿ- ಆಹಾ..
ಅದು ಆಟವಲ್ಲ.. ಸಂಗೀತದ ಜುಗಲ್‌ಬಂದಿಯಂತೆ ಇತ್ತು. ಆಸ್ಟ್ರೇಲಿಯಾದ ಜೋಡಿ ಇವರಿಗಿಂತಲೂ ಚೆನ್ನಾಗಿ ಆಡಿರಬಹುದು. ನಮ್ಮ ದೇಶದವರಾದ್ದರಿಂದ ನಮಗೆ ಲೀ-ಹೇಶ್ ಜೋಡಿಗೆ ಸರಿಸಾಟಿ ಯಾರಿಲ್ಲ ಎಂದೇ ಲೆಕ್ಕ. ಅದಕ್ಕೆ ಸರಿಯಾಗಿ ಒಂದೊಂದೇ ಗ್ರಾಂಡ್‌ಸ್ಲಾಮ್ ವಿನ್ ಆಗುತ್ತಾ ಬಂದರು.

ಯಾರು ತಪ್ಪು ಮಾತನಾಡಿದರೋ, ಎಲ್ಲಿ ಅಹಂ ಅಡ್ಡಬಂತೋ-ಜೋಡಿ ಮುರಿದುಬಿತ್ತು.
ಲಾಸ್ ಆದುದು ಭಾರತಕ್ಕೆ. ತುಂಬಲಾರದ ನಷ್ಟ.

ಪ್ರತೀ ಟೆನಿಸ್ ಪ್ರೇಮಿಯಲ್ಲಿ ಇನ್ನೂ ಆಸೆ ಇದೆ- ಸಮಯ ಮೀರಿದ್ದರೂ, ತಮ್ಮ ಅಹಂ ಬಿಟ್ಟು, ತಾವು ಒಬ್ಬರಿಗೊಬ್ಬರು ಬೈದುಕೊಂಡುದ್ದನ್ನು ಮರೆತು, ಭೂಪತಿ-ಲಿಯಾಂಡರ್ ಜೋಡಿ ಮತ್ತೆ ಒಂದಾಗಿ ಆಡಲಿ. ಮೊದಲು ಸ್ನೇಹ ಹಸ್ತ ಚಾಚಿದವ- ಸೋತು ಜತೆಯಾಗಲು ಬಂದ-ಎಂದಲ್ಲ.ಅದು ಇಬ್ಬರ ಗೆಲವು. ಭಾರತದ ಗೆಲವು.

ಗೆಳೆಯರು ಮತ್ತೆ ಒಂದಾಗಲಿ.
-ಗಣೇಶ.

Rating
No votes yet

Comments